/newsfirstlive-kannada/media/post_attachments/wp-content/uploads/2025/06/rcb21.jpg)
18 ವರ್ಷಗಳ ಸುದೀರ್ಘ ಕನಸು ನಿನ್ನೆ ರಾತ್ರಿ ನನಸಾಯ್ತು. 17 ಸೀಸನ್​ಗಳ ಕಪ್​ ಗೆಲುವಿನ ಕೊರಗು 18ನೇ ಸೀಸನ್​ನಲ್ಲಿ ನೀಗಿತು. 3 ಬಾರಿ ಫೈನಲ್​ನಲ್ಲಿ ಎಡವಿದ್ದ ಆರ್​​ಸಿಬಿ ನಿನ್ನೆ ಯಶಸ್ವಿಯಾಗಿ ಲೈನ್​ ಕ್ರಾಸ್​ ಮಾಡಿದೆ. ಗುಜರಾತ್​ನ ನಮೋ ಮೈದಾನದಲ್ಲಿ ಬೆಂಗಳೂರು ಬಾಯ್ಸ್​ ಜಯಭೇರಿ ಬಾರಿಸಿತು.
/newsfirstlive-kannada/media/post_attachments/wp-content/uploads/2025/06/rcb23.jpg)
ಆರ್​​ಸಿಬಿ ಫೈನಲ್​ನಲ್ಲಿ ಗೆದ್ದು ಬೀಗಿದ ಆ ಅವಿಸ್ಮರಣೀಯ, ರೋಮಾಂಚನಕಾರಿ ಕ್ಷಣವನ್ನ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇಷ್ಟು ದಿನ ಈ ಸಲ ಕಪ್​ ನಮ್ದೇ ಅಂತ ಹೇಳುತ್ತಿದ್ದ ಅಭಿಮಾನಿಗಳು, ಈ ಸಲ ಕಪ್​ ನಮ್ದು ಅಂತ, ನಮ್ಮ ಆರ್​​ಸಿಬಿ ನಮ್ಮ ಹೆಮ್ಮೆ ಎನ್ನುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/rcb24.jpg)
ಕೊನೆಗೂ ಆರ್​ಸಿಬಿ ಐಪಿಎಲ್​ ಟ್ರೋಫಿಗೆ ಮುತ್ತಿಟ್ಟಿದೆ. ಒಂದು ಕಡೆ ಅಭಿಮಾನಿಗಳ ಸಂಭ್ರಮ ಜೋರಾಗಿದ್ದರೆ, ಮತ್ತೊಂದು ಕಡೆ ಕನ್ನಡ ಸಿನಿ ತಾರೆಯರು ಮನೆಯಲ್ಲೇ ಸಂಭ್ರಮಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/06/rcb25.jpg)
ಹೌದು, ಟಿವಿ ಮುಂದೆ ನಿಂತುಕೊಂಡು ಕೊನೆಯ ಕ್ಷಣದ ಆರ್​ಸಿಬಿ ಪಂದ್ಯವನ್ನು ವೀಕ್ಷಿಸಿ ಸಂಭ್ರಮಿಸಿದ್ದಾರೆ. ಬಿಗ್​ಬಾಸ್​ ಸೀಸನ್ 10ರ ವಿನ್ನರ್​ ಕಾರ್ತಿಕ್​ ಮಹೇಶ್, ಶೈನ್​ ಶೆಟ್ಟಿ, ದಿವ್ಯಾ ಉರುಡುಗ, ಬ್ರೋ ಗೌಡ, ಮೋಕ್ಷಿತಾ ಪೈ, ಭವ್ಯಾ ಗೌಡ, ಮದುವೆ ಸಂಭ್ರಮದಲ್ಲಿರೋ ವೈಷ್ಣವಿ ಗೌಡ ಸೇರಿದಂತೆ ಸಾಕಷ್ಟು ಮಂದಿ ಖುಷಿ ಪಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2025/06/rcb22.jpg)
ಇಷ್ಟೇ ಅಲ್ಲದೇ ಇನ್ನೂ ಹಲವಾರು ನಟ ನಟಿಯರು ತಮ್ಮ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆರ್​ಸಿಬಿ ಬಗ್ಗೆ ಹೆಮ್ಮೆ ರೀತಿಯಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ಖುಷಿ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us