/newsfirstlive-kannada/media/post_attachments/wp-content/uploads/2025/01/VISHAL_TAMIL.jpg)
ತಮಿಳು ಸ್ಟಾರ್ ವಿಶಾಲ್ ಅವರು ಸಿನಿಮಾಗಳಲ್ಲಿ ಸಖತ್ ಎನರ್ಜಿಯಾಗಿ ಕಾಣಿಸುತ್ತಾರೆ. ಫೈಟ್ ಸೀನ್ಗಳಂತೂ ರಿಯಲ್ ಆಗಿಯೇ ಫೈಟ್ ಮಾಡುತ್ತಿದ್ದಾರಾ ಎನ್ನುವಂತೆ ವಿಶಾಲ್ ಆ್ಯಕ್ಟಿಂಗ್ ಮಾಡುತ್ತಾರೆ. ಅಲ್ಲದೇ ನಿಜ ಜೀವನದಲ್ಲೂ ಇನ್ನು ಯಂಗ್ ಆ್ಯಂಡ್ ಎನರ್ಜಿಯಾಗಿ ಕಾಣಿಸುವ ವಿಶಾಲ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರಾ ಎನ್ನುವ ಪ್ರಶ್ನೆಗಳು ಮೂಡಿವೆ. ಇದು ನಿಜ ಎನ್ನುವಂತೆ ವಿಡಿಯೋವೊಂದು ಸಾಕ್ಷಿ ಹೇಳುತ್ತಿದೆ.
ವಿಶಾಲ್ ಅವರ ಮದಗಜ ರಾಜ ಎನ್ನುವ ಹೊಸ ಸಿನಿಮಾ ಕುರಿತು ಮಾಧ್ಯಮಗೋಷ್ಠಿ ನಡೆಸಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ವಿಶಾಲ್ ಅವರು ಮೈಕ್ ಹಿಡಿದುಕೊಂಡು ಮಾತಾಡುತ್ತಿರುವಾಗ ಅವರ ಕೈ ಎಲ್ಲ ಅಲುಗಾಡಿದೆ. ಮೈಕ್ ಅನ್ನು ಹಿಡಿದುಕೊಳ್ಳಲು ಆಗುತ್ತಿಲ್ಲ ಎನ್ನುವುದು ವಿಡಿಯೋದಿಂದ ತಿಳಿದು ಬರುತ್ತಿದೆ. ಅಲ್ಲದೇ ಮಾತನಾಡುವಾಗ ತೊದಲುತ್ತ ಮಾತನಾಡಿದ್ದಾರೆ. ಪದಗಳ ಉಚ್ಚಾರಣೆ ಕೂಡ ಸರಿಯಾಗಿ ಬಂದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ 8 ತಿಂಗಳ ಮಗುವಿಗೆ HMPV ವೈರಸ್? ಆತಂಕ ಸೃಷ್ಟಿಸಿದ ಆರೋಗ್ಯ ಇಲಾಖೆ ಹೇಳಿಕೆ
ಹೀಗಾಗಿ ಇನ್ನು ಯಂಗ್ ಆಗಿರುವ ವಿಶಾಲ್ ಅವರ ಆರೋಗ್ಯಕ್ಕೆ ಏನಾಗಿದೆ ಎನ್ನುವ ಪ್ರಶ್ನೆಗಳು ಮೂಡಿವೆ. ಆದರೆ ಅವರ ಆರೋಗ್ಯದ ಕುರಿತ ಯಾವುದೇ ಅಧಿಕೃತ ಮಾಹಿತಿ ಇದುವರೆಗೂ ತಿಳಿದು ಬಂದಿಲ್ಲ. ಇಷ್ಟೇ ಅಲ್ಲದೇ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದ ನಡುವೆಯು ಮದಗಜ ರಾಜ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸುವ ಅವಶ್ಯತೆ ಏನಿತ್ತು ಇತ್ತು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
What happened to Vishal🙁
His hand was so shaking & can't even able hold Mic !!#MadhaGajaRajapic.twitter.com/UiXez0b5lZ— AmuthaBharathi (@CinemaWithAB)
What happened to Vishal🙁
His hand was so shaking & can't even able hold Mic !!#MadhaGajaRajahttps://t.co/UiXez0b5lZ— AmuthaBharathi (@CinemaWithAB) January 5, 2025
">January 5, 2025
ಮದಗಜ ರಾಜ ಸಿನಿಮಾ 12 ವರ್ಷದ ಹಿಂದೆಯೇ ಅರ್ಧ ಶೂಟಿಂಗ್ ನಡೆದಿತ್ತು. ಕಾರಣಗಳಿಂದ ಸಿನಿಮಾ ಪೂರ್ಣ ಆಗಿರಲಿಲ್ಲ. ಆದರೆ ಈಗ ಶೂಟಿಂಗ್ ಪೂರ್ಣಗೊಂಡಿದ್ದು ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಸಿನಿಮಾದಲ್ಲಿ ವಿಶಾಲ್ ಜೊತೆ ನಟಿ ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ ನಟಿಸಿದ್ದಾರೆ. ನಟ ಆರ್ಯ ಕೂಡ ವಿಶೇಷ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಹಾಸ್ಯನಟ ಸಂತಾನಂ, ಬಾಲಿವುಡ್ ನಟ ಸೋನು ಸೂದ್, ಮಣಿವಣ್ಣನ್, ಮನೋಬಾಲಾ ಈ ಮೂವಿಯಲ್ಲಿ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ