/newsfirstlive-kannada/media/post_attachments/wp-content/uploads/2025/02/SHIVANNA.jpg)
ಶಸ್ತ್ರಚಿಕಿತ್ಸೆ ಬಳಿಕ ನಟ ಶಿವಣ್ಣ ಚೇತರಿಸಿಕೊಂಡಿದ್ದು, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರು ರಾಯರ ದರ್ಶನ ಪಡೆದರು.
ವಿಶ್ರಾಂತಿಯಲ್ಲಿರುವ ಶಿವಣ್ಣ ಶೂಟಿಂಗ್​ನಿಂದ ಬಿಡುವು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಿವಣ್ಣ ಜೊತೆ ಪತ್ನಿ ಗೀತಾ ಶಿವರಾಜ್​ಕುಮಾರ್, ಪುತ್ರಿ ನಿವೇದಿತಾ ಕೂಡ ಇದ್ದರು. ಡಾ.ರಾಜ್ ಕುಟುಂಬ ಮೊದಲಿನಿಂದಲೂ ಗುರು ರಾಯರನ್ನು ಆರಾಧಿಸುತ್ತ ಬಂದಿದೆ.
ಇದನ್ನೂ ಓದಿ: 5 ದಾಖಲೆ ಬರೆದ ಮಹಾಕುಂಭ.. 41 ದಿನದಲ್ಲಿ ಎಷ್ಟು ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ರು?
/newsfirstlive-kannada/media/post_attachments/wp-content/uploads/2025/02/Shivanna-2.jpg)
ಇನ್ನು ಕೆಲವೇ ದಿನಗಳಲ್ಲಿ ಶಿವಣ್ಣ ಚಿತ್ರೀಕರಣಕ್ಕೆ ವಾಪಸ್ಸಾಗಲಿದ್ದು, ಈಗಾಗಲೇ ಬಿರುಸಿನ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಸದ್ಯಕ್ಕೆ 45 ಸಿನಿಮಾ ಕೊನೆಯ ಹಂತದ ಪ್ಯಾಚ್ ವರ್ಕ್​ನಲ್ಲಿದೆ. ಪ್ರಮೋಷನಲ್ ಸಾಂಗ್ ಶೂಟಿಂಗ್​ಗಾಗಿ ಶಿವಣ್ಣ ಉಗಾಂಡಗೆ ತೆರಳುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಶಿವಣ್ಣಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಅಮೆರಿಕಗೆ ತೆರಳಿದ್ದ ಅವರು, ಅಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.
ಇದನ್ನೂ ಓದಿ: ಮಹಾಕಾಳಿ ಅವತಾರ ತಾಳಿದ ಗಿಚ್ಚಿ ಗಿಲಿಗಿಲಿ ಪ್ರಿಯಾಂಕಾ ಕಾಮತ್.. ಚಂಡಿ ನೃತ್ಯಕ್ಕೆ ಎಲ್ಲರೂ ಶಾಕ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us