/newsfirstlive-kannada/media/post_attachments/wp-content/uploads/2025/06/ramesh-aravind.jpg)
ಬಹುಭಾಷಾ ನಟಿ ಸೌಂದರ್ಯಾ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಆಪ್ತಮಿತ್ರ ಸಿನಿಮಾದ ನೆನಪಿಸಿಕೊಂಡರೇ ಸಾಕು. ಆ ನಾಗವಲ್ಲಿ ಪಾತ್ರದ ನೆನಪಾಗುತ್ತೆ. ಅಷ್ಟರ ಮಟ್ಟಿಗೆ ನಾಗವಲ್ಲಿ ಪಾತ್ರದ ಮೂಲಕ ನಟಿ ಸೌಂದರ್ಯ ಹೆಸರುವಾಸಿಯಾಗಿದ್ದರು. ದಕ್ಷಿಣ ಭಾರತದ ಜನಪ್ರಿಯ ನಟಿ ಸೌಂದರ್ಯ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಇದನ್ನೂ ಓದಿ:ಬಿಗ್ಬಾಸ್ಗೆ ಹೋಗಲು ಭರ್ಜರಿ ಆಫರ್.. ಈ ಚಾನ್ಸ್ ನೀವು ಮಿಸ್ ಮಾಡ್ಕೋಬೇಡಿ..!
ಸ್ಟಾರ್ ನಟರ ಜೊತೆ ನಟನೆ ಮಾಡುವ ಮೂಲಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿ ಸೌಂದರ್ಯ ನಾಯಕಿಯಾಗಿ ಅಭಿನಯಿಸಿದ್ದರು. ಅದರಲ್ಲೂ ನಟ ವಿಷ್ಣುವರ್ಧನ್ ಹಾಗೂ ರಮೇಶ್ ಅರವಿಂದ್, ನಟಿ ಪ್ರೇಮಾ ಅವರ ಸಿನಿಮಾವಾದ ಆಪ್ತಮಿತ್ರದಲ್ಲಿ ಸೌಂದರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದಾಗಿತ್ತು.
ಇನ್ನು, ಹೆಸರಿಗೆ ತಕ್ಕಂತೆ ನಟಿ ಸೌಂದರ್ಯ ಅವರು ನೋಡಲು ಸುಂದರವಾಗಿದ್ದರು. ತಮ್ಮ ಸೌಮ್ಯ ಸ್ವಭಾವ, ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಎಲ್ಲರ ಮನಗೆದ್ದವರು. ಸೌಂದರ್ಯ ಅವರ ಬಗ್ಗೆ ಇಂದಿಗೂ ಹಲವು ಸ್ಟಾರ್ ನಟ-ನಟಿಯರು ಮಾತನಾಡುತ್ತಲೇ ಇರುತ್ತಾರೆ. ಇದೀಗ ಸೌಂದರ್ಯ ಅವರ ಅವರು ಎಂತಹ ವ್ಯಕ್ತಿತ್ವ ಹೊಂದಿದ್ದರು ಎಂದು ನಟ ರಮೇಶ್ ಅರವಿಂದ್ ಅವರು ಹಾಡಿ ಹೊಗಳಿದ್ದಾರೆ.
View this post on Instagram
ಈ ಬಗ್ಗೆ ಮಹಾನಟಿ ಸೀಸನ್ 2ನಲ್ಲಿ ಮಾತಾಡಿದ ನಟ ರಮೇಶ್ ಅರವಿಂದ್ ಅವರು, ‘ಈ ಭಾರತೀಯ ನಾರಿ ಅಂತ ಹೇಳುತ್ತೀವಿ ಅಲ್ವಾ? ಆ ಲಕ್ಷಣಗಳು ಇದ್ದಂತಹ ಹೀರೋಯಿನ್ ಅಂದ್ರೆ ಅದು ಸೌಂದರ್ಯ. ಅದಕ್ಕೆ ಜನರಿಗೆ ಅವರು ಬಹಳ ಇಷ್ಟವಾಗಿದ್ದರು. ನಮ್ಮ ಸಂಸ್ಕೃತಿಯಲ್ಲಿ, ನಮ್ಮ ಪೇಂಟಿಂಗ್ಸ್‌ನಲ್ಲಿ, ನಮ್ಮ ಕಥೆಗಳಲ್ಲಿ ಒಂದು ಹೆಣ್ಣು ಅಂದ್ರೆ ಹೇಗಿರಬೇಕು ಅಂತ ವರ್ಣನೆ ಮಾಡಿದಂಗೆ ಇದ್ದ ನಟಿ ಅಂದ್ರೆ ಅದು ಸೌಂದರ್ಯ. ಆ ಟೈಮ್‌ನಲ್ಲಿ ಸೌಂದರ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಎಲ್ಲಾ ಸೂಪರ್‌ಸ್ಟಾರ್‌ಗಳು ನಮಗೆ ಹೀರೋಹಿನ್ ಆಗಿ ಸೌಂದರ್ಯ ಬೇಕು ಅಂತಿದ್ದರು. ಅಲ್ಲಿ ರಜನಿಕಾಂತ್ ಸರ್ ಜೊತೆ ಆಕ್ಟ್ ಮಾಡುತ್ತಿರುತ್ತಾರೆ. ಈ ಕಡೆ ತೆಲುಗಿನಲ್ಲಿ ಚಿರಂಜೀವಿ ಅವರ ಜೊತೆ ನಟಿಸುತ್ತಾರೆ. ಅಲ್ಲಿ ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಅವರ ಜೊತೆ ಆಕ್ಟ್ ಮಾಡ್ತಾರೆ. ಇಲ್ಲಿ ನಮ್ಮ ಜೊತೆ ʻಆಪ್ತಮಿತ್ರʼದಲ್ಲಿ ನಟಿಸುತ್ತಾರೆ. ಎಷ್ಟು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ಎಂದು ಹಾಡಿ ಹೊಗಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ