ಕ್ಯಾನ್ಸರ್ ಗೆದ್ದ ಶಿವಣ್ಣ.. ಅಮೆರಿಕದಿಂದಲೇ I will back ಎಂದ ಸೆಂಚುರಿ ಸ್ಟಾರ್​

author-image
Bheemappa
Updated On
ಶಿವಣ್ಣನಿಗೆ ಒಂದೇ ಸಲ 6 ಆಪರೇಷನ್, 190 ಹೊಲಿಗೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಮಧು ಬಂಗಾರಪ್ಪ!
Advertisment
  • ಫುಲ್ ಹ್ಯಾಪಿ ಆಗಿ ನ್ಯೂ ಇಯರ್​ಗೆ ವಿಶ್ ಮಾಡಿದ ಶಿವಣ್ಣ
  • ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಎಲ್ಲ ಟೆಸ್ಟ್​ಗಳು ಪಾಸಿಟಿವ್
  • ಯಾರು ಯಾರಿಗೆ ಶಿವಣ್ಣ ಧನ್ಯವಾದಗಳು ಹೇಳಿದರು ಗೊತ್ತಾ?

ಅಮೆರಿಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕ್ಯಾನ್ಸರ್​ಗೆ ಸರ್ಜರಿ ಮಾಡಿಸಿಕೊಂಡಿರುವ ಶಿವರಾಜ್​ ಕುಮಾರ್ ಅವರು ಫುಲ್ ಹ್ಯಾಪಿಯಾಗಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಎಲ್ಲ ಟೆಸ್ಟ್​ಗಳು ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅವರು ಫುಲ್ ಖುಷಿಯಾಗಿ ಮಾತನಾಡಿದ್ದಾರೆ. ಅಲ್ಲದೇ ಐ ವಿಲ್ ಬ್ಯಾಕ್, ಮೊದಲಿಗಿಂತ ಎರಡರಷ್ಟು ಪವರ್ ಇದ್ದೇ ಇರುತ್ತೆ ಎಂದು ಹೇಳಿದ್ದಾರೆ. ​

ತಮ್ಮ ಅಧಿಕೃತ ಇನ್​ಸ್ಟಾದಲ್ಲಿ ಮಾತನಾಡಿರುವ ಶೀವರಾಜ್ ಕುಮಾರ್ ಅವರು, ಅಭಿಮಾನಿ ದೇವರುಗಳು, ಕೋ ಆರ್ಟಿಸ್ಟ್​, ಸಂಬಂಧಿಕರು, ಡಾಕ್ಟರ್ಸ್, ಕಿಮೋ ಮಾಡಿರುವ ಡಾಕ್ಟರ್​ ಶಶಿಧರ್, ದಿಲೀಪ್, ಗೀತಾ, ಶ್ರೀನಿವಾಸ್, ನರ್ಸ್​ಗಳು ಪ್ರತಿಯೊಬ್ಬರು ಚೆನ್ನಾಗಿ ನೋಡಿಕೊಂಡಿದ್ದರಿಂದ ಧೈರ್ಯವಾಗಿ ಇರುತ್ತಿದ್ದೆ. ಹೀಗಾಗಿಯೇ ಶೂಟಿಂಗ್​ ಅನ್ನು ಏನೋ ಒಂದು ಜೋಶ್​ನಿಂದ ಮಾಡಿಬಿಡುತ್ತಿದ್ದೆ. ಕಿಮೋದಲ್ಲೇ 45 ಸಿನಿಮಾಗಳ ಶೂಟಿಂಗ್​ನಲ್ಲಿ ಫೈಟ್ ಎಲ್ಲ ಮಾಡಿರುವ ಕ್ರೆಡಿಟ್​ ರವಿವರ್ಮಾ ಅವರಿಗೆ ಹೋಗಬೇಕು ಎಂದು ಹೇಳಿದ್ದಾರೆ.

publive-image

ಇದನ್ನೂ ಓದಿ:ಕನ್ನಡಿಗರಿಗೆ ಪ್ರೀತಿಯ ಶುಭಾಶಯ ಹೇಳಿದ ಶಿವಣ್ಣ; ಕ್ಯಾನ್ಸರ್​ ವಿರುದ್ಧ ಗೆದ್ದ ಹೋರಾಟದ ಬಗ್ಗೆ ಹೇಳಿದ್ದೇನು?

ಗೆಳೆಯರಾದ ಶೇಖರ್, ವಿಜಯ್ ಪ್ರಸಾದ್, ನಟ ಅಂತ ಕಸಿನ್ ಒಬ್ಬರು ಜೊತೆಗೆ ಇದ್ದರು. ಗೀತಾ ಅಂತೂ ಯಾವಾಗಲೂ ನನ್ನ ಜೊತೆ ಇರುತ್ತಿದ್ದರು. ಜೀವನದಲ್ಲಿ ಗೀತಾ ಇಲ್ಲ ಅಂದರೆ ಶಿವಣ್ಣ ಇಲ್ಲವೇ ಇಲ್ಲ. ಹೆಂಡತಿ ಸಪೋರ್ಟ್ ಎಷ್ಟು ಇದೆಯೋ ಅಷ್ಟೇ ಮಗಳು ಸಪೋರ್ಟ್​ ಕೂಡ ಇದೆ. ಪ್ರಶಾಂತ್, ಅಮೆರಿಕದಲ್ಲಿರುವ ಅನು, ಮಧು, ಮನೋಹರ, ಬ್ಯಾಪ್ಟಿಸ್ಟ್ ಆಸ್ಪತ್ರೆಯ ಮಿಯಾಮಿಯ ಕ್ಯಾನ್ಸರ್​ ಸೆಂಟರ್​ನ ವೈದ್ಯರು, ನರ್ಸ್​ಗಳು ಎಲ್ಲರೂ ಸೇರಿ ನನ್ನನ್ನು ಮಗು ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಈಗ ಆರೋಗ್ಯವಾಗಿದ್ದೇನೆ. ವೈದ್ಯರು ಮೊದಲು ಒಂದು ತಿಂಗಳು ನಿಧಾನವಾಗಿ ಇರಬೇಕು ಎಂದು ಹೇಳಿದ್ದಾರೆ. ಆ ಮೇಲೆ ಬೇಕಾದರೆ ನೀವು ಮೊದಲಿನಂತೆ ಏನು ಬೇಕಾದರೂ ಮಾಡಿ ಎಂದಿದ್ದಾರೆ. ಐ ವಿಲ್​ ಬಿ ಬ್ಯಾಕ್. ಶಿವಣ್ಣ ಆವಾಗ ಹೇಗಿದ್ದನೋ ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್​, ಫೈಟ್, ಲುಕ್​ ಎಲ್ಲದರಲ್ಲೂ ಇರುತ್ತೆ. ಮತ್ತೆ ನೀವು ನೋಡುತ್ತೀರಾ. ನಿಮ್ಮ ಪ್ರೀತಿ ವಿಶ್ವಾಸ ಯಾವಾತ್ತೂ ಮರೆಯಲ್ಲ, ನಿಮ್ಮ ಆಶೀರ್ವಾದ ಇರುವವರೆಗೂ ನಾನು ಖಂಡಿತಾ ಇದ್ದೆ ಇರುತ್ತೇನೆ. ಎಲ್ಲರಿಗೂ ಫ್ಲೈಯಿಂಗ್ ಕಿಸ್ ಕೊಟ್ಟು ಲವ್ ಯು ಆಲ್, ಹ್ಯಾಪಿ ನ್ಯೂ ಇಯರ್ ಎಂದು ಶಿವಣ್ಣ ವಿಶ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment