‘RCB ಅಂದ್ರೆ ನಮ್ಮ ಜೀವ, ಪ್ರಾಣ’.. ನೆಚ್ಚಿನ ಟೀಮ್ ಬಗ್ಗೆ ಶಿವಣ್ಣ ಹೇಳಿದ್ದೇನು?

author-image
Bheemappa
Updated On
‘RCB ಅಂದ್ರೆ ನಮ್ಮ ಜೀವ, ಪ್ರಾಣ’.. ನೆಚ್ಚಿನ ಟೀಮ್ ಬಗ್ಗೆ ಶಿವಣ್ಣ ಹೇಳಿದ್ದೇನು?
Advertisment
  • ಆರ್​ಸಿಬಿ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಏನಂದ್ರು?
  • ಸೋಲನ್ನೇ ನೋಡದ ಡೆಲ್ಲಿಗೆ ಕಹಿ ಉಣಿಸುತ್ತಾ ಬೆಂಗಳೂರು ತಂಡ?
  • ಆರ್​ಸಿಬಿ ಜೆರ್ಸಿಯಲ್ಲಿ ಶಿವಣ್ಣ ಮಿಂಚಿಂಗ್, ತಂಡ ಎಂದ್ರೆ ನಮ್ಮ ಜೀವ

2025ರ 18ನೇ ಐಪಿಎಲ್​ ಸೀಸನ್ ಉದ್ಘಾಟನಾ ಪಂದ್ಯದಿಂದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಗೆಲುವಿನ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಆರ್​ಸಿಬಿ ಭರ್ಜರಿ ಗೆಲುವು ಪಡೆದಿತ್ತು. 2ನೇ ಪಂದ್ಯದಲ್ಲಿ 17 ವರ್ಷಗಳ ಬಳಿಕ ಚೈನ್ನೈ ತಂಡವನ್ನು ತವರಿನ ಅಂಗಳದಲ್ಲೇ ಬಗ್ಗು ಬಡಿದಿತ್ತು. ಈ ಸಲದ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಆರ್​ಸಿಬಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಶುಭಾಶಯ ತಿಳಿಸಿದ್ದಾರೆ.

ಸ್ಯಾಂಡಲ್​ವುಡ್​ನ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್ ಸದ್ಯ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಗುಡ್​ಲಕ್ ಹೇಳಿದ್ದಾರೆ. ಆರ್​ಸಿಬಿ ತಂಡದ ಜೆರ್ಸಿ ಧರಿಸಿ ಶಿವರಾಜ್​ ಕುಮಾರ್ ಅವರು ಮಾತನಾಡಿರುವ ವಿಡಿಯೋವನ್ನು ಆರ್​ಸಿಬಿ ಫ್ರಾಂಚೈಸಿ ತಮ್ಮ ಅಧಿಕೃತ ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್ ಮಾಡಿದೆ. 18ನೇ ಸೀಸನ್​ನಲ್ಲಿ ಆರ್​ಸಿಬಿ ಎಲ್ಲ ರೀತಿಯಿಂದಲೂ ಒಳ್ಳೆಯ ಆಟ ಆಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RCB vs DC; ತವರಿನ ನೆಲದಲ್ಲಿ ಯುವ ಕನ್ನಡಿಗನಿಗೆ ಚಾನ್ಸ್​ ಸಿಗುತ್ತಾ.. ಮನ್ವಂತ್ ಕುಮಾರ್ ಯಾರು?

publive-image

ವಿಡಿಯೋದಲ್ಲಿ ಮಾತನಾಡಿರುವ ಶಿವಣ್ಣ ಅವರು, ಈಗಾಗಲೇ ಐಪಿಎಲ್ ಸೀಸನ್ ಆರಂಭವಾಗಿದೆ. ಇದು 18 ಸೀಸನ್​ ಆಗಿದೆ. 18 ವರ್ಷದಿಂದಲೂ ನಮಗೆ ಆರ್​ಸಿಬಿ ಕಂಡ್ರೆ ಏನೋ ಒಂದು ಥರಾ ಜೋಶ್, ಉತ್ಸಾಹ ತುಂಬಿ ತುಳುಕುತ್ತದೆ. ಆರ್​ಸಿಬಿ ಎಂದರೆ ನಮ್ಮ ಜೀವ, ಪ್ರಾಣ. ತಂಡ ಬೆಂಗಳೂರನ್ನ ಪ್ರತಿನಿಧಿಸಿದರೂ ನಮ್ಮ ಸಂಸ್ಕೃತಿ, ಭಾಷೆ ಉಳಿಸುತ್ತದೆ. ಯಾವಾಗಲೂ ಆರ್​ಸಿಬಿ ಜೋಶ್​ನಲ್ಲಿ ಮುನ್ನುಗ್ಗುತ್ತಿರುತ್ತದೆ. 18 ಸೀಸನ್​ನಲ್ಲಿ ಆರ್​ಸಿಬಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಶಿವಣ್ಣ ಶುಭಾಶಯ ತಿಳಿಸಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಇನ್ನೇನು ಕೆಲವೇ ಕ್ಷಣಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಎದುರಿಸಲಿದೆ. 18ನೇ ಆವೃತ್ತಿಯಲ್ಲಿ ಹೋಮ್​ಗ್ರೌಂಡ್​ನಲ್ಲಿ ನಡೆದ ಮೊದಲ ಪಂದ್ಯದಲ್ಲೇ ಆರ್​ಸಿಬಿ ಸೋತರೂ, ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ತಂಡ ಎನಿಸಿದೆ. ಟೂರ್ನಿ ಆರಂಭದಿಂದ ಸೋಲನ್ನೇ ಕಾಣದ ಡೆಲ್ಲಿಗೆ ಬೆಂಗಳೂರು ಮೊದಲ ಕಹಿ ಉಣಿಸುತ್ತ ಎಂದು ಕಾದು ನೋಡಬೇಕಿದೆ.


">April 10, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment