newsfirstkannada.com

×

Aditi Rao Hydari: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್, ಅದಿತಿ ರಾವ್ ಹೈದರಿ; ಕ್ಯೂಟ್​ ಫೋಟೋಸ್​ ಇಲ್ಲಿವೆ

Share :

Published September 16, 2024 at 1:07pm

Update September 16, 2024 at 1:41pm

    400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ನಡೆದ ಮದುವೆ

    ಸರಳ ಹಾಗೂ ಸುಂದರವಾಗಿ ಮದುವೆಯಾದ ಸ್ಟಾರ್​ ಜೋಡಿ

    ಇನ್​ಸ್ಟಾದಲ್ಲಿ ಫೋಟೋಸ್​ ಶೇರ್ ಮಾಡಿಕೊಂಡ ಅದಿತಿ ರಾವ್ ಹೈದರಿ

ಬಹುಭಾಷಾ ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಲವ್ ಬರ್ಡ್ಸ್ ವಿವಾಹವಾಗಿದ್ದಾರೆ. ನಟಿ ಅದಿತಿ ಮತ್ತು ಸಿದ್ಧಾರ್ಥ್ 2021ರ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಮಹಾ ಸಮುದ್ರಂನಲ್ಲಿ ಒಟ್ಟಿಗೆ ನಟಿಸಿದ್ದರು.

ಇದನ್ನೂ ಓದಿ:‘ಅವಳು ಲವ್ಲಿ ಅಲ್ಲವೇ’ ನಟಿ ಅದಿತಿ ರಾವ್ ಹೈದರಿ ಹುಟ್ಟು ಹಬ್ಬಕ್ಕೆ ಶುಭಕೋರಿದ ನಟ ಸಿದ್ದಾರ್ಥ್​.. ಪೋಸ್ಟ್​ ವೈರಲ್

ನಟ, ನಿರ್ಮಾಪಕ ಆಗಿರೋ ಸಿದ್ಧಾರ್ಥ ಸ್ಟಾರ್ ನಟಿ ಅದಿತಿ ರಾವ್ ಹೈದರಿ ಕೈ ಹಿಡಿದಿದ್ದಾರೆ. ತೆಲಂಗಾಣದ ವಾನಪರ್ತಿಯ 400 ವರ್ಷಗಳಷ್ಟು ಹಳೆಯದಾದ ರಂಗಸ್ವಾಮಿ ದೇವಾಲಯದಲ್ಲಿ ಹಿಂದೂ ಸಂಪ್ರದಾಯದಂತೆ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕ ಕಾಲಿಟ್ಟಿದ್ದಾರೆ. ಸದ್ಯ ಬಹಳ ಸರಳ ಹಾಗೂ ಸುಂದರವಾಗಿ ಮದುವೆಯಾಗಿದ್ದಾರೆ.

ಇನ್ನು, ತಮ್ಮ ಮದುವೆ ಫೋಟೋಗಳನ್ನು ಅದಿತಿ ರಾವ್ ಹೈದರಿ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ನೀವು ನನ್ನ ಸೂರ್ಯ, ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು.. ಶಾಶ್ವತ ಪ್ರೀತಿ, ಬೆಳಕು ಮತ್ತು ಮ್ಯಾಜಿಕ್ ಶ್ರೀಮತಿ ಮತ್ತು ಶ್ರೀ ಆಡು-ಸಿದ್ದು ಅಂತ ಬರೆದುಕೊಂಡಿದ್ದಾರೆ. ಮದುವೆ ಥೀಮ್​ನಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ಇತ್ತ ಸಿದ್ಧಾರ್ಥ್ ಬಿಳಿ ಕುರ್ತಾವನ್ನು ಧರಿಸಿಕೊಂಡಿದ್ದಾರೆ.

ಈ ಇಬ್ಬರೂ ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದಿದ್ದು ಬಹಿರಂಗವಾಗಿತ್ತು. ತೆಲುಗಿನ ‘ಮಂಗಳವಾರಂ’ ಖ್ಯಾತಿಯ ನಿರ್ದೇಶಕ ಅಜಯ್ ಭೂಪತಿ ನಿರ್ದೇಶಿಸಿದ್ದ ‘ಮಹಾಸಮುದ್ರಂ’ ಸಿನಿಮಾ ಮೂಲಕ ಸಿದ್ಧಾರ್ಥ್ ಹಾಗೂ ಅದಿತಿ ಒಂದಾಗಿದ್ದರು. ಖ್ಯಾತ ಮಾಡೆಲ್ ಆಗಿಯೂ ಗುರುತಿಸಿಕೊಂಡಿರುವ ಹೈದರಾಬಾದ್ ಮೂಲದ ಅದಿತಿ ರಾವ್ ಹೈದರಿ ಅವರು ಇದುವರೆಗೆ ಹಿಂದಿ, ತಮಿಳು, ತೆಲುಗಿನಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

View this post on Instagram

A post shared by Aditi Rao Hydari (@aditiraohydari)

ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಈ ಫೋಟೋಸ್​ ನೋಡಿದ ಅಭಿಮಾನಿಗಳು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಜೊತೆಗೆ ನಿಮ್ಮ ಮುಂದಿನ ಜೀವನ ಸುಖಮಯವಾಗಿ ಇರಲಿ, ನಗು ನಗುತ್ತಾ ಲೈಫ್​ ಅನ್ನು ಎಂಜಾಯ್ ಮಾಡಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Aditi Rao Hydari: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್, ಅದಿತಿ ರಾವ್ ಹೈದರಿ; ಕ್ಯೂಟ್​ ಫೋಟೋಸ್​ ಇಲ್ಲಿವೆ

https://newsfirstlive.com/wp-content/uploads/2024/09/aditiraohydari.jpg

Load More