newsfirstkannada.com

Om Shanti: ಪ್ರಚಂಡ ಕುಳ್ಳನ ನಿಧನಕ್ಕೆ ಗಣ್ಯರ ಕಂಬನಿ; ಗೆಳೆಯನ ಬಗ್ಗೆ ರಜನಿ ಹೇಳಿದ್ದೇನು?

Share :

Published April 16, 2024 at 3:34pm

Update April 16, 2024 at 3:57pm

  ಕನ್ನಡದ ಹಾಸ್ಯನಟ ದ್ವಾರಕೀಶ್ ಅವರ ಮನೆಯತ್ತ ಧಾವಿಸಿದ ಗಣ್ಯರು

  ಕನ್ನಡಿಗರ ಪ್ರೀತಿಯ ಪ್ರಚಂಡ ಕುಳ್ಳನ ನಿಧನಕ್ಕೆ ಸಂತಾಪ ಸೂಚನೆ

  ಬಹುಕಾಲದ ಗೆಳೆಯ ದ್ವಾರಕೀಶ್ ಅನ್ನು ಸ್ಮರಿಸಿಕೊಂಡ ರಜನಿಕಾಂತ್

ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ದ್ವಾರಕೀಶ್ ಅವರು ಇಂದು ಇಹಲೋಕ ತ್ಯಜಿಸಿ ವಿಧಿವಶರಾಗಿದ್ದಾರೆ. ಹಾಸ್ಯನಟ ದ್ವಾರಕೀಶ್ ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ರಾಜಕೀಯ ಗಣ್ಯರು, ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಂತಾಪ ಸೂಚಿಸಿದ್ದಾರೆ.

ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಅನೇಕ ಹಿರಿಯ ನಟರು ದ್ವಾರಕೀಶ್ ಅವರ ಮನೆಯತ್ತ ಧಾವಿಸುತ್ತಿದ್ದಾರೆ. ಹಿರಿಯ ನಟ ಶ್ರೀನಾಥ್, ರಮೇಶ್ ಭಟ್‌, ಗುರುಕಿರಣ್ ಸೇರಿದಂತೆ ಹಲವರು ಭೇಟಿ ನೀಡಿ ತಮ್ಮ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ದ್ವಾರಕೀಶ್ ಅವರ ಮನೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ.

ಇದನ್ನೂ ಓದಿ: ದ್ವಾರಕೀಶ್ ಆರೋಗ್ಯದಲ್ಲಿ ಏನಾಗಿತ್ತು..? ಸಾಯುವ ಕೊನೇ ಕ್ಷಣಗಳು ಹೇಗಿದ್ದವು..?

ಸೋಷಿಯಲ್ ಮೀಡಿಯಾದಲ್ಲಿ ನಟ ದ್ವಾರಕೀಶ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಕನ್ನಡಿಗರ ಪ್ರೀತಿಯ ಪ್ರಚಂಡ ಕುಳ್ಳ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಹಲವಾರು ಚಿತ್ರರಂಗದ ನಟ, ನಟಿಯರು ಓಂ ಶಾಂತಿ ಎಂದು ಟ್ಯಾಗ್ ಮಾಡುತ್ತಾ ಹಿರಿಯ ನಟ ದ್ವಾರಕೀಶ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ದ್ವಾರಕೀಶ್ ನಿಧನದ ಸುದ್ದಿ ಕೇಳಿ ಆಘಾತ ವ್ಯಕ್ತಪಡಿಸಿದ್ದಾರೆ. ನನ್ನ ಬಹುಕಾಲದ ಗೆಳೆಯ ದ್ವಾರಕೀಶ್ ಅನ್ನು ಕಳೆದುಕೊಂಡಿದ್ದು ನನಗೆ ಬಹಳ ನೋವಾಗಿದೆ. ಹಾಸ್ಯನಟರಾಗಿ ದ್ವಾರಕೀಶ್ ಅವರು ಚಿತ್ರರಂಗದ ಜರ್ನಿ ಆರಂಭಿಸಿದ್ದರು. ಇದಾದ ಮೇಲೆ ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದರು. ದ್ವಾರಕೀಶ್ ಜೊತೆ ಕಳೆದ ಹಲವು ದಿನಗಳು ನನಗೆ ನೆನಪಾಗುತ್ತಿದೆ. ದ್ವಾರಕೀಶ್ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ ಎಂದು ರಜನಿಕಾಂತ್ ಪೋಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Om Shanti: ಪ್ರಚಂಡ ಕುಳ್ಳನ ನಿಧನಕ್ಕೆ ಗಣ್ಯರ ಕಂಬನಿ; ಗೆಳೆಯನ ಬಗ್ಗೆ ರಜನಿ ಹೇಳಿದ್ದೇನು?

https://newsfirstlive.com/wp-content/uploads/2024/04/Dwarkish-Om-Shanthi.jpg

Load More