/newsfirstlive-kannada/media/post_attachments/wp-content/uploads/2025/05/shivaraj-kumar.jpg)
ಕರುನಾಡ ಚಕ್ರವರ್ತಿ ನಟ ಶಿವರಾಜಕುಮಾರ್ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಬಳಿಕ ಫುಲ್​ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಆಗಾಗ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?
/newsfirstlive-kannada/media/post_attachments/wp-content/uploads/2025/05/shivaraj-kumar1.jpg)
ಎಷ್ಟೋ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಅಷ್ಟೇ ಅಲ್ಲ ತಮ್ಮ ಮಕ್ಕಳಿಗೆ ಮೊದಲು ಅವರಿಂದಲೇ ನಾಮಕರಣ ಮಾಡಿಸುವ ಕನಸ ಕಾಣೋ ಅಭಿಮಾನಿಗಳು ಇದ್ದಾರೆ. ಇನ್ನೂ ಯಾವುದೇ ವಾಹನಗಳನ್ನು ಖರೀಸಿದರೆ ಮೊದಲು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ಆದ್ರೆ ಇಲ್ಲೊಬ್ಬ ಅಭಿಮಾನಿ ಮಾತ್ರ ತಾನು ಖರೀದಿಸಿದ ಫೋರ್ಶೆ ಕಾರು ಮೊದಲು ತನ್ನ ನೆಚ್ಚಿನ ಹೀರೋ ಓಡಿಸಬೇಕೆಂದು, ಶಿವರಾಜಕುಮಾರ್​ ಅವರ ಮನೆಗೆ ಬಂದಿದ್ದಾನೆ.
View this post on Instagram
ಇದರ ಮಧ್ಯೆ ನಟ ಶಿವರಾಜ್​ ಕುಮಾರ್ ಅವರು ಅಭಿಮಾನಿಯೊಬ್ಬರ ಪೋರ್ಶೆ ಕಾರು ಓಡಿಸಿ ಖುಷಿಪಟ್ಟಿದ್ದಾರೆ. ಹೌದು, ಅಭಿಮಾನಿಯೊಬ್ಬರು ತಮ್ಮ ಹೊಸ ಫೋರ್ಶೆ ಕಾರಿನೊಂದಿಗೆ ಶಿವಣ್ಣ ಅವರ ಮನೆಗೆ ಬಂದಿದ್ದರು. ಆಗ ಅಭಿಮಾನಿಯ ಆಸೆಯಂತೆ ಶಿವಣ್ಣ ಅವರು ಕೆಂಪು ಬಣ್ಣದ ಫೋರ್ಶೆ ಕಾರು ಓಡಿಸಿದ್ದಾರೆ. ಇದನ್ನೂ ನೋಡಿದ ಅಭಿಮಾನಿ ಕೂಡ ಖುಷಿಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us