/newsfirstlive-kannada/media/post_attachments/wp-content/uploads/2024/11/haripriya4.jpg)
ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಗೆ ಹೊಸ ಅತಿಥಿಯ ಆಗಮನದಲ್ಲಿದ್ದಾರೆ. ಸಿಂಹಪ್ರಿಯಾ ಎಂದೇ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದೀಪಾವಳಿ ಹಬ್ಬದ ದಿನವೇ ಅಭಿಮಾನಿಗಳ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/11/haripriya.jpg)
ಹೌದು, ಚಂದನವನದ ಈ ಮುದ್ದಾದ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಫ್ಯಾನ್ಸ್​ ಗೇಸ್​ ಮಾಡಿದ್ದರು. ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಹಾಣಿಸಿಕೊಂಡಿದ್ದರು. ಇದೀಗ ಅಭಿಮಾನಿಗಳ ಗೇಸ್​ ನಿಜವಾಗಿದೆ.
/newsfirstlive-kannada/media/post_attachments/wp-content/uploads/2024/11/haripriya1.jpg)
ಇನ್ನೂ ಖುಷಿ ಸುದ್ದಿಯಲ್ಲಿ ಮುದ್ದಾದ ಜೋಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಮಾಲ್ಡೀವ್ಸ್​ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿದೆ. ಫೋಟೋಗಳಲ್ಲಿ ಹರಿಪ್ರಿಯಾ ಬೇಬಿ ಬಂಪ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಟ ವಸಿಷ್ಠ ಸಿಂಹ ಅವರು ಬೇಬಿ ಬಂಪ್ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
View this post on Instagram
ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಮುದ್ದಾದ ವಿಡಿಯೋ ಶೇರ್ ಮಾಡಿಕೊಂಡ ದಂಪತಿ ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು, ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ “ಕುಡಿ”ಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ ಎಂದು ಬರೆದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/haripriya2.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us