ಶಸ್ತ್ರ ಚಿಕಿತ್ಸೆ ಬೆನ್ನಲ್ಲೇ ತಂದೆಯ ಊರಿಗೆ ಭೇಟಿ ಕೊಟ್ಟ ನಟ ಶಿವಣ್ಣ ದಂಪತಿ; ಮೊದಲು ಭೇಟಿಯಾಗಿದ್ದು ಯಾರನ್ನ?

author-image
Veena Gangani
Updated On
ಶಸ್ತ್ರ ಚಿಕಿತ್ಸೆ ಬೆನ್ನಲ್ಲೇ ತಂದೆಯ ಊರಿಗೆ ಭೇಟಿ ಕೊಟ್ಟ ನಟ ಶಿವಣ್ಣ ದಂಪತಿ; ಮೊದಲು ಭೇಟಿಯಾಗಿದ್ದು ಯಾರನ್ನ?
Advertisment
  • ಒಟ್ಟಾಗಿ ಸೋದರತ್ತೆಯನ್ನು ಭೇಟಿ ಮಾಡಿದ ಶಿವಣ್ಣ, ಗೀತಕ್ಕ ದಂಪತಿ
  • 131ನೇ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರೋ ನಟ ಶಿವಣ್ಣ
  • ಸಿನಿಮಾ ಶೂಟಿಂಗ್ ಬ್ಯುಸಿ ಮಧ್ಯೆಯೂ ಗಾಜನೂರಿಗೆ ಹೋದ ನಟ

ಸ್ಯಾಂಡಲ್​ವುಡ್​ ಸ್ಟಾರ್​ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ತಮ್ಮ 131ನೇ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿ ನಡುವೆಯೂ ನಟ ಶಿವಣ್ಣ ತಂದೆ ಡಾ. ರಾಜ್​ ಕುಮಾರ್​ ಅವರ ಹುಟ್ಟೂರಿಗೆ ಭೇಟಿ ಕೊಟ್ಟಿದ್ದಾರೆ.

publive-image

ಹೌದು, ನಟ ಶಿವಣ್ಣ ಹಾಗೂ ಪತ್ನಿ ಗೀತಕ್ಕ ಗಾಜನೂರಿನಲ್ಲಿರುವ ಸೋದರತ್ತೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಬಂಧುಗಳ ಜೊತೆಗೆ ಕೆಲ ಹೊತ್ತ ಅಮೂಲ್ಯವಾದ ಸಮಯವನ್ನು ಕಳೆದಿದ್ದಾರೆ.

ಇದನ್ನೂ ಓದಿ:ಮತ್ತೆ ಶೂಟಿಂಗ್ ಅಖಾಡಕ್ಕಿಳಿದ ಶಿವಣ್ಣ.. ಕಮ್ ಬ್ಯಾಕ್‌ನ ಸ್ಪೆಷಲ್ ಫೋಟೋಗಳು ಇಲ್ಲಿವೆ!

ಇನ್ನೂ, ನಟ ಶಿವಣ್ಣ ಅವರು ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಇದೇ ಮೊದಲ ಬಾರಿಗೆ ಗಾಜನೂರಿಗೆ ಭೇಟಿ ಕೊಟ್ಟಿದ್ದು ವಿಶೇಷವಾಗಿತ್ತು. ಡಾ.ರಾಜ್​ಕುಮಾರ್​ ಅವರ ಸಹೋದರಿ ನಾಗಮ್ಮ ಆರೋಗ್ಯ ವಿಚಾರಿಸಿ ಜೊತೆಗೆ ಅವರ ಜೊತೆಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನೂ, ಶಿವಣ್ಣ ಅವರನ್ನು ನೋಡುತ್ತಿದ್ದಂತೆ ಸೋದರತ್ತೆ ನಾಗಮ್ಮ ಅವರು ಮುದ್ದಾಡಿದ್ದಾರೆ.

publive-image

ಸದ್ಯ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಅಮೆರಿಕಾಗೆ ಚಿಕಿತ್ಸೆಗಾಗಿ ಹೋಗಿದ್ದರು. ಒಂದು ತಿಂಗಳ ಬಳಿಕ ಅಮೆರಿಕದಿಂದ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದಾದ ಬಳಿಕ ಎರಡು ತಿಂಗಳ ಬಳಿಕ ಮತ್ತೆ ಹೊಸ ಸಿನಿಮಾದ ಶೂಟಿಂಗ್​ಗೆ ಮರಳಿದ್ದಾರೆ. ಮೊನ್ನೆಯಷ್ಟೇ 131ನೇ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗಿ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment