Advertisment

ತಮಿಳು ನಟ ವಿಶಾಲ್​ಗೆ ಕಾಡಿದ ಅನಾರೋಗ್ಯ.. ತುಳುನಾಡಿನ ದೈವದ ಮೊರೆ ಹೋದ ಸ್ಟಾರ್

author-image
Veena Gangani
Updated On
ತುಳು ನಾಡಿನ ದೈವದ ಸನ್ನಿಧಿಯಲ್ಲಿ ತಮಿಳು ನಟ.. ಶಕ್ತಿ ಸ್ಥಳದಲ್ಲಿ ಸ್ಟಾರ್​ಗೆ ಸಿಕ್ತು ಅಭಯ ಹಸ್ತ
Advertisment
  • ತುಳುನಾಡಿನ ನೇಮೋತ್ಸವದಲ್ಲಿ ನಟ ವಿಶಾಲ್ ಭಾಗಿ
  • ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿದ ತಮಿಳು ಸ್ಟಾರ್ ನಟ
  • ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು

ಮಂಗಳೂರು: ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ನೋಡಿದ್ದಾರೆ. ಇತ್ತೀಚೆಗೆ ವಿಶಾಲ್ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದು, ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ್ದು, ಇದಕ್ಕೆ ವಿಶಾಲ್ ಒಪ್ಪಿದ್ದಾರೆ.

Advertisment

ಇದನ್ನೂ ಓದಿ:ನಡುಗುವ ಕೈಗಳು, ತೊದಲು ಮಾತು.. ಮುಚ್ಚಿಟ್ಟಿದ್ದ ಗುಟ್ಟು ಕೊನೆಗೂ ರಟ್ಟಾಯ್ತು; ನಟ ವಿಶಾಲ್​ಗೆ​ ಆಗಿದ್ದೇನು?

publive-image

ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ವಿಶಾಲ್, ಕಾಂತಾರ ಸಿನಿಮಾದಲ್ಲಿ ದೈವ ಮತ್ತು ಇಲ್ಲಿನ ನೇಮೋತ್ಸವದ ಬಗ್ಗೆ ತಿಳಿದಿದ್ದೇನೆ. ಇದೀಗ ಪ್ರಥಮ ಬಾರಿಗೆ ತುಳುನಾಡಿನ ನೇಮೋತ್ಸವವನ್ನು ನೋಡುತ್ತಿದ್ದೇನೆ. ತುಂಬಾ ಖುಷಿ ನೀಡಿದೆ, ನಿನ್ನೆ ಕೊಲ್ಲೂರು ಮುಕಾಂಬಿಕೆ ದರ್ಶನ ಪಡೆದು ಇದೀಗ ಇಲ್ಲಿಗೆ ಭೇಟಿ ನೀಡಿದ್ದೇನೆ. ಬೆಳೆಯುತ್ತಿರುವ ತುಳು ಚಿತ್ರರಂಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮಿಳಿನಲ್ಲಿ ಹಲವು ಸಿನಿಮಾಗಳ ಮಾತುಕಥೆ ನಡೆಯುತಿದೆ ಎಂದಿದ್ದಾರೆ.

publive-image

ಹರಿಪಾದೆ ಜಾರಂದಾಯ ಅತ್ಯಂತ ಕಾರಣಿಕದ ದೈವವಾಗಿದ್ದು ನಂಬಿದವರಿಗೆ ಇಂಬು ನೀಡುವ ದೈವವಾಗಿದೆ ಇಲ್ಲಿನ ನೆಮೋತ್ಸವ ಸಂದರ್ಭ ಜಾರಂದಾಯನ ಪಲ್ಲಕ್ಕಿಗೆ ಅವೇಶ ಬರುತ್ತದೆ. ಸುಮಾರು 15 ಜನ ಸೇವಕರು ನಿಯಂತ್ರಣಕ್ಕೆ ಪ್ರಯತ್ನಿಸಿದರು ನಿಯಂತ್ರಣಕ್ಕೆ ಸಿಗುವುದಿಲ್ಲ. ಇಂತಹ ಕಾರಣಿಕ ಹೊಂದಿರು ಶ್ರೀ ಕ್ಷೇತ್ರದ ಬಗ್ಗೆ ತಿಳಿದೇ ವಿಶಾಲ್ ಭೇಟಿ ನೀಡಿರುವ ಸಾಧ್ಯತೆ ಇದೆ. ಅಲ್ಲದೆ ಈ ದೈವಸ್ಥಾನದಲ್ಲಿ ತುಲಾಬಾರ ಸೇವೆ ಪ್ರಮುಖ್ಯತೆ ಪಡೆದಿದ್ದು ಭಕ್ತರು ಸಮಸ್ಯೆ ನಿವಾರಣೆಗೆ ತುಲಾಬಾರ ಸೇವೆ ನೀಡುತ್ತಿದ್ದು ನಟ ವಿಶಾಲ್ ಕೂಡ ಆರೋಗ್ಯ ಸುಧಾರಿಸಿದ ನಂತರ ತುಲಾಭಾರ ಸೇವೆ ನೀಡುವುದಾಗಿ ಹರಕೆ ಹೊತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment