/newsfirstlive-kannada/media/post_attachments/wp-content/uploads/2025/03/puttakana-makkalu.jpg)
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಅಕ್ಕ-ತಂಗಿಯರದ್ದೇ ಹವಾ. ಪುಟ್ಟಕ್ಕನ ತಂಟಗೆ ಬಂದ ರೌಡಿಗಳಿಗೆ ಹಿಗ್ಗಾಮುಗ್ಗಾ ಹೊಡೆದೂರಳಿಸಿದ್ದಾರೆ. ಶೂಟಿಂಗ್ ವೇಳೆ ಸಹನಾ ಪಾತ್ರಧಾರಿ ನಟಿ ಅಕ್ಷರಾ ಅವರಿಗೆ ಏಟಾಗಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ.
ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್ ಬಣ್ಣಗಳ ಹಬ್ಬವನ್ನು ಆಚರಿಸೋದಿಲ್ಲ ಏಕೆ? ಇಲ್ಲಿದೆ ಆ ಸೀಕ್ರೆಟ್!
ರಾಜಿಯ ಕುತಂತ್ರ ಒಂದರೆಡಲ್ಲ. ಪುಟ್ಟಕ್ಕನ ಕುಟುಂಬ ಒಂದಾಗಿ ಬಿಡುತ್ತೋ ಎಂಬ ಹೊಟ್ಟೆ ಕಿಚ್ಚಿನಿಂದ ರಾಜಿ ರೌಡಿಗಳಿಗೆ ಸುಪಾರಿ ಕೊಟ್ಟಿರ್ತಾಳೆ. ಪುಟ್ಟಕ್ಕನ ಮೇಲೆ ಅಟ್ಯಾಕ್ ಏನೋ ಆಗುತ್ತೆ. ಅವ್ವನನ್ನ ಟಚ್ ಮಾಡೋಕೆ ಬಿಡಲ್ಲ ಮಕ್ಕಳು. ಈ ನಡುವೆ ಭರ್ಜರಿ ಫೈಟ್ ಆಗುತ್ತೆ. ಈ ಫೈಟ್ ಶೂಟಿಂಗ್ ವೇಳೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅದರಲ್ಲೂ ನಟಿ ಅಕ್ಷರಾ ಅವರಿಗೆ ಕೈಗೆ ಗಾಯವಾಗಿದೆ. ಬಳೆ ಒಡೆದು ರಕ್ತ ಬಂದಿದೆ. ಒಟ್ಟಿನಲ್ಲಿ ಪುಟ್ಟಕ್ಕನ ಮಕ್ಕಳು ತಾಳ್ಮೆಗೆ ಗುಡ್ ಬೈ ಹೇಳಿದ್ದಾರೆ. ನೀನು ಅಂದ್ರೇ ನಿಮ್ಮ ಅಪ್ಪ ಅನ್ನೋ ಮಟ್ಟಿಗೆ ಧೈರ್ಯದಿಂದ ಜೀವನ ಸಾಗಿಸೋದನ್ನ ಕಲಿತಿದ್ದಾರೆ. ಮೂವರು ನಾರರಿ ಮಣಿಯರ ಫೈಟ್ ಶೂಟಿಂಗ್ ಸೀನ್ ನೋಡಿದ ವೀಕ್ಷಕರು ಕೂಡ ದಂಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ