/newsfirstlive-kannada/media/post_attachments/wp-content/uploads/2024/12/SHIVANNA-1.jpg)
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸಿನಿಮಾಗಳಲ್ಲಿ ನಟನೆಯ ಜೊತೆಗೆ ಆಗಾಗ ದೇವಾಲಯಗಳಿಗೂ ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳನ್ನ ಕೇಳಿಕೊಳ್ಳುತ್ತಾರೆ. ಡಾ.ರಾಜ್ಕುಮಾರ್ ಕೂಡ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಯ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ಮೊದಲಿಂದಲೂ ಅಣ್ಣಾವ್ರ ಕುಟುಂಬ ಸಿನಿಮಾಗಳ ಜೊತೆ ಜೊತೆಗೆ ದೈವ ಭಕ್ತಿಗೆ ಹೊತ್ತು ಕೊಡುತ್ತಾರೆ. ಇದೀಗ ಶಿವಣ್ಣ ದಂಪತಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಮುಡಿ ಕೊಟ್ಟಿದ್ದಾರೆ.
ಡಾ.ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಇಬ್ಬರು ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭೇಟಿಕೊಟ್ಟಿದ್ದಾರೆ. ಇಂದು ಬೆಳಗಿನ ಜಾವ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿ, ದರ್ಶನ ಪಡೆದುಕೊಂಡ ಬಳಿಕ ಮುಡಿ ಕೊಟ್ಟಿದ್ದಾರೆ. ಶಿವಣ್ಣನ ಜೊತೆ ಗೀತಾ ಶಿವರಾಜ್ಕುಮಾರ್ ಕೂಡ ಮುಡಿ ಕೊಟ್ಟಿದ್ದಾರೆ. ಇದೇ ವೇಳೆ ಶಿವಣ್ಣ ದಂಪತಿ ಜೊತೆ ಕುಟುಂಬಸ್ಥರು, ಆಪ್ತ ಗೆಳೆಯರು ಕೂಡ ಇದ್ದರು.
ಇದನ್ನೂ ಓದಿ: ಪವಾಡ ಎಂಬಂತೆ ಕ್ಯಾನ್ಸರ್ ಗೆದ್ದ ಮಗಳು.. 1500 Km ದೂರದ ಅಯೋಧ್ಯೆಗೆ ಪಾದಯಾತ್ರೆ ಮಾಡಿದ ತಂದೆ
ಇತ್ತೀಚೆಗಷ್ಟೇ ಶಿವರಾಜ್ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತ್ತು. ಸಿನಿಮಾದಲ್ಲಿ ಶಿವಣ್ಣ ಅವರ ಆ್ಯಕ್ಟಿಂಗ್, ಡೈಲಾಗ್ ಮತ್ತು ಚಿತ್ರದಲ್ಲಿ ಅವರ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಶಿವಣ್ಣ ಇನ್ನು ಯಂಗ್ ಆಗಿಯೇ ಕಾಣಿಸುತ್ತಾರೆ ಎಂದು ಫ್ಯಾನ್ಸ್ ಆಶಯ ವ್ಯಕ್ತಪಡಿಸಿದ್ದರು.
ಇನ್ನು ಶಿವರಾಜ್ಕುಮಾರ್ ಅವರಿಗೆ ಕೊಂಚ ಅನಾರೋಗ್ಯ ಇರುವ ಕಾರಣ ಇದೇ ತಿಂಗಳು ಚಿಕಿತ್ಸೆಗೆಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಮೊದಲೇ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡು ಮುಡಿ ಕೊಟ್ಟಿದ್ದಾರೆ. ಸದ್ಯ ಈ ಸಂಬಂಧದ ಫೋಟೋಗಳು ನ್ಯೂಸ್ಫಸ್ಟ್ಗೆ ಲಭ್ಯವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ