ಮಜಾ ಟಾಕೀಸ್ ಶೋಯಿಂದ ಏಕಾಏಕಿ ಆಚೆ ಬಂದ ಮುತ್ತುಮಣಿ; ನಟ ತರಂಗ ವಿಶ್ವಗೆ ಏನಾಯ್ತು?

author-image
Veena Gangani
Updated On
ಮಜಾ ಟಾಕೀಸ್ ಶೋಯಿಂದ ಏಕಾಏಕಿ ಆಚೆ ಬಂದ ಮುತ್ತುಮಣಿ; ನಟ ತರಂಗ ವಿಶ್ವಗೆ ಏನಾಯ್ತು?
Advertisment
  • ಮಜಾ ಟಾಕೀಸ್ ಶೋನಿಂದ ಆಚೆ ಬಂದಿದ್ದೇಕೆ ನಟ ವಿಶ್ವ
  • ಮುತ್ತುಮಣಿ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನಟ
  • ತೊದಲು ನುಡಿಯಲ್ಲಿ ಮಾತ್ನಾಡ್ತಿದ್ದ ಹಾಸ್ಯ ನಟ ತರಂಗ ವಿಶ್ವ

ಮಜಾ ಟಾಕೀಸ್ ಶೋನಿಂದ ತರಂಗ ವಿಶ್ವ ಅವ್ರು ಹೊರ ಬಂದಿದ್ದಾರೆ. ಮುತ್ತು ಮಣಿ ಪಾತ್ರದ ಮೂಲಕ ಮನರಂಜನೆ ನೀಡಿದ್ದ ಕಲಾವಿದ ಇನ್ನುಂದೆ ಶೋನಲ್ಲಿ ಇರಲ್ಲ.

ಇದನ್ನೂ ಓದಿ:ಚೈತ್ರಾ ಕುಂದಾಪುರ ಮತ್ತು ಆಕೆಯ ಪತಿ ಇಬ್ಬರು ಕಳ್ಳರು.. ಮದುವೆ ಬೆನ್ನಲ್ಲೇ ತಂದೆಯಿಂದ ಸ್ಫೋಟಕ ಹೇಳಿಕೆ

publive-image

ತುಜಾ ಬಾರ್​, ತುರಿ ಹೀಗೆ ತ ಹಚ್ಚಿ ತೊದಲು ನುಡಿಯಲ್ಲಿ ಮಾತ್ನಾಡ್ತಿದ್ದ ಪಾತ್ರ ಮುತ್ತು ಮಣಿಯದ್ದು. ಮಜಾ ಟಾಕೀಸ್ ಶೋನ ಪ್ರಾರಂಭದಿಂದಲೂ ಇದ್ದ ಕಲಾವಿದ ಇವರು. ಇವರು ವೇದಿಕೆಗೆ ಬಂದ್ರೇ ನಗು ಕಂಟ್ರೋಲ್​ ಮಾಡೋದೆ ಕಷ್ಟ ಆಗ್ತಿತ್ತು. ಹಾಸ್ಯ ಭರಿತ ಮಾತುಗಳಿಂದ ಮೋಡಿ ಮಾಡುತ್ತಿದ್ದರು ತರಂಗ ವಿಶ್ವ.

publive-image

ಸದ್ಯ ಮಜಾ ಟಾಕೀಸ್ ಶೋನಿಂದ ಅರ್ಧಕ್ಕೆ ಹೊರ ಬಂದಿದ್ದಾರೆ. ಈ ಬಗ್ಗೆ ಖುದ್ದು ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಮಜಾ ಟಾಕೀಸ್​ ಬಿಡ್ತಿದ್ದೀನಿ. ನನ್ನನ್ನ ಮುತ್ತು ಮಣಿಯಾಗಿ ಒಪ್ಪಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಥ್ಯಾಂಕ್ಯೂ. ಲೋಕೇಶ್​ ಪ್ರೊಡಕ್ಷನ್​ಗೆ ಥ್ಯಾಂಕ್ಯೂ ಎಂದಿದ್ದಾರೆ.

ಅಷ್ಟಕ್ಕೂ ವಿಶ್ವ ಅವರು ಶೋ ಕ್ವೀಟ್​ ಮಾಡೋಕೆ ಬಲವಾದ ಕಾರಣ ಏನು ಅನ್ನೋದನ್ನ ಸ್ಪಷ್ಟಪಡಿಸಿಲ್ಲ. ಆದ್ರೇ ದಿಢೀರ್​ ಅಂತ ಇಂತಹ ನಿರ್ಧಾರಕ್ಕೆ ಬಂದಿದ್ದೇಕೆ ಎಂದು ಅಭಿಮಾನಿಗಳು ಬೇಜಾರಾಗಿದ್ದು. ಯಾಕೇ ಹೀಗ್ ಮಾಡಿದ್ರೀ? ಮುತ್ತುಮಣಿ ಇಲ್ಲದೇ ಶೋ ನೋಡೋಕಾಗಲ್ಲ. ಮತ್ತೇ ಬನ್ನಿ ಅಂತ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment