/newsfirstlive-kannada/media/post_attachments/wp-content/uploads/2025/03/shivanna6.jpg)
ಸ್ಯಾಂಡಲ್ವುಡ್ ಸ್ಟಾರ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. ಈಗಾಗಲೇ ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ಶೂಟಿಂಗ್ ಶುರುವಾಗಿದೆ.
ಇದನ್ನೂ ಓದಿ:ಸಾಧು ಕೋಕಿಲಗೆ ತರಾಟೆ ತಗೊಂಡ ಸುದೀಪ್ ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ್; ತಪ್ಪು ಮಾಡಿದ್ದು ಯಾರು?
ಹೀಗಾಗಿ ಶಿವಣ್ಣನ 131 ಶೂಟಿಂಗ್ ಸ್ಪೆಷಲ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಹೌದು, ಎರಡು ತಿಂಗಳುಗಳ ಬಳಿಕ ಅವರು ಮತ್ತೆ ಅದೇ ಸ್ಟೈಲ್ನಲ್ಲಿ ಸಿನಿಮಾ ಸೆಟ್‌ಗೆ ಕಾಲಿಟ್ಟಿದ್ದಾರೆ.
ಇನ್ನೂ, ಶಿವರಾಜ್ ಕುಮಾರ್ ನಟನೆಯ ಹೊಸ ಸಿನಿಮಾ ಶೂಟಿಂಗ್ಗೆ ಹೋಗುವ ಮೊದಲು ಅಣ್ಣಾವ್ರ ಫೋಟೋಗೆ ನಮಸ್ಕಾರ ಮಾಡಿ ಸೆಟ್‌ಗೆ ಹೋಗಿದ್ದಾರೆ.
ಇದೇ ವೇಳೆ ಮಹಿಳಾ ಅಭಿಮಾನಿಗಳು ನಟ ಶಿವಣ್ಣ ಅವರಿಗೆ ಆರತಿ ಎತ್ತಿದ್ದಾರೆ. ವಿಗ್ ಧರಿಸಿ, ವಿಭಿನ್ನವಾದ ಗೆಟಪ್‌ನಲ್ಲಿ ಕಾಣಿಸಿಕೊಂಡ ಶಿವಣ್ಣನನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
#Shivanna Back to Shoot for #Shivanna131
All set for #RC16 as well...@NimmaShivannapic.twitter.com/dVF2nW2luh
— Telugu Bit (@Telugubit)
#Shivanna Back to Shoot for #Shivanna131
All set for #RC16 as well...@NimmaShivannapic.twitter.com/dVF2nW2luh— Telugu Bit (@Telugubit) March 4, 2025
">March 4, 2025
ಸದ್ಯ ಶಿವಣ್ಣ ಅವರ 131 ಸಿನಿಮಾವನ್ನು ತಮಿಳು ನಿರ್ದೇಶಕ ಕಾರ್ತಿಕ್ ಅದ್ವೈತ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಶಿವಣ್ಣನ 131 ಶೂಟಿಂಗ್ ಸ್ಪೆಷಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕ್ಯಾನ್ಸರ್ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕಾಗೆ ಚಿಕಿತ್ಸೆಗಾಗಿ ಹೋಗಿದ್ದರು. ಒಂದು ತಿಂಗಳ ಬಳಿಕ ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದಾದ ಬಳಿಕ ಎರಡು ತಿಂಗಳ ಬಳಿಕ ಮತ್ತೆ ಹೊಸ ಸಿನಿಮಾದ ಶೂಟಿಂಗ್ಗೆ ಮರಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ