Advertisment

ಕೊನೆಗೂ ಆಕ್ರೋಶಕ್ಕೆ ಮಣಿದ ರಿಷಬ್ ಶೆಟ್ಟಿ.. ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ತಾಯಿ, ತಂಗಿಗೆ ಸಾಂತ್ವನ

author-image
admin
Updated On
ಕೊನೆಗೂ ಆಕ್ರೋಶಕ್ಕೆ ಮಣಿದ ರಿಷಬ್ ಶೆಟ್ಟಿ.. ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ತಾಯಿ, ತಂಗಿಗೆ ಸಾಂತ್ವನ
Advertisment
  • ಕಾಂತಾರ ಚಾಪ್ಟರ್ ಒನ್ ಸಿನಿಮಾದಲ್ಲಿ ಅಭಿನಯಿಸಿದ್ದ ರಾಕೇಶ್‌
  • ಕಾಂತಾರ ಸಿನಿಮಾಗಾಗಿ ಡೆಡಿಕೇಟೇಟ್ ಆಗಿದ್ದ ರಾಕೇಶ್ ಪೂಜಾರಿ
  • ಕಲಾವಿದನಿಗಿಂತ ಸಿನಿಮಾ ಶೂಟಿಂಗ್ ಹೆಚ್ಚಾಯ್ತಾ ಎಂದು ಆಕ್ರೋಶ

ಉಡುಪಿ: ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ದುರಂತ ಅಂತ್ಯ ಯಾರು ಮರೆಯಲು ಸಾಧ್ಯವಿಲ್ಲ. ಕಳೆದ ಮೇ 11ರಂದು ಸ್ನೇಹಿತನ ಮದುವೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ರಾಕೇಶ್​ ಅವರು ಡ್ಯಾನ್ಸ್ ಮಾಡಿ ಎಲ್ಲರ ಜೊತೆ ಖುಷಿಯಿಂದ ಕಾಲ ಕಳೆದಿದ್ದರು.

Advertisment

ಆದರೆ ರಾಕೇಶ್ ಪೂಜಾರಿ ಅವರು ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದರು.

ರಾಕೇಶ್ ಪೂಜಾರಿ ಅವರು ಕಾಂತಾರ ಚಾಪ್ಟರ್ ಒನ್ ಸಿನಿಮಾದಲ್ಲಿ ಅತಿ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಂತಾರ ಸಿನಿಮಾಗಾಗಿ ಡೆಡಿಕೇಟೇಟ್ ಆಗಿದ್ದ ರಾಕೇಶ್ ಅವರು ತಮ್ಮ ಶೂಟಿಂಗ್ ಅನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದರು.

publive-image

ಕಾಂತಾರ ಚಿತ್ರದಲ್ಲಿ ಅಭಿನಯಿಸಿದ್ದ ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನಕ್ಕೆ ನಟ ರಿಷಬ್ ಶೆಟ್ಟಿ ಅವರು ಭೇಟಿ ನೀಡಿರಲಿಲ್ಲ. ಅಂತ್ಯಕ್ರಿಯೆ ಹಾಗು ಅಂತ್ಯಸಂಸ್ಕಾರಕ್ಕೆ ರಿಷಬ್ ಶೆಟ್ಟಿ ಗೈರಾಗಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕಲಾವಿದನಿಗಿಂತ ಸಿನಿಮಾ ಶೂಟಿಂಗ್ ಹೆಚ್ಚಾಯ್ತಾ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಿಡಿಕಾರಿದ್ದರು.

Advertisment

ಇದನ್ನೂ ಓದಿ: ಕನ್ನಡ ಕಿರುತೆರೆಯ ಖ್ಯಾತ ಕಲಾವಿದ ರಾಕೇಶ್ ಪೂಜಾರಿ ದುರಂತ ಅಂತ್ಯ; ಕಾರಣವೇನು? 

ನಿಧನದ 21 ದಿನಗಳ ಬಳಿಕ ರಾಕೇಶ್ ಪೂಜಾರಿ ಅವರ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದಾರೆ. ಪತ್ನಿ ಪ್ರಗತಿ ಜೊತೆ ರಾಕೇಶ್ ಪೂಜಾರಿ ನಿವಾಸಕ್ಕೆ ತೆರಳಿದ ರಿಷಬ್ ಶೆಟ್ಟಿ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಉಡುಪಿ ಹೂಡೆಯಲ್ಲಿರುವ ರಾಕೇಶ್ ಪೂಜಾರಿ ಮನೆಗೆ ರಿಷಬ್ ಶೆಟ್ಟಿ ಭೇಟಿ ನೀಡಿದ್ದು, ರಾಕೇಶ್ ತಂಗಿ ಹಾಗು ತಾಯಿಗೆ ಸಮಾಧಾನ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment