ನಾನು ಅಣ್ಣಾವ್ರ ಮಗ.. ಕಮಲ್ ಹಾಸನ್ ಹೇಳಿಕೆಯ ವಿವಾದಕ್ಕೆ ಶಿವಣ್ಣ ಸ್ಪಷ್ಟನೆ; ಏನಂದ್ರು?

author-image
admin
Updated On
ಕಾವೇರಿ ಹೋರಾಟದ ವೇಳೆ ತಮಿಳು ನಟನಿಗೆ ಕ್ಷಮಿಸಿ ಎಂದ ಶಿವರಾಜ್​ ಕುಮಾರ್​! ಯಾಕೆ ಗೊತ್ತಾ?
Advertisment
  • ನಾನೇನು ಕಮಲ್ ಹಾಸನ್ ಅವರನ್ನ ಸಮರ್ಥನೆ ಮಾಡಿಕೊಳ್ಳಲ್ಲ
  • ಆ ಸಂದರ್ಭದಲ್ಲಿ ಏನು ಮಾತಾಡ್ತಿದ್ದಾರೆ ಅನ್ನೋದು ಗೊತ್ತಾಗಲಿಲ್ಲ
  • ಸ್ಟೇಜ್‌ನಲ್ಲಿ ನೀವು ಯಾಕೆ ಪ್ರಶ್ನೆ ಮಾಡಲಿಲ್ಲ ಅನ್ನೋ ಪ್ರಶ್ನೆಗೆ ಉತ್ತರ

ಬೆಂಗಳೂರು: ಕನ್ನಡ ಭಾಷೆಗೆ ಅವಮಾನಿಸಿ ಕನ್ನಡಿಗರನ್ನು ಕೆರಳಿಸಿದ ಕಮಲ್ ಹಾಸನ್ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಸಂದರ್ಭದಲ್ಲಿ ಏನು ಮಾತಾಡ್ತಿದ್ದಾರೆ ಅನ್ನೋದು ಗೊತ್ತಾಗಲಿಲ್ಲ. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ ಎಂದು ನಟ ಶಿವರಾಜ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಣ್ಣ, ನಾನೇನು ಕಮಲ್ ಹಾಸನ್ ಅವರನ್ನ ಸಮರ್ಥನೆ ಮಾಡಿಕೊಳ್ಳಲ್ಲ. ಭಾಷೆ ಬಗ್ಗೆ ಮಾತಾಡ್ತಿದ್ದಾರೆ ಅಂದಾಗ ನಾನು ಕೈ ತಟ್ಟಿದ್ದು ನಿಜ. ಆದರೆ ಆ ಸಂದರ್ಭದಲ್ಲಿ ಏನು ಮಾತಾಡ್ತಿದ್ದಾರೆ ಅಂತಾ ಗೊತ್ತಾಗಲಿಲ್ಲ ಎಂದಿದ್ದಾರೆ.

publive-image

ಕನ್ನಡ ಅಭಿಮಾನದ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ಕನ್ನಡ ಅಭಿಮಾನ ಏನು ಅನ್ನೋದು ನಮಗೂ ಗೊತ್ತಿದೆ. ನಾನು ಕೂಡ ಕನ್ನಡದ ಅಭಿಮಾನಿ. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ.

ಸ್ಟೇಜ್‌ನಲ್ಲಿ ನೀವು ಯಾಕೆ ಪ್ರಶ್ನೆ ಮಾಡಲಿಲ್ಲ ಅಂದಾಗ ನನಗೆ ಅವರು ಮಾತಾಡಿದ್ದು ಸ್ಪಷ್ಟವಾಗಿ ಕೇಳಲಿಲ್ಲ. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೇ ಗೊತ್ತಾಗಿದ್ದು. ಆ ಕಾರ್ಯಕ್ರಮದಲ್ಲಿ ಅವರ ಮಾತು ನನಗೆ ಸ್ಪಷ್ಟವಾಗಿ ಕೇಳಿಸಲಿಲ್ಲ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಕಿಸ್​ ಬೆಡಗಿಗೆ ಫಿಕ್ಸ್​ ಆಯ್ತಾ ಮದುವೆ? ಶ್ರೀಲೀಲಾ ಫೋಟೋ ನೋಡಿ ಫ್ಯಾನ್ಸ್ ಶಾಕ್‌! 

ಕಲಾವಿದನಾಗಿ ಭಾಷೆ ಬಗ್ಗೆ ಮಾತಾನಾಡುತ್ತಿದ್ದಾರೆಂದು ಚಪ್ಪಾಳೆ ತಟ್ಟಿದೆ. ಕಮಲ್‌ ಹಾಸನ್ ಮಾತಾಡಿದ್ದನ್ನ ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment