/newsfirstlive-kannada/media/post_attachments/wp-content/uploads/2024/04/YASH-2.jpg)
ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಹಿರಿಯ ಹಾಸ್ಯನಟ ಪ್ರಚಂಡ ಕುಳ್ಳ ದ್ವಾರಕೀಶ್ ಅವರು ನಿನ್ನೆ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಸದ್ಯ ಅವರ ಮೃತದೇಹವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಿನಿಮಾ ಇಂಡಸ್ಟ್ರಿಯ ನಟ, ನಟಿಯರು ಹಾಗೂ ಕಲಾವಿದರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದೀಗ ನಟ ಯಶ್ ಅವರು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಹಿರಿಯ ನಟ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದುಕೊಂಡ ಬಳಿಕ ಮಾತನಾಡಿದ ನಟ ಯಶ್ ಅವರು, ಪ್ರಪಂಚದಲ್ಲಿ ತುಂಬಾ ಜನ ಹುಟ್ಟುತ್ತಾರೆ, ತುಂಬಾ ಜನ ಸಾಯ್ತಾರೆ. ಬದುಕು ಎನ್ನುವುದು ಒಂದು ಅವಕಾಶ. ಆ ಅವಕಾಶದಲ್ಲಿ ನೀವು ಎಷ್ಟು ಧೈರ್ಯ ಮಾಡುತ್ತೀರಾ, ಏನು ಸಾಧಿಸುತ್ತೀರಾ ಹಾಗೂ ಯಾವ ಮಟ್ಟಕ್ಕೆ ನಿಮ್ಮ ಬದುಕನ್ನು ರೂಪಿಸಿಕೊಳ್ತಿರಾ ಎನ್ನುವುದಕ್ಕೆ ಉದಾಹರಣೆ ದ್ವಾರಕೀಶ್ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ.. ಏನು ಹೇಳಿದರು?
ಸಿನಿಮಾ ಎಲ್ಲ ನಾರ್ಮ್ಸ್ ಇರುತ್ತಾಲ್ಲ, ಹೀಗೆ ಇರಬೇಕು, ಇಷ್ಟೇ ಇರಬೇಕು ನಾಯಕನಾಗೋಕೆ ಇದೇ ತರ ಇರಬೇಕು. ನಿರ್ಮಾಪಕನಾಗೋಕೆ ಹೀಗೆಲ್ಲ ಇರಬೇಕು ಎನ್ನುವ ಕಲ್ಪನೆಗಳನ್ನು ಹೊಡೆದು ದ್ವಾರಕೀಶ್ ಅವರು ತಮ್ಮದೇ ಆದ ಸಾಧನೆ ಮಾಡಿದ ಮಹಾನ್ ಚೇತನವಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರು ಕೊಟ್ಟ ಕೊಡುಗೆ ಬಹಳ ದೊಡ್ಡದು. ಅವರನ್ನು ನೋಡಿದಾಗೆಲ್ಲ ತುಂಬಾ ಸ್ಪೂರ್ತಿ ಆಗುತ್ತದೆ. ಗೌರವ ಸಲ್ಲಿಸಿ ನಾವೆಲ್ಲರೂ ಅವರನ್ನು ಕಳುಹಿಸಿ ಕೊಡಬೇಕು ಎಂದು ಹೇಳಿದರು.
ಇದನ್ನೂ ಓದಿ:ಸಿಲಿಕಾನ್ ಸಿಟಿಯ ಈ ಬ್ರಿಡ್ಜ್ ಮೇಲೆ ಇಂದಿನಿಂದ ಬೈಕ್ಗಳಿಗೆ ಮಾತ್ರ ಅವಕಾಶ.. ಉಳಿದೆಲ್ಲವೂ ಬ್ಯಾನ್, ಕಾರಣ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ