/newsfirstlive-kannada/media/post_attachments/wp-content/uploads/2025/07/sarojadevi16.jpg)
ಖ್ಯಾತ ಬಹುಭಾಷಾ ನಟಿ, ಹಿರಿಯ ಕಲಾವಿದೆ ಸರೋಜಾದೇವಿ ಅವರು ನಿಧನರಾಗಿದ್ದಾರೆ. ಅವರ ಪಾರ್ಥೀವ ಶರೀರವನ್ನು ಅವರ ನಿವಾಸದಲ್ಲೇ ಇಡಲಾಗಿದ್ದು, ಸ್ಟಾರ್​ ನಟ, ನಟಿಯರು ಸರೋಜಾದೇವಿ ಅವರ ಅಂತಿಮ ದರ್ಶನ ಪಡೆಯಲು ಬರುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/07/B-SAROJA-DEVI-1.jpg)
ಈ ವೇಳೆ ಹಿರಿಯ ಕಲಾವಿದೆಯ ಅಗಲಿಕೆಯ ಸುದ್ದಿ ಕೇಳಿ ಸರೋಜಾದೇವಿ ಅಂತಿನ ದರ್ಶನಕ್ಕೆ ನಟ ಉಪೇಂದ್ರ ಹಾಗೂ ಜಗ್ಗೇಶ್​ ಆಗಮಿಸಿದ್ದಾರೆ. ಅಂತಿಮ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ನಟ ಉಪೇಂದ್ರ, ನನ್ನ ಎ. ಚಿತ್ರ ರಿಲೀಸ್ ಅಗೋಕೆ ಸರೋಜ ಅಮ್ಮ ಕಾರಣ. ಎ ಚಿತ್ರಕ್ಕೆ ಸೆನ್ಸಾರ್ ಆಗದೆ ರಿವೈಸಿಂಗ್ ಕಮಿಟಿಗೆ ಹೋಗಿತ್ತು. ಸರೋಜಮ್ಮ ರಿವೈಸಿಂಗ್ ಕಮಿಟಿ ಆಧ್ಯಕ್ಷರಾಗಿದ್ದರು. ನಾನು ಹೋಗ್ತಿದಂತೆ ಚಪ್ಪಾಳೆ ತಟ್ಟಿ ನನ್ನ ಸ್ವಾಗತಿಸಿದ್ದರು. ನನ್ನ ಪರವಾಗಿ ಅಮ್ಮ ವಾದ ಮಾಡಿ ಸಿನಿಮಾ ಸೆನ್ಸಾರ್ ಆಗೋತರ ಮಾಡಿದ್ದರು. ಆಗಿನಿಂದಲೂ ನಾವು ಫ್ಯಾಮಿಲಿ ಫ್ರೆಂಡ್ಸ್ ಅಗಿದ್ದೇವೆ, ಸರೋಜಮ್ಮ ಪರಿಪೂರ್ಣ ಜೀವನ ನಡೆಸಿ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/07/upendra.jpg)
ಇನ್ನೂ, ಸರೋಜಾದೇವಿ ನಿವಾಸಕ್ಕೆ ಭೇಟಿ ಕೊಟ್ಟ ನಟ ಜಗ್ಗೇಶ್, ಸರೋಜಾದೇವಿ ಶಿವನ ಅನನ್ಯ ಭಕ್ತೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸೋಮವಾರ ಶಿವನ ದಿನ ದೈವಾಧೀನರಾಗಿದ್ದಾರೆ. ಕಲಾವಿದರಿಗೆ ಬಹಳ ಸಹಾಯ ಮಾಡ್ತಿದ್ದರು. ಸರೋಜದೇವೆ ಅವರನ್ನ ಹೋಲಿಕೆ ಮಾಡಿಕೊಂಡು ಸಹನಟರು ಆಕ್ಟ್ ಮಾಡ್ತಿದ್ದರು. ಪ್ರತಿ ವರ್ಷ ತೋಟದಿಂದ ಮಾವಿನ ಹಣ್ಣು ತಂದು ಕೊಡುತ್ತಿದ್ದರು. ಕೊಡಿಗೆಹಳ್ಳಿಯಲ್ಲಿ ಅವರ ತೋಟ ಇದೆ. ಅಲ್ಲಿ ಅಂತ್ಯಕ್ರಿಯೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಕೆಲ ಅಪಾರ್ಟ್ಮೆಂಟ್ ಇದೆ, ನೋಡೋಣ. ತಮಿಳುನಾಡಿನಿಂದ ಮಹಾರಾಣಿ ತರಹ ಹೆಜ್ಜೆ ಹಾಕಿಕೊಂಡು ಬಂದಿದ್ದಾರೆ. ಸರ್ಕಾರ ಗೌರವ ಸಲ್ಲಿಸಬೇಕು. ನಾನು ಅವರ ಜೊತೆಗೆ ನಟನೆ ಮಾಡಿಲ್ಲ ಎಂದರು.
/newsfirstlive-kannada/media/post_attachments/wp-content/uploads/2025/07/jagesh.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us