ಕಂಬಿ ಹಿಂದೆ ದರ್ಶನ್.. ಮಾಧ್ಯಮ, ಪೊಲೀಸರ ಕಾರ್ಯಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ; ಏನಂದ್ರು?

author-image
Bheemappa
Updated On
ಇವರನ್ನು ಸಪೋರ್ಟ್ ಮಾಡುವವರು ಗೂಬೆಗಳ ಹಾಗೇ ಕಾಣಿಸುತ್ತಾರೆ; ಸುದೀಪ್​​ ಹೀಗೆ ಹೇಳಿದ್ದು ಯಾರಿಗೆ?
Advertisment
  • ಕೊಲೆ ಕೇಸ್​ನಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್
  • ಕಳೆದ ಒಂದು ವಾರದಿಂದ ಸದ್ದು ಮಾಡುತ್ತಿರೋ ಹತ್ಯೆ ಕೇಸ್
  • ದರ್ಶನ್ ಪ್ರಕರಣದ ಬಗ್ಗೆ ನಟ ಸುದೀಪ್ ಅವರು ಹೇಳಿದ್ದೇನು?

ಬೆಂಗಳೂರು: ದರ್ಶನ್​ ಆ್ಯಂಡ್ ಗ್ಯಾಂಗ್​ ಸೇರಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿಯ ಪತ್ನಿಗೆ ಹಾಗೂ ಅವರಿಗೆ ಹುಟ್ಟುವ ಮಗುವಿಗೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮೇಲೆ ಕೋಟಿ ಕೋಟಿ ಬೆಟ್ಟಿಂಗ್.. ಕ್ರಿಕೆಟ್​ ದುನಿಯಾದಲ್ಲಿ ಹೇಗೆ ನಡೀತಿದೆ ಬಾಜಿ?

ದರ್ಶನ್ ಅವರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆ್ಯಕ್ಟರ್ ಸುದೀಪ್ ಅವರು, ಮಾಧ್ಯಮದಲ್ಲಿ ತೋರಿಸುತ್ತಿರುವುದನ್ನ ನೋಡಿ ಎಲ್ಲ ಮಾಹಿತಿ ತಿಳಿದುಕೊಳ್ಳುತ್ತಿದ್ದೇವೆ. ಸತ್ಯ ಹೊರ ಬರಬೇಕು ಅಂತ ಪೊಲೀಸರು, ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ನನ್ನ ಪ್ರಕಾರ ದೊಡ್ಡ ಸ್ಥಾನದಲ್ಲಿರುವ ಸಿಎಂ, ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುದ್ದು ನಾಯಿಗಳ ಜೊತೆ ಟೈಮ್ ಸ್ಪೆಂಡ್ ಮಾಡಿದ MS ಧೋನಿ, ಝೀವಾ.. ಬರ್ತ್​​ಡೇ ಯಾವಾಗ?

publive-image

ರೇಣುಕಾಸ್ವಾಮಿ ಅವರ ಪತ್ನಿ ಆ ಹೆಣ್ಣು ಮಗುವಿಗೆ ಹಾಗೂ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ. ಯಾರಿಗೆ ಅನ್ಯಾಯ ಆಗಿದೆ ಅವರಿಗೆ ನ್ಯಾಯ ಸಿಗಬೇಕು. ರೇಣುಕಾಸ್ವಾಮಿಗೆ, ಹುಟ್ಟಬೇಕಾಗಿರುವ ಆ ಮಗುವಿಗೆ ಈಗ ನ್ಯಾಯ ಸಿಗಬೇಕಾಗಿದೆ. ಆ ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂದರೆ ಉತ್ತಮವಾಗಿ ತನಿಖೆಯಾಗಬೇಕು. ಸಂಪೂರ್ಣ ವಾತಾವರಣ ಸದ್ಯ ಸರಿಯಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು. ಚಿತ್ರರಂಗದ ಮೇಲೆ ಕಪ್ಪುಚುಕ್ಕೆ ಬರೋದು ನಮಗೆ ಇಷ್ಟವಿಲ್ಲ. ಈ ಚಿತ್ರರಂಗವನ್ನು ಎಷ್ಟೋ ಜನರು ಕಟ್ಟಿ ಬೆಳೆಸಿದ್ದಾರೆ. ಅದನ್ನು ನಾವು ಕಾಪಾಡಿಕೊಂಡು ಹೋಗಬೇಕು. ಇಡೀ ಚಿತ್ರರಂಗಕ್ಕೆ ಕ್ಲೀನ್ ಚೀಟ್ ಸಿಗಬೇಕಾಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment