/newsfirstlive-kannada/media/post_attachments/wp-content/uploads/2025/05/Rakesh-Poojary9.jpg)
ತಮ್ಮ ಅದ್ಭುತ ಅಭಿನಯದ ಮೂಲಕವೇ ಜನಪ್ರಿಯತೆ ಪಡೆದಿಕೊಂಡಿದ್ದಾರೆ ರಾಕೇಶ್ ಪೂಜಾರಿ. ಆದ್ರೆ ಇನ್ನೂ ಬಾಳಿ ಬದುಕಬೇಕಾಗಿದ್ದ ರಾಕೇಶ್ ಪೂಜಾರಿ ನಿಧನ ಹೊಂದಿದ್ದಾರೆ. ಅವರ ನಿಧನ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ.
ಇದನ್ನೂ ಓದಿ: ಕನ್ನಡ ಕಿರುತೆರೆಯ ಖ್ಯಾತ ಕಲಾವಿದ ರಾಕೇಶ್ ಪೂಜಾರಿ ದುರಂತ ಅಂತ್ಯ; ಕಾರಣವೇನು?
ಸದ್ಯ ನಟ ರಾಕೇಶ್ ಪೂಜಾರಿ ಅವರ ಮೃತದೇಹವನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮಲ್ಪೆ ಸಮೀಪದ ಹೂಡೆಯಲ್ಲಿರುವ ಸ್ವಗೃಹದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ರಾಕೇಶ್ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ನಟ ರಾಕೇಶ್ ಪೂಜಾರಿ ಸಾವಿಗೆ ನಟಿ ರಕ್ಷಿತಾ, ಶಿವರಾಜ್ ಕೆ ಆರ್ ಪೇಟೆ, ನಯನ ಸೇರಿದಂತೆ ಸಾಕಷ್ಟು ನಟ ನಟಿಯರು ಸಂತಾಪ ಸೂಚಿಸಿದ್ದಾರೆ. ಈಗ ಶಿವರಾಜ್ ಕೆ.ಆರ್ ಪೇಟೆ, ನಟಿ ನಯನಾ, ಅನೀಶ್ ಪೂಜಾರಿ, ಅಂಬಿಕಾ ಸೇರಿದಂತೆ ಬಹುತೇಕ ಕಾಮಿಡಿ ಕಿಲಾಡಿ ಟೀಂ ಹಾಗೂ ರಾಕೇಶ್ ಗೆಳೆಯರು ಉಡುಪಿ ಕಡೆಗೆ ಹೊರಟಿದ್ದಾರೆ.
ಕಾಮಿಡಿ ಕಿಲಾಡಿನಲ್ಲಿ ವಿನ್ನರ್ ಆಗಬೇಕೆಂದು ರಾಕೇಶ್ ಹಗಲಿರುಳು ಎನ್ನದೆ ಶ್ರಮಿಸಿದ್ದರು. ಹಾಗೆಯೇ ತುಳುನಾಡಿನ ಕೊರಗಜ್ಜ ದೈವ ದೇವರಿಗೂ ಹರಕೆಯನ್ನು ಹೇಳಿಕೊಂಡಿದ್ದರು ರಾಕೇಶ್. ಅಂತೆಯೇ ಕೊರಗಜ್ಜ ದೈವದ ಅನುಗ್ರಹದಿಂದ ಗೆಲುವು ಸಾಧಿಸಿದರು. ನಟ ರಾಕೇಶ್ ಪೂಜಾರಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲದೇ ರಾಕೇಶ್ ಕನ್ನಡದಲ್ಲಿ ಪೈಲ್ವಾನ್, ಇದು ಎಂಥಾ ಲೋಕವಯ್ಯ ಮತ್ತು ತುಳುವಿನಲ್ಲಿ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೋಕ್ಕೆಲ್ ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇಷ್ಟೇ ಅಲ್ಲದೇ ವರು ಕರಾವಳಿಯ ರಿಯಾಲಿಟಿ ಶೋಗಳಾದ ಬಲೆ ತೇಲಿಪಾಲೆ, ಮೇ 22, ಸ್ಟಾರ್, ತುಯಿನಾಯೆ ಪೋಯೆ ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ. ರಾಕೇಶ್ ಅನಿರೀಕ್ಷಿತ ಸಾವಿನಿಂದ ಕಿರುತೆರೆ ಇಂಡಸ್ಟ್ರಿ ಆಘಾತಕ್ಕೆ ಒಳಗಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ