Advertisment

ಕಲಾವಿದರ ಹಣ ನುಂಗಿದ್ರಾ ಕಿರುತೆರೆ ನಟ ರವಿಕಿರಣ್..? ಏನಿದು ಆರೋಪ..?

author-image
Veena Gangani
Updated On
ಕಲಾವಿದರ ಹಣ ನುಂಗಿದ್ರಾ ಕಿರುತೆರೆ ನಟ ರವಿಕಿರಣ್..? ಏನಿದು ಆರೋಪ..?
Advertisment
  • ಟೆಲಿವಿಷನ್ ಕಲ್ಚರಲ್ & ಸ್ಪೋಟ್ಸ್ ಕ್ಲಬ್ ಸದಸ್ಯರಿಂದ ಆರೋಪ
  • ಕ್ಲಬ್​ಗಾಗಿ ಸರ್ಕಾರ ನೀಡಿದ 3 ಕೋಟಿ ಹಣಕ್ಕೆ ಕನ್ನ ಹಾಕಿದ್ರಾ ನಟ?
  • ಕ್ಲಬ್ ಸದಸ್ಯರ ಆರೋಪಗಳಿಗೆ ರವಿಕಿರಣ್ ಕೊಟ್ಟ ಸ್ಪಷ್ಟನೆ ಏನು?

ಕಿರುತೆರೆ ನಟ ರವಿಕಿರಣ್​ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ‌ರವಿಕಿರಣ್ ವಿರುದ್ಧ ಕಲಾವಿದರು ಠಾಣೆ ಮೆಟ್ಟಿಲೇರಿದ್ದಾರೆ. ಕ್ಲಬ್​​​ನ ಹಣವನ್ನು ರವಿಕಿರಣ್ ನುಂಗಿ ನೀರು ಕುಡಿದಿದ್ದಾರೆ ಅಂತ ಕೇಸ್ ಹಾಕಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರವಿಕಿರಣ್​ ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋಟ್ಸ್ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಿದ್ದಾರೆ. ಆದ್ರೆ, ಕ್ಲಬ್ ಅಭಿವೃದ್ಧಿಗೆ ಮತ್ತು ಕಲಾವಿದರಿಗಾಗಿ ನೀಡಿದ ಹಣವನ್ನು ರವಿಕಿರಣ್ ದುರಪಯೋಗ ಪಡಿಸಿಕೊಂಡಿದ್ದಾರೆ ಹಾಗೂ ಕಾರ್ಯದರ್ಶಿ ರವಿಕಿರಣ್ ಹಾಗೂ ಜಂಟಿ ಕಾರ್ಯದರ್ಶಿ ಉಮಾಶಂಕರ್ ಇಬ್ಬರು ಅಕ್ರಮವೆಸಗಿದ್ದಾರೆ ಅಂತ ಆರೋಪ ಕೇಳಿ ಬಂದಿದೆ. ಕಳೆದ 20 ವರ್ಷದಿಂದ ಕ್ಲಬ್ ಕಲಾವಿದರಿಗಾಗಿ ಕೆಲಸ ಮಾಡ್ತಿದೆ. ಆದ್ರೆ, ರವಿಕಿರಣ್ ಕ್ಲಬ್ ಹಣವನ್ನು ತಮ್ಮ ವೈಯುಕ್ತಿಕ ಲಾಭಕ್ಕೆ ಬಳಸಿದ್ದಾರೆ ಅಂತ ಆರೋಪಿಸಲಾಗಿದೆ.

Advertisment

publive-image

ಏನಿದು ಆರೋಪ?

ಅಸಲಿಗೆ ಈ ಕ್ಲಬ್​ ಸರ್ಕಾರ ನೀಡಿದ ಅನುದಾನದ ಜಾಗದಲ್ಲಿ ನಿರ್ಮಾಣವಾಗಿತ್ತು. ಇಲ್ಲಿ ತನಕ ಕ್ಲಬ್​ಗಾಗಿ ಸರ್ಕಾರ 3ಕೋಟಿಗೂ ಅಧಿಕ ಹಣ ನೀಡಿದೆ. ಕ್ಲಬ್ ಆರಂಭದಿಂದಲೂ ಕಾರ್ಯದರ್ಶಿಯಾಗಿರುವ ರವಿಕಿರಣ್​, ಕ್ಲಬ್ ನಿರ್ಮಾಣದ ಕಾಂಟ್ರಾಕ್ಟ್​ನ್ನ ಸಹೋದರನಿಗೆ ನೀಡಿದ್ರು. ಆದ್ರೆ, ಕ್ಲಬ್​ಗೆ ಸಂಬಂಧಿಸಿದ ಜಿಎಸ್​ಟಿ, ಬಿಬಿಎಂಪಿ, ಟ್ಯಾಕ್ಸ್​ ಕೂಡ ಪಾವತಿ ಮಾಡಿಲ್ಲ. ಹಣ ಪಾವತಿ ಮಾಡದೇ ಕ್ಲಬ್ ಹೆಸರನಲ್ಲಿ ಸದಸ್ಯರಿಂದ ಹಣ ವಸೂಲಿ ಮಾಡಿದ್ದು, ಕ್ಲಬ್​ಗೆ ಬರದಂತೆ ಆದೇಶವಿದ್ರೂ 6 ಲಕ್ಷ ಹಣ ತೆಗೆದುಕೊಂಡು ಹೋಗಿದ್ದಾರೆ ಅಂತ ಸದಸ್ಯರು ಆರೋಪಿಸಿದ್ದಾರೆ. ಇನ್ನು, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಸ್ವತಃ ರವಿಕಿರಣ್ ಸ್ಪಷ್ಟನೆ ಕೊಟ್ಟಿದ್ದಾರೆ.

publive-image

ಕಳೆದ ಡಿಸೆಂಬರ್​ಗೆ ನನ್ನ ಅವಧಿ ಮುಕ್ತಾಯವಾಗಿದೆ. ಕೊರೋನಾ ಇದ್ದ ಕಾರಣ ಕಳೆದ ನಾಲ್ಕು ವರ್ಷದಿಂದ ಟ್ಯಾಕ್ಸ್ ಕಟ್ಟಿಲ್ಲ. ಇದು ಕ್ಲಬ್​ನ ಖಜಾಂಚಿ ಜವಾಬ್ದಾರಿ. ಅವರು ಕಟ್ಟಬೇಕು. ಮುಂಚೆ ನಾನೇ ಅದನ್ನು ನೋಡಿಕೊಳ್ಳುತ್ತಿದ್ದೆ. ಈಗ ಅವರ ಮೇಲೆ ತಪ್ಪು ಬರುತ್ತೆ ಅಂತಾ ನನ್ನನು ಸಸ್ಪೆಂಡ್ ಮಾಡಿದ್ದಾರೆ. ಇದರ ಬಗ್ಗೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ.

- ನಟ ರವಿಕಿರಣ್​ 

ಕಿರುತೆರೆ ಹಿರಿತೆರೆ ಎರಡರಲ್ಲೂ ಒಳ್ಳೆ ಹೆಸರು ಮಾಡಿರುವ ರವಿಕಿರಣ್ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ರವಿಕಿರಣ್ ಕೂಡ ಇದೆಲ್ಲ ಸುಳ್ಳು ಅಂತ ಹೇಳಿದ್ದಾರೆ. ಆದ್ರೆ ಪೊಲೀಸರ ತನಿಖೆ ಬಳಿಕವಷ್ಟೆ ತಪ್ಪು ಯಾರದು? ಸರಿ ಯಾರದು ಅನ್ನೋದು ಗೊತ್ತಾಗಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment