/newsfirstlive-kannada/media/post_attachments/wp-content/uploads/2025/07/gagana2.jpg)
ಈ ವಾರ ಮಹಾನಟಿ ಸೀಸನ್ 2 ಮತ್ತು ಭರ್ಜರಿ ಬ್ಯಾಚುಲರ್ಸ್ ಮಹಾಸಂಗಮ ನಡೆಯಲಿದೆ. ಒಂದೇ ವೇದಿಕೆ ಮೇಲೆ ಭರ್ಜರಿ ಬ್ಯಾಚುಲರ್ಸ್ ತಂಡ ಹಾಗೂ ಮಹಾನಟಿ ಸೀಸನ್ 2 ಟೀಮ್ ಧೂಳೆಬ್ಬಿಸಲಿದ್ದಾರೆ. ಈ ಸಂಚಿಕೆ ಶನಿವಾರ ರಾತ್ರಿ 7:30ರಿಂದ 10:30ರವರೆಗೆ ನಡೆಯಲಿದೆ.
ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..
/newsfirstlive-kannada/media/post_attachments/wp-content/uploads/2025/07/gagana3.jpg)
ಇನ್ನೂ, ಮಹಾನಟಿ ಮೂಲಕ ಸಖತ್​ ಫೇಮಸ್​ ಆಗಿದ್ದ ಗಗನಾ ಬಗ್ಗೆ ನಟ ರಮೇಶ್​ ಅರವಿಂದ್​ ​ ಮನಸಾರೆ ಹಾಡಿ ಹೊಗಳಿದ್ದಾರೆ. ಮಹಾನಟಿ, ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್, ಸದ್ಯ ಭರ್ಜರಿ ಬ್ಯಾಚುಲರ್ಸ್ ಸೀಸನ್​ 2ರಲ್ಲಿ ಮಿಂಚುತ್ತೊದ್ದಾರೆ. ಸತತವಾಗಿ ಶೋಗಳ ಮೇಲೆ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಗಗನಾ ಸಾಧನ ಬಗ್ಗೆ ರಮೇಶ್​ ಅರವಿಂದ್ ಮಾತಾಡಿದ್ದಾರೆ. ಅಲ್ಲದೇ ವೇದಿಕೆ ಮೇಲೆ ಗಗನಾ, ಸಿಂಗರ್ ಬಾಳು ಬೆಳಗುಂದಿ ಅವರ ಜೊತೆಗೆ ಆಲಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಿದ್ದನ್ನು ಲಾಂಚ್​ ಮಾಡಿಸಿದ್ದಾರೆ.
ಗಗನಾ ಬಗ್ಗೆ ಮಾತಾಡಿದ ನಟ ರಮೇಶ್​ ಅರವಿಂದ್​, ನಮಗೆಲ್ಲಾ ಟಿವಿ, ಸಿನಿಮಾದಲ್ಲಿ ಚಾನ್ಸ್​ ಇದ್ಯಾ ಅನ್ನೋ ಟೆನ್ಶನ್​ನಲ್ಲಿ ಬಂದಿದ್ದ ಹುಡುಗಿ ನಿರಂತವಾಗಿ ಮಿಂಚುತ್ತಿದ್ದಾರೆ. ಇದನ್ನೂ ಮುಂದುವರಿಸಿ ಗಗನಾ ಅಂತ ಶುಭ ಹಾರೈಸಿದ್ದಾರೆ. ಅಲ್ಲದೇ ವೇದಿಕೆಗೆ ಎಂಟ್ರಿ ಕೊಟ್ಟ ಬಾಳು ಅವರು ಹೊಸ ವಿಡಿಯೋವನ್ನು ಲಾಂಚ್​ ಮಾಡಿ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us