ಕೂಡಿಟ್ಟ ಹಣ ತಿಂದು ಹಾಕಿದ ಗೆದ್ದಲು; ರಾಘವೇಂದ್ರ ಸ್ವಾಮಿ ಮುಂದೆ ಮಹಿಳೆಗೆ ಸರ್​ಪ್ರೈಸ್ ಕೊಟ್ಟ ಸ್ಟಾರ್ ನಟ

author-image
Veena Gangani
Updated On
ಕೂಡಿಟ್ಟ ಹಣ ತಿಂದು ಹಾಕಿದ ಗೆದ್ದಲು; ರಾಘವೇಂದ್ರ ಸ್ವಾಮಿ ಮುಂದೆ ಮಹಿಳೆಗೆ ಸರ್​ಪ್ರೈಸ್ ಕೊಟ್ಟ ಸ್ಟಾರ್ ನಟ
Advertisment
  • 500 ರೂ.ಗಳ ನೋಟುಗಳನ್ನು ತಿಂದು ಹಾಕಿದ್ದ ಗೆದ್ದಲು ಹುಳ
  • ಈ ಬಗ್ಗೆ ಗೊತ್ತಾಗುತ್ತಿದ್ದಂತೆ ದಂಪತಿಯ ಸಹಾಯಕ್ಕೆ ನಟ ದೌಡು
  • ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿಯೇ ಮಹಿಳೆಗೆ ಸರ್​ಪ್ರೈಸ್​

ತಮಿಳು ನಟ ರಾಘವ ಲಾರೆನ್ಸ್‌, ನಟನೆಯಲ್ಲೂ ಮಾತ್ರ ಅಲ್ಲ ತಮ್ಮ ಸಾಮಾಜಿಕ ಸೇವೆ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ರಾಘವ ಲಾರೆನ್ಸ್ ಒಬ್ಬ ನೃತ್ಯ ಕಲಾವಿದ ನಾಯಕ ಮತ್ತು ನಿರ್ದೇಶಕರಾಗಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?

publive-image

ಬಡವರಿಗೆ ಸಹಾಯ ಮಾಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ಗಾದೆಗೆ ಸಾಕ್ಷಿ ಎಂಬಂತೆ ರಾಘವ ಲಾರೆನ್ಸ್ ಸಾಭೀತುಪಡಿಸಿದ್ದಾರೆ. ಯಾವಾಗಲೂ ಬಡವರು, ನಿರಾಶ್ರಿತರ ಪರ ಸಾಕಷ್ಟು ಕೆಲಸಗಳನ್ನು ಮಾಡುತ್ತಾ ಇರುತ್ತಾರೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು, ರೈತರು, ವಿಶೇಷ ಚೇತನ ಸಾಧಕರಿಗೆ 13 ಸ್ಕೂಟರ್‌ಗಳನ್ನು ಉಡೊಗೊರೆಯಾಗಿ ನೀಡುರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

publive-image

ಈಗ ಅಂತಹದ್ದೇ ಮತ್ತೊಂದು ಕಾರ್ಯ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ, ಅವರು ಆರ್ಥಿಕ ನೆರವು ನೀಡುವ ಮೂಲಕ ಬಡ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಶಿವಗಂಗೆ ಜಿಲ್ಲೆಯ ತಿರುಪ್ಪುವನಂನ ಕುಮಾರ್ ಮತ್ತು ಅವರ ಪತ್ನಿ ಮುತ್ತು ಕರುಪ್ಪಿ ಕಾರ್ಮಿಕರು, ಅವರಿಗೆ ಮೂವರು ಮಕ್ಕಳಿದ್ದಾರೆ. ಕೆಲಸ ಮಾಡಿ ತಾವು ದುಡಿದ ಹಣವನ್ನು ಉಳಿಸುತ್ತಿದ್ದರು. ಕೆಲವು ದಿನಗಳಿಂದ ಸಂಪಾದಿಸಿದ ಹಣವನ್ನು ಹುಂಡಿಯಲ್ಲಿ ಇಟ್ಟಿದ್ದರು. ಹೀಗೆ ಕೂಡಿಟ್ಟ ಹಣದಲ್ಲಿ ಮಕ್ಕಳ ಕಿವಿಯೋಲೆ ತೆಗೆದುಕೊಳ್ಳಬೇಕು ಅಂತ ಓಪನ್​ ಮಾಡಿದಾಗ ದಂಪತಿಗೆ ಶಾಕ್ ಕಾದಿತ್ತು.

ಇತ್ತೀಚೆಗೆ, ನಾನು ಹುಂಡಿಯನ್ನು ಹೊರತೆಗೆದಾಗ, ಗೆದ್ದಲುಗಳು ಒಳಗೆ ಹೋಗಿ 100 ರೂ.ಗಳಲ್ಲಿ ಕೆಲವನ್ನು ತಿಂದುಹಾಕಿದ್ದವು. 500 ನೋಟುಗಳೆಲ್ಲ ಗೆದ್ದಲುಗಳು ತಿಂದಿ ಬಿಟ್ಟಿವೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದರು. ಈ ಬಗ್ಗೆ ತಿಳಿದುಕೊಂಡ ರಾಘವ ಲಾರೆನ್ಸ್ ಅವರ ಕುಟುಂಬಕ್ಕೆ ರಾಘವೇಂದ್ರ ಸ್ವಾಮಿ ಮುಂದೆಯೇ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ಪಾಕ್ ದಾಳಿಗೆ ಗೋರಂಟ್ಲು ಯೋಧ ಹುತಾತ್ಮ; ಮಧ್ಯಾಹ್ನ ಬೆಂಗಳೂರು ತಲುಪಲಿದೆ ಪಾರ್ಥಿವ ಶರೀರ


">May 8, 2025


ಗೆದ್ದಲುಗಳು ತಿಂದುಹಾಕಿದ ಲಕ್ಷ ರೂಪಾಯಿಗಳನ್ನು ಅವರಿಗೆ ನೀಡಿದ್ದಾರೆ. ಕೂಲಿ ಕಾರ್ಮಿಕರ ಕುಟುಂಬವೊಂದು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಗೆದ್ದಲುಗಳು ತಿಂದು ಹಾಕಿವೆ ಎಂಬ ಸುದ್ದಿ ನನಗೆ ಬಂದಿದೆ. ಅವರ ನೋವು ನನ್ನ ಹೃದಯವನ್ನು ಮುಟ್ಟಿತು. ಅವರು ಕಳೆದುಕೊಂಡ ಹಣವನ್ನು ಹಿಂದಿರುಗಿಸಲು ಸಾಧ್ಯವಾಗುತ್ತಿರುವುದು ಸಂತೋಷದ ಸಂಗತಿ ಎಂದು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಘವ ಲಾರೆನ್ಸ್​ ಸಹಾಯಕ್ಕೆ ಅಭಿಮಾನಿಗಳು ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಹಾಯ ಮಾಡೋದ್ರಲ್ಲಿ ಒಂದು ಕೈ ಹೆಚ್ಚು ಎಂದು ಮತ್ತೆ ರಾಘವ ಪ್ರೂವ್ ಮಾಡಿದ್ದಾರೆ ನೋಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment