/newsfirstlive-kannada/media/post_attachments/wp-content/uploads/2025/01/CHARAN_ADITI_1.jpg)
100 ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಬಿಗ್ ಬಾಸ್ ಶೋ ಸಾಗುತ್ತಿದೆ. ಇನ್ನೇನು ಕೆಲವು ದಿನಗಳು ಮಾತ್ರ ಈ ಶೋ ನಡೆಯಲಿದ್ದು ಅಷ್ಟರಲ್ಲೇ ಅದೃಷ್ಟಶಾಲಿ ಯಾರೆಂದು ಆಯ್ಕೆ ಮಾಡಬೇಕಿದೆ. ಈ ಸಂಬಂಧ ಈ ವಾರದ ಫಿನಾಲೆಗೆ ಹೋಗುವ ಒಬ್ಬ ಆಟಗಾರರ ಹೆಸರು ಹೇಳಲು ನಟ ಶರಣ್ ಹಾಗೂ ಅದಿತಿ ಪ್ರಭುದೇವ ಅವರು ಬಿಗ್ಬಾಸ್ ಮನೆಗೆ ಆಗಮಿಸಿದ್ದಾರೆ.
ಬಿಗ್ಬಾಸ್ ಕೊಟ್ಟಿರುವ ಟಾಸ್ಕ್ ಅನ್ನು ರಜತ್ ಕಿಶನ್, ಹನುಮಂತು, ಭವ್ಯ ಹಾಗೂ ತ್ರಿವಿಕ್ರಮ್ ಈ ನಾಲ್ವರು ಸರದಿಯಲ್ಲಿ ಆಡಬೇಕಾಗಿದೆ. ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ಇದನ್ನೂ ಓದಿ:Bigg Boss ಮನೆಗೆ ಎಂಟ್ರಿ ಕೊಟ್ಟ ಚರಣ್, ಅದಿತಿ ಪ್ರಭುದೇವ.. ಕಾರಣವೇನು?
ಸದ್ಯ ಈ ಟಾಸ್ಕ್ಗೆ ಅಣಿಯಾಗಿರುವ ತ್ರಿವಿಕ್ರಮ್, ರಜತ್ ಕಿಶನ್, ಭವ್ಯ ಹಾಗೂ ಹನುಮಂತು ಇವರಲ್ಲಿ ಯಾರು ಅತ್ಯಂತ ಕಡಿಮೆ ಅವಧಿಯಲ್ಲಿ ಆಟ ಮುಗಿಸುತ್ತಾರೋ ಅವರು ಫಿನಾಲೆಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಚರಣ್ ಅವರು ಸ್ಪರ್ಧಿಯನ್ನು ಗುರುತಿಸಿದ್ದಾರೆ. ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಎಂದು ಶರಣ್ ಹೇಳಿದ್ದಾರೆ. ಆದರೆ ಸ್ಪರ್ಧಿ ಯಾರು ಎಂದು ಹೆಸರನ್ನು ಬಹಿರಂಗ ಪಡಿಸಿಲ್ಲ.
ಇನ್ನು ಗೇಮ್ನಲ್ಲಿ ಭವ್ಯ, ಹನುಮಂತು, ತ್ರಿವಿಕ್ರಮ್, ಕ್ಯಾಪ್ಟನ್ ರಜತ್ ಎಲ್ಲರೂ ಮೇಲೆ ಏರಿ ಟಾಸ್ಕ್ ಪೂರ್ಣಗೊಳಿಸಿ, ಬಾವುಟವನ್ನಿಟ್ಟು ಬಿಗ್ಬಾಸ್ ಎಂದು ಕೂಗಿದ್ದಾರೆ. ಆದರೆ ಯಾರು ಕಡಿಮೆ ಅವಧಿಯಲ್ಲಿ ಟಾಸ್ಕ್ ಪೂರ್ಣಗೊಳಸಿದ್ದಾರೆ, ಯಾರು ಗೆಲುವು ಪಡೆದಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ. ಅದನ್ನು ಇಂದು ನಡೆಯುವ ಶೋನಲ್ಲಿ ತಿಳಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ