/newsfirstlive-kannada/media/post_attachments/wp-content/uploads/2024/10/anupama1.jpg)
ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಖ್ಯಾತಿಯ ನಟಿ ಅನುಪಮಾ ಗೌಡ ಸದಾ ನಗು ಮುಖದ ಚೆಲುವೆ. ಎಲ್ಲರ ಕಣ್ಣು ಕುಕ್ಕುವಂತೆ ಜೀವನ ಸಾಗಿಸುವ ಗಟ್ಟಿಗಿತ್ತಿ. ಈ ಹಿಂದೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಜಾ ರಾಣಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
/newsfirstlive-kannada/media/post_attachments/wp-content/uploads/2024/10/anupama.jpg)
ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ ನಟಿ, ನಿರೂಪಕಿ ಅನುಪಮಾ ಗೌಡ ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ತನ್ನ ಬೆನ್ನಿನ ಮೇಲೆ ಅವರ ಜೀವನದಲ್ಲಿ ಸ್ಪೆಷಲ್ ಆಗಿರೋ ವ್ಯಕ್ತಿತ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
View this post on Instagram
ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗುತ್ತಿವೆ. ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡ ನಟಿ ಅನುಪಮಾ ಗೌಡ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲ. ಆದರೆ ಅವರು ಶಾಶ್ವತವಾಗಿ ನನ್ನ ಬೆನ್ನ ಹಿಂದೆ ಇರುತ್ತಾರೆ. ನನ್ನ ಒಂದು ಸುಂದರ ನೆನಪು ಈ ರೀತಿ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಅಂತ ಅಪ್ಪನ ಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಸಾಕಷ್ಟು ಕನ್ನಡದ ನಟಿಯರು ಕಾಮೆಂಟ್ಸ್ ಹಾಕಿದ್ದಾರೆ. ಜೊತೆಗೆ ನಟಿಯ ಅಭಿಮಾನಿಗಳು ಕೂಡ ಎಲ್ಲಾ ಹೆಣ್ಣುಮಕ್ಕಳ ಮೊದಲ ಹೀರೋ, ತುಂಬಾ ಚನ್ನಾಗಿದೆ ಅನು ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us