Advertisment

ನಿಜಕ್ಕೂ ಇದು ಅಸಹ್ಯಕರ ಸಂಗತಿ.. ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಮಂತಾ

author-image
Veena Gangani
Updated On
ನಿಜಕ್ಕೂ ಇದು ಅಸಹ್ಯಕರ ಸಂಗತಿ.. ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಮಂತಾ
Advertisment
  • ವಿಚ್ಛೇದನದ ಪಡೆದ ಬಳಿಕ ನಟಿಗೆ ಎದುರಿಸಿದ ಅವಮಾನಗಳೇನು?
  • ಸ್ಟಾರ್ ನಟ ನಾಗ ಚೈತನ್ಯ ಮಾಜಿ ಪತ್ನಿ ಸಮಂತಾ ಹೀಗೆ ಹೇಳಿದ್ದೇಕೆ?
  • 2017ರಲ್ಲಿ ನಾಗ ಚೈತನ್ಯನನ್ನು ಪ್ರೀತಿಸಿ ಮದುವೆಯಾದ ನಟಿ ಸಮಂತಾ

ತೆಲುಗು ಸೂಪರ್​​ ಹೀರೋ ಅಕ್ಕಿನೇನಿ ನಾಗಾರ್ಜುನ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆಗಳ ಮಾಡಿಕೊಳ್ಳುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಆದರೆ ಇದರ ಮಧ್ಯೆ ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ ಸಂದರ್ಶನಗಳಲ್ಲಿ ಶಾಕಿಂಗ್​ ಹೇಳಿಕೆಗಳನ್ನು ನೀಡಿದ್ದಾರೆ. ವಿಚ್ಛೇದನದ ಪಡೆದ ನಂತರ ತಾನು ಎದುರಿಸಿದ ಅವಮಾನಗಳ ಬಗ್ಗೆ ಸಮಂತಾ ಮನಬಿಚ್ಚಿ ಮಾತನಾಡಿದ್ದಾರೆ.

Advertisment

ಇದನ್ನೂ ಓದಿ:ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್.. ಸಮಂತಾ ವಿಡಿಯೋ ಭಾರೀ ವೈರಲ್; ಶೋಭಿತಾಗೆ ಹಿಡಿಶಾಪ!

ಈ ಬಗ್ಗೆ ಮಾತಾಡಿದ ನಾಗ ಚೈತನ್ಯ ಅವರ ಮಾಜಿ ಪತ್ನಿ ಸಮಂತಾ, ಗಂಡನಿಂದ ವಿಚ್ಛೇದನ ಪಡೆದ ಮಹಿಳೆಯರಿಗೆ ಸಮಾಜವು 'ಸೆಕೆಂಡ್ ಹ್ಯಾಂಡ್' ಎಂಬ ಟ್ಯಾಗ್ ನೀಡುತ್ತದೆ. ಈ ಹಿಂದೆ ನನ್ನ ಮೇಲೆ ಅನೇಕರು ಟ್ರೋಲಿಂಗ್‌ ಹಾಗೂ ಆರೋಪಗಳನ್ನು ಮಾಡಲಾಯಿತು. ಆದರೆ ಅವುಗಳಲ್ಲಿ ಯಾವುದೇ ಸತ್ಯವಾದ ಅಂಶವಿಲ್ಲ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ನನ್ನ ಸ್ನೇಹಿತರು ಮತ್ತು ಕುಟುಂಬದವರು ನನಗೆ ಬೆಂಬಲವಾಗಿ ನಿಂತಿದ್ದರು.

ಹೀಗೆ ಮಾತನ್ನು ಮುಂದುವರೆಸಿದ ಅವರು, ದುರದೃಷ್ಟವಶಾತ್, ನಾವು ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಯಾವುದೇ ಸಮಯದಲ್ಲಿ ಏನಾದರೂ ತಪ್ಪಾದಾಗ ಅದು ಕೇವಲ ಮಹಿಳೆಗೆ ತೊಂದರೆ ಆಗುತ್ತದೆ. ಆದರೆ ಮಹಿಳೆಯು ಹೆಚ್ಚಿನ ಟೀಕೆಗೆ ಒಳಗಾಗುತ್ತಾಳೆ. ಅಲ್ಲದೇ ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಕೇವಲ ಆನ್‌ಲೈನ್‌ನಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಸಹ ಆಗುತ್ತದೆ. ಸಾಕಷ್ಟು ಮಂದಿ ನನ್ನ ಬಗ್ಗೆ ಸುಳ್ಳು ವಂದತಿಗಳನ್ನು ಹಬ್ಬಿಸಿದ್ದರು. ಆದರೆ ಇದು ನಿಜಕ್ಕೂ ಅಸಹ್ಯಕರವಾದಾದ ಸಂಗತಿಯಾಗಿದೆ ಅಂತ ಹೇಳಿದ್ದಾರೆ.

Advertisment

publive-image

ಇನ್ನೂ, 2017ರಲ್ಲಿ ಪ್ರೀತಿಸಿ ಮದುವೆಯಾದ ನಾಗ ಚೈತನ್ಯ ಮತ್ತು ಸಮಂತಾ 2021ರಲ್ಲಿ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ನಟಿ ಸಮಂತಾ ಎಲ್ಲರಿಂದಲೂ ತೀವ್ರ ಟೀಕೆಗಳನ್ನು ಎದುರಿಸಬೇಕಾಯಿತು. ಅಲ್ಲದೇ ಸಮಂತಾ ಕೆಲವು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಕ್ರಮ ಕೈಗೊಂಡರು. ಆದರೆ 2022ರಲ್ಲಿ ಸಮಂತಾ ಮಯೋಸೈಟಿಸ್‌ ಕಾಯಿಲೆಗೆ ತುತ್ತಾಗಿದ್ದರು. ಸದ್ಯ ನಟಿ ಸಮಂತಾ ಮಯೋಸೈಟಿಸ್‌ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

publive-image

ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆಗಳ ಮಾಡಿಕೊಳ್ಳುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೇ ಡಿಸೆಂಬರ್ 4ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಅವರ ಮದುವೆ ನಡೆಯಲಿದೆ. ಕೇವಲ 300 ಜನರಿಗೆ ಮಾತ್ರ ಆಹ್ವಾನ. ಮದುವೆ ಸರಳವಾಗಿ ನಡೆಯಲಿದೆಯಂತೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment