ನಿಸರ್ಗದ ಮಡಿಲಲ್ಲಿ ನಟಿ ಅದಿತಿ ಪ್ರಭುದೇವ ಕ್ಯೂಟ್ ಫ್ಯಾಮಿಲಿ; ಹೇಗಿತ್ತು ಒನ್​ ಡೇ ಟ್ರಿಪ್.. VIDEO ಇಲ್ಲಿದೆ!

author-image
Veena Gangani
Updated On
ನಿಸರ್ಗದ ಮಡಿಲಲ್ಲಿ ನಟಿ ಅದಿತಿ ಪ್ರಭುದೇವ ಕ್ಯೂಟ್ ಫ್ಯಾಮಿಲಿ; ಹೇಗಿತ್ತು ಒನ್​ ಡೇ ಟ್ರಿಪ್.. VIDEO ಇಲ್ಲಿದೆ!
Advertisment
  • 2022ರಲ್ಲಿ ಯಶಸ್ಸು ಚಂದ್ರಕಾಂತ್​ ಜೊತೆ ಮದುವೆಯಾಗಿದ್ದ ಕನ್ನಡದ ನಟಿ
  • ಹೊಸ ವರ್ಷದ ದಿನವೇ ಫ್ಯಾನ್ಸ್​ಗೆ ಸಿಹಿ ಸುದ್ದಿ ಕೊಟ್ಟಿದ್ದ ಅದಿತಿ ಪ್ರಭುದೇವ
  • ಮುದ್ದಾದ ಮಗಳು ನೇಸರಳಾ ಜೊತೆಗೆ ಒಂದು ದಿನದ ಟ್ರೀಪ್​ ಹೇಗಿತ್ತು?

ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ಸು ಚಂದ್ರಕಾಂತ್ ಸಖತ್​ ಖುಷಿಯಲ್ಲಿದ್ದಾರೆ. ನಟಿ ಅದಿತಿ ಪ್ರಭುದೇವ ದಂಪತಿ ಅವರ ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ.

ಇದನ್ನೂ ಓದಿ:ಮುದ್ದಾದ ಮಗಳ ಜೊತೆಗೆ ಅದಿತಿ ಪ್ರಭುದೇವ ದಂಪತಿ; ನೇಸರಳ ಕ್ಯೂಟ್​ನೆಸ್​ಗೆ ಫ್ಯಾನ್ಸ್​ ಫಿದಾ

publive-image

2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರನ್ನು ಸ್ಯಾಂಡಲ್​ವುಡ್​ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು.

publive-image

ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿತ್ತು. ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

publive-image

ಇದಾದ ಬಳಿಕ ನಟಿ ಕ್ಯೂಟ್​ ಮಗಳಾದ ನೇಸರಳ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಪುಟಾಣಿ ನೇಸರಳ ಜೊತೆಗೆ ನಟಿ ಅದಿತಿ ಪ್ರಭುದೇವ ಕುಟುಂಬಸ್ಥರು ಒಂದು ದಿನ ನಿಸರ್ಗದ ಮಡಿಲಲ್ಲಿ ಕಾಲ ಕಳೆದಿದ್ದಾರೆ. ಸುಂದರವಾದ ವಾತಾವರಣದಲ್ಲಿ ತಮ್ಮ ಕ್ಯೂಟ್​ ಮಗಳ ಜೊತೆಗೆ ಮಸ್ತ್​ ಮಜಾ ಮಾಡಿದ್ದಾರೆ. ಅಲ್ಲದೇ ಅಲ್ಲೇ ಟೀ ಮಾಡಿಕೊಂಡು ಕುಡಿದು ಖುಷಿ ಪಟ್ಟು ಮನೆಗೆ ವಾಪಸ್​ ಆಗಿದೆ.

ಇನ್ನೂ ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡ ನಟಿ ಅದರ ಜೊತೆಗೆ ಏನೋ ಮಧುರ ಈ ಬಂಧನ ಅಂತ ಬರೆದುಕೊಂಡಿದ್ದಾರೆ. ಈ ಕ್ಯೂಟ್ ವಿಡಿಯೋ ನೋಡಿದ ಅಭಿಮಾನಿಗಳು, ನೇಸರಗೆ ದೃಷ್ಟಿ ತೆಗೀರಿ ಅಕ್ಕ, ಮುದ್ದು ಗೊಂಬೆ ಅವಳು ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment