/newsfirstlive-kannada/media/post_attachments/wp-content/uploads/2024/06/nisha1.jpg)
ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ. ಮೊನ್ನೆಯಷ್ಟೇ ಬ್ರಹ್ಮಗಂಟು ಎಂಬ ಹೊಸ ಧಾರಾವಾಹಿ ಕೂಡ ಲಾಂಚ್ ಆಯ್ತು. ಈ ಬೆನ್ನಲ್ಲೇ ಮತ್ತೊಂದು ಧಾರಾವಾಹಿ ಲಾಂಚ್ ಮಾಡೋಕೆ ರೆಡಿಯಾಗ್ತಿದೆ ವಾಹಿನಿ. ಸುಪ್ರಿತಾ ಪ್ರಮೋದ್ ಶೆಟ್ಟಿ ದಂಪತಿ ಹೊಸ ಧಾರಾವಾಹಿಯನ್ನ ನಿರ್ಮಾಣ ಮಾಡ್ತಿರೋ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ.
ಇದನ್ನೂ ಓದಿ:ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಗಟ್ಟಿಮೇಳ ಖ್ಯಾತಿಯ ರೌಡಿ ಬೇಬಿ ನಿಶಾ.. ಏನದು ಗೊತ್ತಾ?
ಅಣ್ಣಯ್ಯ ಎಂಬ ಟೈಟಲ್ನೊಂದಿಗೆ ಲಾಂಚ್ ಆಗ್ತಿರೋ ಈ ಸೀರಿಯಲ್ಗೆ ನಿಶಾ ನಾಯಕಿ ಆಗಿದ್ದಾರೆ. ಸದ್ಯ ತಂಡದಿಂದ ಸದ್ಯ ಮತ್ತೊಂದು ಸುದ್ದಿ ಹೊರ ಬಂದಿದೆ. ಹೀರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೊಡಗಿನ ಕುವರ ವಿಕಾಶ್ ಉತ್ತಯ್ಯ ನಿಶಾಗೆ ಜೋಡಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ವಿಕಾಶ್ ಕನ್ನಡ ಧಾರಾವಾಹಿಗೆ ಹೊಸ ಮುಖ. ಆದ್ರೆ ವಿಕಾಶ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಶಾರ್ಟ್ ಫಿಲ್ಮ್ಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಅಣ್ಣಯ್ಯ ಸೀರಿಯಲ್ನಲ್ಲಿ ನಾಯಕಿ ಪಾತ್ರಕ್ಕೆ ನಿಶಾ ಕನ್ಫರ್ಮ್ ಆಗಿದ್ದು, ನಾಯಕನ ಹುಡುಕಾಟದಲ್ಲಿ ತಂಡಕ್ಕೆ ವಿಕಾಶ್ ಪರ್ಫೆಕ್ಟ್ ಅಂತ ಅನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾಗಿ ವಿಕಾಶ್ ಉತ್ತಯ್ಯ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಣ್ಣಯ್ಯ ಹೆಸರೇ ಹೇಳುವಂತೆ ಅಣ್ಣ-ತಂಗಿಯರ ಬಾಂಧವ್ಯ, ತುಂಬು ಕುಟುಂಬದ ಕತೆ ಹೊಂದಿರಲಿದೆ ಸೀರಿಯಲ್ ಇದಾಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರೋ ಈ ಸೀರಿಯಲ್ಗೆ ಇನ್ನು ಹಲವು ಪಾತ್ರಗಳಿಗೆ ಕಲಾವಿದರ ಆಯ್ಕೆ ಬಾಕಿಯಿದ್ದು, ತಂಡ ಅಂದುಕೊಂಡಂತೆ ಎಲ್ಲವೂ ಸಾಕಾರವಾದ್ರೆ ಶೀಘ್ರದಲ್ಲೇ ಪ್ರೋಮೋ ಹೊರಬರಲಿದೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ