/newsfirstlive-kannada/media/post_attachments/wp-content/uploads/2025/03/vinay-gowda3.jpg)
ಕನ್ನಡ ಕಿರುತೆರೆಯ ಸ್ಟಾರ್ ಹೀರೋ.. ಬಿಗ್ಬಾಸ್ ಮಾಜಿ ಸ್ಪರ್ಧಿ, ತಮ್ಮ ಖಡಕ್ ಗೆಟಪ್ ಮೂಲಕವೇ ಸ್ಯಾಂಡಲ್ವುಡ್ನಲ್ಲಿ ವಿಲನ್ ಆಗಿ ಮಿಂಚೋದಕ್ಕೆ ಸಜ್ಜಾಗಿದ್ದಾರೆ ವಿನಯ್ ಗೌಡ. ಜಸ್ಟ್ 25 ಸೆಕೆಂಡ್ ಮಾಡಿರೋ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿದೆ. ವಿನಯ್ ಗೌಡ ತಮ್ಮ ವಿಲನ್ ರೋಲ್ಗೆ ಹೇಳಿ ಮಾಡಿಸಿರೋರು.
ಇದನ್ನೂ ಓದಿ:ವಿನಯ್ ಗೌಡ, ರಜತ್ ರಿಲೀಸ್ ಕೇಸ್ಗೆ ಟ್ವಿಸ್ಟ್; ಏನಿದು ಪೊಲೀಸರ ವರಸೆ..?
ಹೀಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರೋ ರೀಲ್ಸ್ನಲ್ಲಿ ಕೈಯಲ್ಲಿ ಮಚ್ಚು ಹಿಡಿದು ಭಯದ ವಾತಾವರಣ ಸೃಷ್ಟಿಸಿದ್ದ ಬೆನ್ನಲ್ಲೇ ರಜತ್ ಹಾಗೂ ವಿನಯ್ ಗೌಡ ಇಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು. ಆದ್ರೆ, ರಾತ್ರೋರಾತ್ರಿ ಈ ಇಬ್ಬರನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ.
ಅರೆಸ್ಟ್ ಆಗಿದ್ದ ಇಬ್ಬರನ್ನು ಪೊಲೀಸರು ರಿಲೀಸ್ ಮಾಡಿದ್ದ ಬೆನ್ನಲ್ಲೇ ವಿನಯ್ ಗೌಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾ ಸ್ಟೋರಿಯಲ್ಲಿ ಪ್ರಾಣಿ ಪಕ್ಷಿಗಳು ಖುಷಿಯಿಂದ ಹಾರುತ್ತಿರುವ ರೀಲ್ಸ್ವೊಂದನ್ನು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಜೊತೆಗೆ ಹೊಸ ದಿನ ಹೊಸ ಆರಂಭ (Fresh Day Fresh Start) ಅಂತ ಬರೆದುಕೊಂಡಿದ್ದಾರೆ.
ರಜತ್ ಹಾಗೂ ವಿನಯ್ ನಿಂದ ಲಾಂಗ್ ತೋರಿಸಿ ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ವಿಚಾರಣೆಗೆ ಕರೆ ನೀಡಿದ್ದಾರೆ. ಬಸವೇಶ್ವರನಗರ ಪೊಲೀಸರಿಂದ ಇಬ್ಬರಿಗೂ ನೋಟಿಸ್ ಹೋಗಿದೆ. ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ