/newsfirstlive-kannada/media/post_attachments/wp-content/uploads/2024/10/Amrutha-Ramamoorthi.jpg)
ಕಲರ್ಸ್​ ಕನ್ನಡದ ಟಾಪ್​ ಧಾರಾವಾಹಿಗಳ ಲಿಸ್ಟ್​ನಲ್ಲಿದ್ದ ಸ್ಟೋರಿ ಕೆಂಡಸಂಪಿಗೆ ಧಾರಾವಾಹಿ ಅಂತ್ಯ ಕಂಡಿದೆ. ಪರಿಣಿತ ಪ್ರೊಡಕ್ಷನ್ಸ್​ನಡಿ ಉದಯ್​​ ಅವರ ನಿರ್ದೇಶನದಲ್ಲಿ 610 ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿ ಮುಕ್ತಾಯಗೊಂಡಿದೆ.
ಸುಮನಾ-ತೀರ್ಥ ಸ್ಟೋರಿಗೆ ಫುಲ್​ಸ್ಟಾಪ್​ ಸಿಕ್ಕಿದೆ. ಸಾಧನಾ ಪಾತ್ರ ತನ್ನ ಎಲ್ಲಾ ತಪ್ಪುಗಳನ್ನ ಒಪ್ಪಿ ಕ್ಷಮೆ ಕೇಳೋ ಮೂಲಕ ಸೀರಿಯಲ್​ಗೆ ಒಂದೋಳ್ಳೆ ಅಂತ್ಯ ನೀಡಲಾಗಿದೆ. ಕೆಂಡಸಂಪಿಗೆ ಶುರುವಿನಿಂದ ಸಾಧನಾ ಪಾತ್ರವನ್ನ ಅದ್ಭುತವಾಗಿ ನಿರ್ವಹಿಸಿರೋ ನಟಿ ಅಮೃತಾ ರಾಮಮೂರ್ತಿ ಅವರು ತಮ್ಮ ಜರ್ನಿ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಭಾವುಕ ಪೋಸ್ಟ್​ ಶೇರ್​ ಮಾಡಿದ್ದಾರೆ. ಪಾಸಿಟಿವ್​ ಪಾತ್ರಗಳನ್ನ ಮಾಡ್ಕೊಂಡು ಬಂದಿದ್ದೆ.
View this post on Instagram
ಸಾಧನಾ ಪಾತ್ರ ನನ್ನ ಸಂಪೂರ್ಣ ನೆಗೆಟಿವ್​ ಪಾತ್ರವಾಗಿತ್ತು. ನನ್ನ ತುಂಬಾ ಬೈಯೊಕೊಂಡಿದ್ದೀರಾ. ಅದು ನನಗೆ ಖುಷಿ ಕೊಟ್ಟಿದೆ. ನನ್ನ ಅಭಿನಯ, ಕಾಸ್ಟ್ಯೂಮ್​ನ ತುಂಬಾ ಜನ ಮೆಚ್ಚಿಕೊಂಡಿದ್ದರು. ಅದಕ್ಕೂ ಥ್ಯಾಂಕ್ಯೂ ಎಂದಿದ್ದಾರೆ ಅಮೃತಾ. ವಿಡಿಯೋ ಜೊತೆಗೆ ಕೆಂಡಸಂಪಿಗೆಯ ಒಂದಿಷ್ಟು ಬ್ಯೂಟಿಫುಲ್​ ನೆನಪುಗಳನ್ನ ಶೇರ್​ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ