ರಾಕಿಂಗ್​ ಸ್ಟಾರ್​​​ ಮಕ್ಕಳು ಸಖತ್​ ಸ್ಟ್ರಾಂಗ್ ಕಣ್ರೀ.. ಅಪ್ಪನ ಜತೆ ಪಲ್ಟಿ ಹೊಡೆದ್ರೂ ನೋಡಿ.. VIDEO

author-image
Veena Gangani
Updated On
ರಾಕಿಂಗ್​ ಸ್ಟಾರ್​​​ ಮಕ್ಕಳು ಸಖತ್​ ಸ್ಟ್ರಾಂಗ್  ಕಣ್ರೀ.. ಅಪ್ಪನ ಜತೆ ಪಲ್ಟಿ ಹೊಡೆದ್ರೂ ನೋಡಿ.. VIDEO
Advertisment
  • ಮಕ್ಕಳ ಜೊತೆಗೆ ಮಗುವಾದ ರಾಕಿಂಗ್ ಸ್ಟಾರ್ ಯಶ್​
  • ಐರಾ, ಯಥರ್ವ್ ಜೊತೆ ಯಶ್​ ಫುಲ್​ ಜಾಲಿ ಜಾಲಿ
  • ತಂದೆಯ ದಿನಾಚರಣೆಗೆ ವಿಶೇಷವಾಗಿ ಶುಭಾಶಯ

ಅದೆಷ್ಟೋ ಪ್ರೇಮಿಗಳಿಗೆ, ಅದೆಷ್ಟೋ ದಂಪತಿಗಳಿಗೆ ಈ ಸ್ಟಾರ್​ ಜೋಡಿಯೇ ಪ್ರೇರಣೆ. ಸಾಕಷ್ಟು ಪ್ರೇಮಿಗಳು ಹಾಗೂ ದಂಪತಿ ಜೀವನದಲ್ಲಿ ಹೀಗೆ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರ ರೀತಿ ಬಾಳಿ ಬದುಕಬೇಕು ಅಂತ ಅಂದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ತಮ್ಮ ಪ್ರೀತಿಯನ್ನು ಭದ್ರವಾಗಿ ಇಟ್ಟುಕೊಂಡಿದ್ದಾರೆ ಈ ಸ್ಟಾರ್​ ಸ್ಯಾಂಡಲ್​ವುಡ್​ ಜೋಡಿ.

ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಹ ಕಲಾವಿದ ಆಗುಂಬೆ ಹೋಂ ಸ್ಟೇಯಲ್ಲಿ ನಿಧನ; ಆಗಿದ್ದೇನು?

ಏಕೆಂದರೆ ನಟ ಯಶ್​ ಅವರು ಎಷ್ಟೇ ಬ್ಯುಸಿಯಾಗಿದ್ರೂ ತಮ್ಮ ಕುಟುಂಬಕ್ಕೆ ಸಮಯ ಮೀಸಲು ಇಟ್ಟಿರುತ್ತಾರೆ. ಆಗಾಗ ಮುದ್ದಾದ ಮಗಳ ಜೊತೆಗೆ ಕಾಲ ಕಳೆದಿದ್ದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದ್ರೆ ಇದೀಗ ವಿಶ್ವದ ಅತ್ಯುತ್ತಮ ಅಪ್ಪನಿಗೆ, ತಂದೆಯ ದಿನಾಚರಣೆಯ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.

publive-image

ಹೌದು, ತಮ್ಮ ಮಕ್ಕಳಿಗಾಗಿ ತನ್ನ ಪ್ರಪಂಚವನ್ನೇ (ಮತ್ತು ತನ್ನನ್ನೇ) ತಲೆಕೆಳಗಾಗಿ ಮಾಡುವ ವಿಶ್ವದ ಅತ್ಯುತ್ತಮ ಅಪ್ಪನಿಗೆ ತಂದೆಯ ದಿನಾಚರಣೆಯ ಶುಭಾಶಯಗಳು ಅಂತ ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಆಟ ಆಡುತ್ತಿರುವ ವೀಡಿಯೋ ಹಾಕಿದ್ದಾರೆ. ಅದರಲ್ಲಿ ಯಶ್, ಮಕ್ಕಳ ಜೊತೆ ಮಗುವಾಗಿ ಪಲ್ಟಿ ಹೊಡೆಯುತ್ತಾ ಆಡುತ್ತಿರುವುದನ್ನು ಕಾಣಬಹುದು.

ಸದ್ಯ ನಟ ಯಶ್​ ಅವರು ರಾಮಾಯಣ ಹಾಗೂ ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲದೇ ಯಶ್ ಈಗ ಚಿತ್ರ ನಿರ್ಮಾಣ ಸಂಸ್ಥೆ ಸಹ ಹುಟ್ಟುಹಾಕಿದ್ದಾರೆ. ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಇನ್ನು ದೀಪಾವಳಿಗೆ ರಾಮಾಯಣ ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. ರಾವಣನಾಗಿ ಚಿತ್ರದಲ್ಲಿ ಯಶ್ ಬಣ್ಣ ಹಚ್ಚಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment