Advertisment

ಅಮೆರಿಕಾದಿಂದ ವಾಪಸ್​ ಆದ ಶಿವರಾಜ್​ಕುಮಾರ್; ಶ್ರೀಮುತ್ತು ನಿವಾಸದ ಮುಂದೆ ಹಬ್ಬದ ವಾತಾವರಣ

author-image
Gopal Kulkarni
Updated On
ಅಮೆರಿಕಾದಿಂದ ವಾಪಸ್​ ಆದ ಶಿವರಾಜ್​ಕುಮಾರ್; ಶ್ರೀಮುತ್ತು ನಿವಾಸದ ಮುಂದೆ ಹಬ್ಬದ ವಾತಾವರಣ
Advertisment
  • ತಿಂಗಳು ಬಳಿಕ ಅಮೆರಿಕಾದಿಂದ ಬೆಂಗಳೂರಿಗೆ ವಾಪಸ್ ಆದ ಶಿವಣ್ಣ
  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ
  • ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರಿಂದ ಹರಸಾಹಸ, ನೂಕುನುಗ್ಗಲು

ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್ ನಟ ಶಿವರಾಜ್​ ಕುಮಾರ್ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗುಣಮುಖರಾಗಿ ವಾಪಸ್​ ಬೆಂಗಳೂರಿಗೆ ಮರಳಿದ್ದಾರೆ. ಸುಮಾರು ಒಂದು ತಿಂಗಳುಗಳ ಕಾಲ ಅಮೆರಿಕಾದಲ್ಲಿದ್ದ ಶಿವರಾಜ್ ಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದು ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಕಾದಿತ್ತು.

Advertisment

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತಕೋರಿದರು. ಕೇಕ್ ಕಟ್​ ಮಾಡಿ ಸಂಭ್ರಮಿಸಿದರು. ನೆಚ್ಚಿನ ನಟನ ಸ್ವಾಗತ ಮಾಡುವ ವೇಳೆ ಅಭಿಮಾನಿಗಳ ನಡುವೆ ನೂಕುನುಗ್ಗಲು ಕೂಡ ಸಂಭವಿಸಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯ್ತು.

ಇದನ್ನೂ ಓದಿ:ಕರ್ನಾಟಕ ವೀರನನ್ನು ತಮಿಳಿಗನನ್ನಾಗಿ ತೋರಿಸಿತಾ ಅಕ್ಷಯ್ ಕುಮಾರ್ ಚಿತ್ರ; ಕೆರಳಿ ಕೆಂಡವಾಗಿದ್ದೇಕೆ ಕೊಡವ ಸಮುದಾಯ?

ಇನ್ನು ಶಿವಣ್ಣನ ನಿವಾಸ ಶ್ರೀಮುತ್ತು ಮುಂದೆ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಶಿವಣ್ಣನನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಸೇರಿದೆ. ಈಗಾಗಲೇ ಏರ್​​ಪೋರ್ಟ್​​ನಿಂದ ಗೀತಾ ಶಿವರಾಜ್​ ಕುಮಾರ್ ಜೊತೆ ಕಾರ್​ನಲ್ಲಿ ಮನೆಗೆ ತೆರಳಿರುವ ಶಿವಣ್ಣ ಕೆಲವೇ ಕ್ಷಣಗಳಲ್ಲಿ ಮನೆ ಸೇರಲಿದ್ದಾರೆ

Advertisment

publive-image

ಈಗಾಗಲೇ ಅಭಿಮಾನಿಗಳು ಹೂವುಗಳ ಬುಟ್ಟಿಯನ್ನೇ ತಂದಿಟ್ಟುಕೊಂಡಿದ್ದಾರೆ. ಶಿವಣ್ಣ ಹಾಗೂ ಗೀತಕ್ಕರ ದೊಡ್ಡ ಕಟೌಟ್​ನ್ನು ಮನೆಯ ಮುಂದೆ ನಿಲ್ಲಿಸಿದ್ದಾರೆ ಶಿವರಾಜ್ ಕುಮಾರ್ ಬರುವುದನ್ನೇ ಅವರು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment