ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೆ ಆ ಸ್ಥಳಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ.. ಶಿವಣ್ಣ ಹೇಳಿದ್ದೇನು?

author-image
Veena Gangani
Updated On
ಬರೋಬ್ಬರಿ 29 ವರ್ಷಗಳ ಬಳಿಕ ಮತ್ತೆ ಆ ಸ್ಥಳಕ್ಕೆ ಭೇಟಿ ಕೊಟ್ಟ ಹ್ಯಾಟ್ರಿಕ್ ಹೀರೋ.. ಶಿವಣ್ಣ ಹೇಳಿದ್ದೇನು?
Advertisment
  • ಪತ್ನಿ ಗೀತಾ ಜೊತೆಗೆ ಇಷ್ಟವಾದ ಸ್ಥಳಕ್ಕೆ ಭೇಟಿ ಕೊಟ್ಟ ಶಿವಣ್ಣ
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಯ್ತು ಈ ಫೋಟೋ
  • ಬರೋಬ್ಬರಿ 29 ವರ್ಷಗಳ ಸ್ಯಾಂಡಲ್​ವುಡ್​ ಸ್ಟಾರ್ ಹೋಗಿದ್ದೆಲ್ಲಿಗೆ?

ಸ್ಯಾಂಡಲ್​ವುಡ್​ ಸ್ಟಾರ್ ನಟ ಶಿವಣ್ಣ ಬರೋಬ್ಬರಿ 29 ವರ್ಷಗಳ ನಂತರ ಮತ್ತೆ ಯಾಣಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ​ಗೆಂದು ಅಮೆರಿಕಾಗೆ ಹೋಗಿ ಬಂದು ಫ್ರೀಯಾಗಿ ತಮಗಿಷ್ಟವಾಗಿರೋ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ.

ಇದನ್ನೂ ಓದಿ:ಬಿಗ್ ಬಾಸ್ ತ್ರಿವಿಕ್ರಮ್ ಜೊತೆ ಸಿನಿಮಾ ಆಫರ್​.. ಈ ಬಗ್ಗೆ ಮೋಕ್ಷಿತಾ ಪೈ ಏನಂದ್ರು?

publive-image

ಹೌದು, ನಟ ಶಿವರಾಜ್​ಕುಮಾರ್​ ಅವರು ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ ಆಗಿರೋ ಅವರು ಜೊತೆ ಪತ್ನಿ ಗೀತಾ ಜೊತೆಗೆ ಯಾಣಗೆ ತೆರಳಿದ್ದಾರೆ. 29 ವರ್ಷಗಳ ಹಿಂದೆ ಶಿವಣ್ಣ, ರಮೇಶ್ ಅರವಿಂದ್, ಪ್ರೇಮಾ ಅಭಿನಯದ ನಮ್ಮೂರ ಮಂದಾರ ಹೂವೇ ಸಿನಿಮಾದ ಶೂಟಿಂಗ್​ ಅನ್ನು ಯಾಣದಲ್ಲಿ ಮಾಡಲಾಗಿತ್ತು. ಇದೀಗ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಫುಲ್​ ಖುಷ್ ಆಗಿದ್ದಾರೆ.

publive-image

ಇನ್ನೂ, ನಟ ಯಾಣಕ್ಕೆ ಹೋಗಿರು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ‘ಬಾಳಿನ ಬೆನ್ನು ಹತ್ತಿ.. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..’ ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ ಅಂತ ಬರೆದುಕೊಂಡಿದ್ದಾರೆ.

ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇದೇ ಫೋಟೋ ನೋಡಿದ ಅಭಿಮಾನಿಗಳು, ಸೂಪರ್​ ಅಣ್ಣ.. ನೀವು ಕೂಡ ಈ ಬಂಡೆಯಂತೆ ಗಟ್ಟಿ ಎಂದು ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment