/newsfirstlive-kannada/media/post_attachments/wp-content/uploads/2025/05/ankitha-amar.jpg)
ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ಎಂದರೆ ಅದು ಅಂಕಿತಾ ಅಮರ್. ಇದೀಗ ನಟಿ ಅಂಕಿತಾ ಅಮರ್ಗೆ ಬಿಗ್ ಆಫರ್ ಸಿಕ್ಕಿದ್ದು. ಅದುವೇ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಅಭಿನಯಿಸುವ ಚಾನ್ಸ್ವೊಂದು ದೊರಕಿದೆ.
ಇದನ್ನೂ ಓದಿ:ಗ್ರ್ಯಾಂಡ್ ಆಗಿ ಅತ್ತೆ-ಮಾವನ ಮದುವೆ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಿದ ರಜತ್ ಕಿಶನ್! PHOTOS
ಹೌದು, ನಮ್ಮನೆ ಯುವರಾಣಿ ಧಾರಾವಾಹಿ ಮೀರಾ ಪಾತ್ರದಲ್ಲಿ ಮಿಂಚಿದ್ದು ನಟಿ ಅಂಕಿತಾ ಅಮರ್. ಮೊದಲ ಧಾರಾವಾಹಿಯ ಮೂಲಕವೇ ಫೇಮಸ್ ಕೂಡ ಆದರು. ಇದೇ ಸೀರಿಯಲ್ ನಟಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಟ್ಟಿತ್ತು. ಸೀರಿಯಲ್ ಬಳಿಕ ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರು.
ಇದೀಗ ಅಂಕಿತಾ ಅಮರ್ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆಗೆ ಅಭಿನಯಿಸಲಿರುವ ಅವಕಾಶ ಸಿಕ್ಕಿದೆ. ನಾಗಣ್ಣ ನಿರ್ದೇಶನ ಮಾಡುತ್ತಿರುವ ಭಾರ್ಗವ ಸಿನಿಮಾಕ್ಕೆ ಉಪೇಂದ್ರಗೆ ಅಂಕಿತಾ ನಾಯಕಿಯಾಗಿದ್ದಾರೆ. ಇದು ನಾಗಣ್ಣ ಹಾಗೂ ಉಪೇಂದ್ರ ಕಾಂಬಿನೇಶನ್ ನ ಐದನೇ ಸಿನಿಮಾ ಕೂಡ ಆಗಿದೆ. ಇಬ್ಬನಿ ತಬ್ಬಿದ ಇಳಿಯಲಿ ಸಿನಿಮಾದಲ್ಲಿ ಅಂಕಿತಾ ಅಭಿನಯ ನೋಡಿ ಮೆಚ್ಚಿಕೊಂಡಿರುವ ಉಪೇಂದ್ರ, ಭಾರ್ಗವ ಸಿನಿಮಾದಲ್ಲಿ ನಟನೆಗೆ ಹೆಚ್ಚು ಸ್ಕೋಪ್ ಇರೋದರಿಂದ ನಾಯಕಿ ಪಾತ್ರಕ್ಕೆ ಅಂಕಿತಾ ಅವರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನಟಿ ಅಂಕಿತಾ ಅಮರ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಅಂಕಿತಾ ಅಮರ್ ಅವರು ಶೈನ್ ಶೆಟ್ಟಿ ಜೊತೆ ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾ ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಇನ್ನು ಸನ್ ಆಫ್ ಸತ್ಯ ಹರಿಶ್ಚಂದ್ರ ಸಿನಿಮಾದಲ್ಲೂ ಅಂಕಿತಾ ನಟಿಸಿದ್ದಾರೆ. ಇದೀಗ ಭಾರ್ಗವ ಸಿನಿಮಾದಲ್ಲಿ ನಟಿಸುವ ಅವಕಾಶ ಕೂಡ ಸಿಕ್ಕಿದ್ದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ