ಸಲ್ಮಾನ್​ ಖಾನ್​ಗೆ ಗಂಭೀರ ಕಾಯಿಲೆ.. ಏನಿದು Trigeminal Neuralgia..?

author-image
Veena Gangani
Updated On
ಮಾಜಿ ಗರ್ಲ್​ ಫ್ರೆಂಡ್ ಬರ್ತ್​ ಡೇಯಲ್ಲಿ ಸಲ್ಮಾನ್ ಖಾನ್ ಪ್ರತ್ಯಕ್ಷ.. PHOTO
Advertisment
  • ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಸ್ಟಾರ್
  • ದಿಢೀರ್ ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟ ಸಲ್ಮಾನ್ ಖಾನ್  
  • ಸಲ್ಮಾನ್‌ ಖಾನ್ ಇನ್ನೂ ಮದುವೆ ಆಗದೇ ಇರೋದಕ್ಕೆ ಕಾರಣ?

ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್‌ ನರಶೂಲೆ (Trigeminal Neuralgia) ಎಂಬ ಕಾಯಿಲೆ ನನಗಿದೆ ಎಂದು ಬಾಲಿವುಡ್​ ಸ್ಟಾರ್ ನಟ ಸಲ್ಮಾನ್ ಖಾನ್ ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಜೋಗನ ಹಕ್ಕಲು ಜಲಪಾತ ವೀಕ್ಷಣೆಗೆ ಹೋದಾಗ ಘೋರ ದುರಂತ.. ಕಾಲು ಜಾರಿ ಯುವಕ ಕಣ್ಮರೆ

publive-image

ಬಾಲಿವುಡ್‌ ಸ್ಟಾರ್ ನಟ ಸಲ್ಮಾನ್‌ ಖಾನ್ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಎದುರಾಗಿದೆ. 59 ವರ್ಷದ ನಟ ಸಲ್ಮಾನ್‌ ಖಾನ್ ಅವರು ಮದುವೆಯಾಗದೇ ಸಿಂಗಲ್‌ ಆಗಿಯೇ ಉಳಿದಿರೋದಕ್ಕೆ ಇದೇ ಕಾರಣ ಆಯ್ತಾ ಎಂಬ ಚರ್ಚೆ ಶುರುವಾಗಿದೆ.

ಹೌದು, ಸಲ್ಮಾನ್‌ ಖಾನ್‌ ದೈಹಿಕವಾಗಿ ಸದೃಢವಾಗಿ ಕಾಣಿಸಿಕೊಂಡರು, ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ʻದಿ ಗ್ರೇಟ್‌ ಇಂಡಿಯನ್‌ ಕಪಿಲ್‌ʼ ಶೋನಲ್ಲಿ ಮೊದಲು ಅತಿಥಿಯಾಗಿ ಭಾಗವಹಿಸಿದ ನಟ ಈ ವೇಳೆ ತಮ್ಮ ಮದುವೆ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

publive-image

ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್‌ ನರಶೂಲೆ (Trigeminal Neuralgia) ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಅಲ್ಲದೇ ನನಗೆ ಮೆದುಳಿನಲ್ಲಿ ರಕ್ತನಾಳ ಸಮಸ್ಯೆ ಇದೆ. ಅದಕ್ಕಾಗಿಯೂ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಎವಿಎಮ್‌ ಸಮಸ್ಯೆ ಕೂಡ ಇದೆ. ನನ್ನ ಪಕ್ಕೆಲುಬುಗಳು ಮುರಿತವಾಗಿದೆ. ಆದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಟ್ರೈಜಿಮಿನಲ್‌ ನರಶೂಲೆ (Trigeminal Neuralgia) ಎಂದರೇನು?

ಟ್ರೈಜಿಮಿನಲ್ ನರಶೂಲೆಯನ್ನು “ಆತ್ಮಹತ್ಯೆ ಕಾಯಿಲೆ” ಎಂದು ಕರೆಯಲಾಗುತ್ತದೆ. ಈ ಅಸ್ವಸ್ಥತೆಯು ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಇದು ಹಲ್ಲುಜ್ಜುವುದು ಅಥವಾ ಅಗಿಯುವಂತಹ ಸರಳ ದೈನಂದಿನ ಚಟುವಟಿಕೆಗಳಿಂದ ತೀವ್ರವಾದ ಮುಖದ ನೋವಿಗೆ ಕಾರಣವಾಗುತ್ತದೆ.

ಇತ್ತೀಚಿನ ಕಾರ್ಯಕ್ರಮದಲ್ಲಿ ಸಲ್ಮಾನ್ ಅವರು ಮೆದುಳಿನ ರಕ್ತನಾಳದ ಉರಿಯೂತ ಮತ್ತು ಅಪಧಮನಿಯ ವಿರೂಪ (AVM) ದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು. ಮೆದುಳಿನ ರಕ್ತನಾಳದ ಉರಿಯೂತವು ದುರ್ಬಲಗೊಂಡ ರಕ್ತನಾಳದಲ್ಲಿನ ಉಬ್ಬುವಿಕೆಯಾಗಿದ್ದು, ಅದು ಛಿದ್ರಗೊಂಡರೆ ಜೀವಕ್ಕೆ ಅಪಾಯಕಾರಿಯಾದ ರಕ್ತಸ್ರಾವದ ಪಾರ್ಶ್ವವಾಯುವಿಗೆ ಕಾರಣವಾಗಬಹುದು. AVM ಎಂಬುದು ರಕ್ತನಾಳಗಳ ಅಪರೂಪದ ಮತ್ತು ಅಸಹಜ ಗೋಜಲು ಆಗಿದ್ದು, ಇದು ಸಾಮಾನ್ಯ ರಕ್ತದ ಹರಿವಿಗೆ ಅಡ್ಡಿ ಉಂಟು ಮಾಡುತ್ತೆ. ಇದು ಗಂಭೀರ ನರವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ, ಸಲ್ಮಾನ್ ಖಾನ್ ಅವರು ಟ್ರೈಜಿಮಿನಲ್ ನರಶೂಲೆ, ಮೆದುಳಿನ ರಕ್ತನಾಳ ಮತ್ತು ಅಪಧಮನಿಯ ವಿರೂಪ ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೇ ಸುದ್ದಿ ಕೇಳಿದ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment