ಶಿವಣ್ಣನ ಎನರ್ಜಿಗೆ ಸರಿಸಾಟಿ ಯಾರು.. ಡ್ಯಾನ್ಸ್ ನೋಡಿ ಫ್ಯಾನ್ಸ್​ ಫುಲ್​ ಶಾಕ್; ವಿಡಿಯೋ ಇಲ್ಲಿದೆ!

author-image
Veena Gangani
Updated On
ಶಿವಣ್ಣನ ಎನರ್ಜಿಗೆ ಸರಿಸಾಟಿ ಯಾರು.. ಡ್ಯಾನ್ಸ್ ನೋಡಿ ಫ್ಯಾನ್ಸ್​ ಫುಲ್​ ಶಾಕ್; ವಿಡಿಯೋ ಇಲ್ಲಿದೆ!
Advertisment
  • ಶಸ್ತ್ರ ಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ಭರ್ಜರಿ ಡ್ಯಾನ್ಸ್​ ಮಾಡಿದ ನಟ
  • ಡ್ಯಾನ್ಸ್ ಮೂಲಕವೇ​ ನೋಡುಗರ ಹುಬ್ಬೇರಿಸುವಂತೆ ಮಾಡಿದ ಹೀರೋ
  • ಮಗಳು ನಿವೇದಿತಾ ಮುಂದೆಯೇ ಕುಣಿದು ಕುಪ್ಪಳಿಸಿದ ನಟ ಶಿವಣ್ಣ

ಹ್ಯಾಟ್ರಿಕ್‌ ಹೀರೋ ಶಿವಣ್ಣ ಅವರ ಎನರ್ಜಿ ಬಗ್ಗೆ ಅಭಿಮಾನಿಗಳಿಗೆ ಗೊತ್ತೇ ಇದೆ. ಈ ಹಿಂದೆ ಡಿಕೆಡಿ ವೇದಿಕೆ ಮೇಲೆ ಸಾಕಷ್ಟು ಭಾರೀ ಡ್ಯಾನ್ಸ್​ ನೋಡುಗರ ಹುಬ್ಬೇರಿಸುವಂತೆ ಮಾಡುತ್ತಿದ್ದರು. ಶೋನಲ್ಲಿ ಯಾವುದೇ ಸಾಂಗ್​​ ಹಾಕಿದ್ರೂ ಕೂಡ ಒಂದು ಸಖತ್​ ಎನರ್ಜಿಟಿಕ್ ಆಗಿ ಡ್ಯಾನ್ಸ್​ ಮಾಡುತ್ತಿದ್ದರು ಶಿವಣ್ಣ.

ಇದನ್ನೂ ಓದಿ: ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?

publive-image

ಆದ್ರೆ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಕಳೆದ ಕೆಲವು ತಿಂಗಳಿನಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲು ಶಿವಣ್ಣ ಕುಟುಂಬ ಸಮೇತ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಒಂದು ತಿಂಗಳ ಬಳಿಕ ಮತ್ತೆ ತಮ್ಮ ನಿವಾಸಕ್ಕೆ ಆಗಮಿಸಿದ್ದರು.

publive-image

ಇನ್ನೂ, ಶಿವಣ್ಣ ಅವರ ಆರೋಗ್ಯದ ಸಮಸ್ಯೆ ತಿಳಿಯುತ್ತಿದ್ದಂತೆ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಶಸ್ತ್ರ ಚಿಕಿತ್ಸೆ ಬಳಿಕ ಗುಣಮುಖರಾಗಿ ಬಂದ ಶಿವಣ್ಣ ಅವರು ಇದೀಗ ವೇದಿಕೆ ಮೇಲೆ ಭರ್ಜರಿ ಡ್ಯಾನ್ಸ್​ ಮಾಡಿದ್ದಾರೆ. ಅದು ಕೂಡ ಟಗರು ಬಂತು ಟಗರು ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಹೌದು, ಏಪ್ರಿಲ್ 24ರಂದು ನಟ ಶಿವರಾಜ್​ ಕುಮಾರ್​ ಮಗಳು ನಿವೇದಿತಾ ಅವರ ಮೊದಲ ನಿರ್ಮಾಣದ ಸಿನಿಮಾ ‘ಫೈರ್ ಫ್ಲೈ’ ಬಿಡುಗಡೆಯಾಗುತ್ತಿದೆ. ಇದೇ ಚಿತ್ರದ ಪ್ರಚಾರದ ವೇಳೆ ದಯಾನಂದ್ ಸಾಗರ್ ಕಾಲೇಜಿನಲ್ಲಿ ಟಗರು ಹಾಡಿಗೆ ಶಿವಣ್ಣ ಅವರು ಡ್ಯಾನ್ಸ್​ ಮಾಡಿದ್ದಾರೆ. ಶಿವಣ್ಣ ಡ್ಯಾನ್ಸ್​ ನೋಡಿದ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಫುಲ್​ ಶಾಕ್ ಆಗಿದ್ದಾರೆ. ಅಬ್ಬಬ್ಬಾ.. ನಮ್ಮ ಬಾಸ್​ ಎನರ್ಜಿ ಮುಂದೆ ಯಾರು ಇಲ್ಲ ಬಿಡಿ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment