newsfirstkannada.com

ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್

Share :

Published August 8, 2024 at 8:15am

    ವಿನೇಶ್ ಫೋಗಟ್ ಕುಸ್ತಿಗೆ ವಿದಾಯ ಘೋಷಣೆ ಮಾಡಿದ್ದಾರೆ

    ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿಯ ಫೈನಲ್​​ನಲ್ಲಿ ಅನರ್ಹ

    ವಿನೇಶ್​ ಫೋಗಟ್ ಬಗ್ಗೆ ಕಂಗನಾ ರಣಾವತ್ ಹೇಳಿದ್ದೇನು?

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿಯಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶ ಮಾಡಿ ಅನರ್ಹಗೊಂಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕೋಟ್ಯಂತರ ಭಾರತೀಯರ ಹೃದಯ ಛಿದ್ರಛಿದ್ರಗೊಂಡಿದೆ.

ಇದೇ ನೋವಿನಲ್ಲೇ ವಿನೇಶ್ ಫೋಗಟ್ ಕುಸ್ತಿಗೆ ವಿದಾಯವನ್ನೂ ಹೇಳಿದ್ದಾರೆ. ಕುಗ್ಗಿ ಹೋಗಿರುವ ವಿನೇಶ್​ಗೆ ಧೈರ್ಯ ತುಂಬುವ ಕೆಲಸ ಕೂಡ ನಡೆಯುತ್ತಿದೆ. ಅಂತೆಯೇ ಬಿಜೆಪಿ ಸಂಸದೆ ಕಂಗನಾ ರಣಾವತ್ ಇನ್​​ಸ್ಟಾ ಸ್ಟೋರಿಯಲ್ಲಿ ವಿನೇಶ್​ ಫೋಗಟ್ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್ ಗೆಲುವಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ; ರೊಚ್ಚಿಗೆದ್ದ ಜನ..!

ಒಂದು ಪೋಸ್ಟ್​ನಲ್ಲಿ ಕಾರ್ಟೂನ್ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅಳಬೇಡ ವಿನೇಶ್, ಇಡೀ ದೇಶವೇ ನಿನ್ನೊಂದಿಗೆ ನಿಂತಿದೆ’ ಎಂಬ ಸಂದೇಶ ಇದೆ. ಇನ್ನೊಂದು ಫೋಟೋದಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಮುಖ್ಯಸ್ಥೆ ಪಿಟಿ ಉಷಾ, ವಿನೇಶ್ ಭೇಟಿಯಾದ ಕ್ಷಣದ್ದಾಗಿದೆ. ಅದರ ಮೇಲೆ ನೀವು ‘ಸಿಂಹಿಣಿ’ ಎಂದು ಬರೆದಿದ್ದಾರೆ. ವಿನೇಶ್ ಫೋಗಟ್ ಅವರನ್ನು ಕಂಗನಾ ಸಿಂಹಿಣಿ ಅಂದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ವಿನೇಶ್ ಫೋಗಟ್​ ಫೈನಲ್ ಪ್ರವೇಶ ಮಾಡ್ತಿದ್ದಂತೆಯೇ, ಅವರನ್ನು ಹಂಗಿಸಿ ಕಂಗನಾ ಪೋಸ್ಟ್ ಮಾಡಿದ್ದರು.

ಹಿಂದಿನ ಪೋಸ್ಟ್​ನಲ್ಲಿ ಏನಿತ್ತು..?
ವಿನೇಶ್ ಫೋಗಟ್ ಫೈನಲ್ ಪ್ರವೇಶದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಸಂಸದೆ ಕಂಗನಾ ರಣಾವತ್, ಭಾರತಕ್ಕೆ ಮೊದಲ ಚಿನ್ನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ವಿನೇಶ್ ಫೋಗಟ್ ಒಮ್ಮೆ ಚಳವಳಿಯಲ್ಲಿ ಭಾವಹಿಸಿದ್ದರು. ಈ ವೇಳೆ ಅವರು ಮೋದಿ ನಿಮ್ಮ ಸಮಾಧಿಯನ್ನೂ ಅಗೆಯುತ್ತಾರೆ ಎಂದು ಹೇಳಿದ್ದರು. ಅದರ ಹೊರತಾಗಿಯೂ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅತ್ಯುತ್ತಮ ತರಬೇತಿ, ತರಬೇತುದಾರರು ಮತ್ತು ಸೌಲಭ್ಯಗಳನ್ನು ಪಡೆದರು. ಇದು ಪ್ರಜಾಪ್ರಭುತ್ವದ ಸೌಂದರ್ಯ ಮತ್ತು ಉತ್ತಮ ನಾಯಕ ಎಂದು ಬೆರೆದುಕೊಂಡಿದ್ದರು.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್

https://newsfirstlive.com/wp-content/uploads/2024/08/VINESH-PHOGAT-8.jpg

Load More