Advertisment

ರೇಣುಕಾಸ್ವಾಮಿ ಮನೆಗೆ ಸಂಧಾನಕಾರರಾಗಿ ಹೋಗಿದ್ರಾ ವಿನೋದ್ ರಾಜ್? ದರ್ಶನ್ ಏನಾದ್ರು ಹೇಳಿದ್ರಾ?

author-image
Veena Gangani
Updated On
ರೇಣುಕಾಸ್ವಾಮಿ ಮನೆಗೆ ಸಂಧಾನಕಾರರಾಗಿ ಹೋಗಿದ್ರಾ ವಿನೋದ್ ರಾಜ್? ದರ್ಶನ್ ಏನಾದ್ರು ಹೇಳಿದ್ರಾ?
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ದರ್ಶನ್ ಅಂಡ್​ ಗ್ಯಾಂಗ್​
  • ದರ್ಶನ್​ರನ್ನು ಸೆಂಟ್ರಲ್ ಜೈಲಿನಲ್ಲಿ ಭೇಟಿ ಮಾಡಿದ್ದ ನಟ ವಿನೋದ್ ರಾಜ್
  • ಜೈಲಿಗೆ ಭೇಟಿ ಬೆನ್ನಲ್ಲೇ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿದ ವಿನೋದ್

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿಯಾಗಿದ್ದ ಸ್ಯಾಂಡಲ್​ವುಡ್​ ನಟ ವಿನೋದ್ ರಾಜ್ ಅವರು ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ. ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿ ಮಾಡಿ ಚೆಕ್​ ಮೂಲಕ 1 ಲಕ್ಷ ರೂಪಾಯಿ ಧನಸಹಾಯ ಮಾಡಿದ್ದಾರೆ.

Advertisment

publive-image

ಇದನ್ನೂ ಓದಿ: ಮನೆ ಊಟಕ್ಕೆ ಹಂಬಲಿಸಿದ್ದ ದಾಸನಿಗೆ ಆಘಾತ; ದರ್ಶನ್‌ ಅರ್ಜಿ ವಜಾ ಆಗಿದ್ದಕ್ಕೆ 3 ಕಾರಣಗಳಿವೆ; ಏನದು?

ಕೊಲೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ನಟ ವಿನೋದ್ ರಾಜ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಜೊತೆಗೆ ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಅವರ ಹೆಸರಿಗೆ 1 ಲಕ್ಷ ರೂಪಾಯಿ ಚೆಕ್ ಕೊಟ್ಟಿದ್ದಾರೆ. ವಿನೋದ್ ರಾಜ್ ಅವರು ಚೆಕ್​ ಹಸ್ತಾಂತರ ಮಾಡುತ್ತಾ ರೇಣುಕಾಸ್ವಾಮಿ ತಂದೆ, ತಾಯಿ ಹಾಗೂ ಪತ್ನಿಗೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ನಟ ವಿನೋದ್ ಅವರ ಮುಂದೆ ರೇಣುಕಾಸ್ವಾಮಿ ಪತ್ನಿ, ಪೋಷಕರು ಕಣ್ಣೀರಿಟ್ಟಿದ್ದಾರೆ.

ಭೇಟಿ ಮಾಡಿದ ಬಳಿಕ ಮಾತಾಡಿದ ವಿನೋದ್​ ರಾಜ್ ಅವರು, ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡು ನೋವಿನಲ್ಲಿದ್ದಾರೆ. ಇಂತಹ ಘಟನೆ ನಡೆಯಬಾರದಿತ್ತು. ಒಂದು ಜೀವ ತೆಗೆಯಲು ಯಾರಿಗೂ ಹಕ್ಕು ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ಪ್ರಶ್ನೆ. ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ. ಕಲಾವಿದರು ಒಳ್ಳೆಯದನ್ನೇ ಜನರಿಗೆ ಕೊಡುವ ಕೆಲಸ ಮಾಡಬೇಕು. ಕಲಾವಿದರು ಎಂಬ ಪಟ್ಟ ಕೊಟ್ಟು ಜವಾಬ್ದಾರಿ ಕೊಟ್ಟಿದ್ದಾರೆ ಜನ. ನಾವು ಏನು ಮಾಡಿದ್ರೂ ಜನ ನೋಡ್ತಾರೆ. ನಾವು ವಿವೇಕದಿಂದ ಮಾತಾಡಬೇಕು. ಒಳ್ಳೆ ಕೆಲಸ ಮಾಡ್ಬೇಕು. ನಮ್ಮ ತನವನ್ನು ಕಳೆದುಕೊಂಡಾಗ ಇಂತ ಕೆಲಸಗಳು ಆಗುತ್ತವೆ.

Advertisment

ಆದಷ್ಟು ನಾವು ಸಮಾಜದಲ್ಲಿ ಇದ್ದೇವೆ ಎಂದು ಬದುಕಬೇಕು. ಜನಗಳ ಮಧ್ಯೆ ಬದುಕುವುದು ಹೇಗೆ ಎಂಬುದನ್ನು ಕಲಾವಿದರು ತಿಳಿಯಬೇಕು. ಹಿಂದಿನ ತಲೆಮಾರಿನವರನ್ನು ನೋಡಿ ನಾವು ಕಲಿಬೇಕು. ಮಾಧ್ಯಮಗಳು ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡುತ್ತಿವೆ. ಮಾಧ್ಯಮಗಳು ಯಾರಿಗೂ ಶತ್ರು ಅಲ್ಲ. ಜೈಲಿನಲ್ಲಿ ಹೆಚ್ಚಾಗಿ ಮಾತಾಡಲು ಅವಕಾಶ ಕೊಡಲಿಲ್ಲ. ದರ್ಶನ್​ ಅವರು ಸಂಕಟ ವ್ಯಕ್ತಪಡಿಸಿದರು ಅಷ್ಟೇ ಇನ್ನೇನು ಮಾತಾಡಿಲ್ಲ. ತಬ್ಬಿಕೊಂಡು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. ನನ್ನ ನೋಡಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ದರ್ಶನ್ ಒಂದು ರೀತಿಯ ನೋವು. ಆದ್ರೆ ಇವರ ಕುಟುಂಬದವರದ್ದು ಭಯಂಕರ ನೋವು. ಮನೆಯಲ್ಲಿನ ಕಷ್ಟಗಳನ್ನು ನೋಡಿ ಕಣ್ಣೀರು ಬಂತು ನನಗೆ ಅಂತ ಮಾತಾಡುವ ವೇಳೆ ನಟ ವಿನೋದ್ ರಾಜ್ ಭಾವುಕರಾಗಿದ್ದಾರೆ.

‘ನಾವು ಯಾವ ಸಂಧಾನಕ್ಕೆ ಮುಂದಾಗಿಲ್ಲ’

ಇದೇ ವೇಳೆ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ ಅವರು ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಅವನು ನರಳಿದ ರೀತಿ ಕೇಳಿದ್ರೆ ನಮ್ಮ ಕರುಳು ಕಿತ್ತು ಬರುತ್ತಿದೆ. ನಾವು ಬಹಳ ನೊಂದಿದ್ದೇವೆ. ನನ್ನ ಮನೆತನ ನಾಶವಾಗಿದೆ. ನನ್ನ ಮಗ ಹೋದಾಗಿಂದ ತುಂಬಾ ನೋವಿನಲ್ಲಿದ್ದೇವೆ. ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ ಸೊಸೆಗೆ ಸರ್ಕಾರಿ ಕೆಲಸ ಕೊಡಿ ಎಂದು ವಿನೋದ್ ರಾಜ್ ಮುಂದೆ ಕಣ್ಣೀರಿಟ್ಟಿದ್ದಾರೆ.

ನನ್ನ ಮಗನಿಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಅಳಲು ತೋಡಿಕೊಂಡ ರೇಣುಕಾಸ್ವಾಮಿ ತಂದೆ ನಾವು ಯಾವ ಸಂಧಾನಕ್ಕೂ ಮುಂದಾಗಿಲ್ಲ ಎಂದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment