ಅಂಬಾನಿ ಮದ್ವೆಗೆ 160 ವರ್ಷದ ಹಳೇ ಸೀರೆ ತೊಟ್ಟ ಆಲಿಯಾ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

author-image
Veena Gangani
Updated On
ಅಂಬಾನಿ ಮದ್ವೆಗೆ 160 ವರ್ಷದ ಹಳೇ ಸೀರೆ ತೊಟ್ಟ ಆಲಿಯಾ; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ಡಿಸೈನರ್ ಮನೀಶ್ ಮಲ್ಹೋತ್ರಾ ಅವರಿಂದ ಡಿಸೈನ್ ಮಾಡಿಸಿದ ನಟಿ
  • ಪತಿ ರಣಬೀರ್ ಕಪೂರ್ ಜೊತೆ ಗುಲಾಬಿ ಬಣ್ಣದ ಸೀರೆ ತೊಟ್ಟ ಆಲಿಯಾ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಈ ಫೋಟೋ

ಅಬ್ಬಬ್ಬಾ.. ಅಂಬಾನಿ ಮನೆಯ ಮದುವೆ ಸಂಭ್ರಮ ಅಂದ್ರೆ ಸುಮ್ನೆನಾ? ಅದೆಷ್ಟು ವೈಭವ, ಸಾವಿರಾರು ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿ ತಮ್ಮ ಕಿರಿಯ ಮಗನ ಮದುವೆಯನ್ನು ಮಾಡುತ್ತಿದ್ದಾರೆ. ಹೌದು, ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್​ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್​ ಅಂಬಾನಿ ಕಿರಿಯ ಪುತ್ರ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಬಹಳ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

publive-image

ಇದನ್ನೂ ಓದಿ: ಅಮಿತಾಬ್ ಬಚ್ಚನ್ ಮಗನನ್ನ ಬಿಟ್ರಾ ಐಶ್ವರ್ಯ ರೈ..? ಅಂಬಾನಿ ಸಂಭ್ರಮದಲ್ಲಿ ಬಿಗ್ ಬಿ ಫ್ಯಾಮಿಲಿ ಬೇರೆ ಬೇರೆ!

ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಅಂಬಾನಿ ಮಗ ಅನಂತ್​ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಗುರು ಹಿರಿಯರ ಸಮ್ಮುಖದಲ್ಲಿ ನಿನ್ನೆ ಸಂಜೆ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಶುಕ್ರವಾರದಿಂದ ಜುಲೈ 14ರವರೆಗೆ ಮುಖೇಶ್​ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳಿಂದ ಗಣ್ಯಾತಿಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳ ಮುಂಬೈ ಆಗಮಿಸಿದ್ದಾರೆ.

publive-image

ಅನಂತ್ ಅಂಬಾನಿ ಮದುವೆಗೆ ಅದೇಷ್ಟೋ ಬಾಲಿವುಡ್​ ಸ್ಟಾರ್ಸ್​ಗಳು ಎಂಟ್ರಿ ಕೊಟ್ಟಿದ್ದಾರೆ. ಅಂಬಾನಿ ಹಾಗೂ ರಾಧಿಕಾ ಮದುವೆ ಬಹಳ ಬಾಲಿವುಡ್​ ತಾರೆಯರು ಅದ್ಧೂರಿಯಾಗಿ ರೆಡಿಯಾಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅದರಲ್ಲೂ ಬಾಲಿವುಡ್​ ಬೆಡಗಿ ಆಲಿಯಾ ಭಟ್​ ಸುಮಾರು 160 ವರ್ಷ ವಯಸ್ಸಿನ ನೇಯ್ದ ಆಶಾವಲಿ ಸೀರೆಯನ್ನು ಅವರು ಧರಿಸಿದ್ದು ಸಂಪೂರ್ಣವಾಗಿ ಎಥ್ನಿಕ್ ಲುಕ್​ನಲ್ಲಿ ಮಿಂಚಿದ್ದಾರೆ.

ಹೌದು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆಲಿಯಾ ಭಟ್ ತಮ್ಮ ಪತಿ ರಣಬೀರ್ ಕಪೂರ್ ಅವರೊಂದಿಗೆ ಹೆಜ್ಜೆ ಹಾಕಿದರು. ಆಲಿಯಾ ಭಟ್​​ ಧರಿಸಿದ್ದ ಈ ಸೀರೆಯನ್ನು ಗುಜರಾತ್​ನಲ್ಲಿ ತಯಾರಿಸಲಾಗಿದೆ. ಈ ಸೀರೆಯಲ್ಲಿ ಶುದ್ಧ ರೇಷ್ಮೆ ಮತ್ತು ಝರಿಯನ್ನು ಬಳಸಿ ತಯಾರು ಮಾಡಲಾಗಿದೆ. ಜೊತೆಗೆ ಆಲಿಯಾ ಭಟ್ ಧರಿಸಿದ್ದ ಸೀರೆಯಲ್ಲಿ 6 ಗ್ರಾಂ ಶುದ್ಧ ಚಿನ್ನವನ್ನು ಬಳಸಲಾಗಿದೆ. ಸ್ಟ್ರಾಪ್‌ಲೆಸ್ ಬ್ಲೌಸ್‌ನೊಂದಿಗೆ ಜೋಡಿಸಲಾದ ಇದು ರಾಣಿ ಗುಲಾಬಿ ಬಣ್ಣವನ್ನು ಹೊಂದಿದೆ. ಭಾರೀ ಆಭರಣ ಮತ್ತು ನಯವಾದ ಕೇಶವಿನ್ಯಾಸದಿಂದ ಈ ಸೀರೆಯಲ್ಲಿ ಅಲಿಯಾ ಕಂಗೊಳಿಸಿದ್ದರು. ಶುದ್ಧ ರೇಷ್ಮೆ ಮತ್ತು ಶೇ. 99ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಅನ್ನು ಇದು ಹೊಂದಿತ್ತು. ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಈ ಸೀರೆಯನ್ನು ಡಿಸೈನ್ ಮಾಡಿದ್ದು ಈ ಸೀರೆಯ ನಿಖರವಾದ ಬೆಲೆ 2 ಕೋಟಿ ರೂಪಾಯಿ ಎನ್ನಲಾಗ್ತಿದೆ. ವಜ್ರದ ನೆಕ್ಲೇಸ್​ಗೆ ಸಮನಾದ ಕಿವಿಯೋಲೆಗಳು ಹಾಗೂ ಮಾಂಗ್ ಟಿಕಾ ಸೇರಿದಂತೆ ಹಲವು ಆಭರಣಗಳನ್ನು ಧರಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment