ಈ ಕ್ಯೂಟ್​ ಬೇಬಿ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಮಗಳು.. ಯಾರದು ಗೆಸ್​ ಮಾಡಿ ನೋಡೋಣ!

author-image
Veena Gangani
Updated On
ಈ ಕ್ಯೂಟ್​ ಬೇಬಿ ಸ್ಯಾಂಡಲ್​ವುಡ್​ ಸ್ಟಾರ್​ ನಟಿ ಮಗಳು.. ಯಾರದು ಗೆಸ್​ ಮಾಡಿ ನೋಡೋಣ!
Advertisment
  • ಈಕೆ ಸ್ಯಾಂಡಲ್​ವುಡ್​ ಸ್ಟಾರ್​ ನಟಿಯ ಮುದ್ದಾದ ಮಗಳು
  • ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ವಿಡಿಯೋ
  • ಇತ್ತೀಚೆಗಷ್ಟೇ ಗ್ರ್ಯಾಂಡ್​ ಆಗಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು

ಈಕೆ ಸ್ಯಾಂಡಲ್​ವುಡ್​ ಸ್ಟಾರ್​ ನಟಿಯ ಮುದ್ದಾದ ಮಗಳು.. ಇತ್ತೀಚೆಗಷ್ಟೇ ಸಖತ್​ ಗ್ರ್ಯಾಂಡ್​ ಆಗಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು.

ಇದನ್ನೂ ಓದಿ: ಟಾಪ್​ 6ರಲ್ಲಿ ಯಾರ ಕೈಗೆ ಸೇರಲಿದೆ Sa Re Ga Ma Pa ಟ್ರೋಫಿ.. ವೀಕ್ಷಕರ ಚಿತ್ತ ಯಾರತ್ತ?

publive-image

ಹೌದು, ಈ ಕ್ಯೂಟ್​ ಪೋರಿ ಬೇರೆ ಯಾರು ಅಲ್ಲ. ಸ್ಯಾಂಡಲ್‌ವುಡ್ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ಸು ಚಂದ್ರಕಾಂತ್ ದಂಪತಿ ಮುದ್ದಾದ ಮಗಳು ನೇಸರ. ಸದ್ಯ ನಟಿ ಅದಿತಿ ಪ್ರಭುದೇವ ಅವರು ತಮ್ಮ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

publive-image

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಌಕ್ಟೀವ್​ ಆಗಿರೋ ನಟಿ ಆಗಾಗ ಮುದ್ದಾದ ಮಗಳ ಫೋಟೋಗಳು ಹಾಗೂ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಈಗ ನಟಿ ಇನ್ನಷ್ಟೂ ಕ್ಯೂಟ್ನೆಸ್ ತುಂಬಿರೋ ಮಗಳ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

publive-image

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನೇಸರಳ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಮತ್ಸ್ಯಕನ್ಯೆ (ಮರ್ಮೇಡ್) ಲುಕ್​ನಲ್ಲಿ ಡ್ರೇಸ್​ ಹಾಕಿ ವಿಡಿಯೋ ಶೂಟ್​ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ನೇಸರಳ ಕ್ಯೂಟ್ನೆಸ್​ಗೆ ಫಿದಾ ಆಗಿದ್ದಾರೆ.


2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್​ ಪಟ್ಲಾ ಅವರನ್ನು ಸ್ಯಾಂಡಲ್​ವುಡ್​ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಮುದ್ದಾದ ಮಗಳ ಆಗಮನವಾಗಿತ್ತು.
ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment