newsfirstkannada.com

ಚೈತ್ರಾ ಜೆ ಆಚಾರ್​ ​ಬೋಲ್ಡ್ ಲುಕ್ ಬಗ್ಗೆ ನಟಿ ಅನುಪಮಾ ಗೌಡ ಹೇಳಿದ್ದೇನು..?

Share :

Published May 1, 2024 at 6:25am

    ಚೈತ್ರಾ ಜೆ ಆಚಾರ್‌ ನಟನೆ ಬಗ್ಗೆ ಹಾಡಿ ಹೊಗಳಿದ ನಟಿ ಅನುಪಮಾ ಗೌಡ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ನಟಿ ಅನುಪಮಾ ವಿಡಿಯೋ

    ನಿರೂಪಕಿಯಾಗಿರೋ ನಟಿ ಅನುಪಮಾ ಗೌಡ ಅವರು 1 ದಿನದ ಸಂಭಾವನೆ ಎಷ್ಟು?

ಕನ್ನಡದ ಬಿಗ್​ಬಾಸ್​ ಬೆಡಗಿ, ನಟಿ ಅನುಪಮಾ ಗೌಡ ಅವರು ಒಂದಲ್ಲಾ ಒಂದು ವಿಚಾರಕ್ಕೆ  ಸುದ್ದಿಯಲ್ಲಿ ಇರುತ್ತಾರೆ. ಇದೀಗ ನಟಿ ಅನುಪಮಾ ಗೌಡ ಅವರು ರ್ಯಾಪಿಡ್ ರಶ್ಮಿ ನಡೆಸುವ ಸಂದರ್ಶನವೊಂದಲ್ಲಿ ತಮ್ಮ ಜೀವನದಲ್ಲಾದ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್​ ಬೆಡಗಿ ಅನುಪಮಾ ಗೌಡ ಆತ್ಮಹತ್ಯೆಗೆ ಯತ್ನಿಸಿದ್ರಾ? ಆ ಘಟನೆ ಬಗ್ಗೆ ಹೇಳಿದ್ದೇನು?

ಇದೇ ವೇಳೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್‌ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ಅವರ ಗ್ಲಾಮರಸ್​ ಲುಕ್​ ಬಗ್ಗೆ ಮಾತಾಡಿದ್ದಾರೆ. ಇನ್ನು, ನಟಿ ಚೈತ್ರಾ ಜೆ ಆಚಾರ್‌ ಅವರ ಬಗ್ಗೆ ಮಾತಾಡಿದ ಅನುಪಮಾ ಗೌಡ ಅವರು, ನಟಿ ಚೈತ್ರಾ ಜೆ ಆಚಾರ್‌ ಅವರನ್ನು ನೋಡಿದಾಗ ನನಗೆ ತುಂಬಾ ಖುಷಿ ಆಗುತ್ತೆ. ಫೋಟೋಶೂಟ್​ನಲ್ಲಿ ಗ್ಲಾಮಸರ್​ ಆಗಿ ಕಾಣುತ್ತಾರೆ. ಅಲ್ಲದೇ ಅವರ ನಟನೆ ವಿಚಾರಕ್ಕೆ ಬಂದರೆ ಅದ್ಭುತ. ನನಗೆ ಆ ತರ ಒಬ್ಬರು ಬೆಳೆಯುತ್ತಾ ಹೋದಾಗ ನನ್ನ ಮನಸ್ಸಿಗೆ ತುಂಬಾ ಖುಷಿ ಆಗುತ್ತೆ. ಅವರ ತರ ನನಗೆ ಮಾಡೋದಕ್ಕೆ ಆಗಲ್ಲ ಆದರೆ ಅವರು ಚೆನ್ನಾಗಿ ಕಾಣುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ನಟಿ ಅನುಪಮಾ ಗೌಡ ತಾವು ಪಡೆದ ಸಂಭಾವನೆ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದ ಮೊದಲು ನಟಿ ಅನುಪಮಾ ಅವರು ರಿಯಾಲಿಟಿ ಶೋವೊಂದರಲ್ಲಿ ಭಾಗಿಯಾಗಿದ್ದಾಗ 30,000 ರೂಪಾಯಿ ಪಡೆದಿದ್ದರಂತೆ. ಬಳಿಕ ಅಣ್ಣತಂಗಿ ಧಾರಾವಾಹಿಯಲ್ಲಿ ಒಂದು ದಿನ ಶೂಟಿಂಗ್‌ಗೆ 2,500 ರೂಪಾಯಿ ಪಡೆಯುತ್ತಿದ್ದಂತೆ. ಆನಂತರ ಅಕ್ಕ ಸೀರಿಯಲ್​ನಲ್ಲಿ 2,000 ರೂಪಾಯಿಗಳನ್ನು ಪಡೆಯುತ್ತಿದ್ದರಂತೆ ಎಂದು ನಟಿ ಈ ಸಂದರ್ಶನದಲ್ಲಿ ತಮ್ಮ ಸಂಭಾವನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈ ವಿಡಿಯೋ ನೀಡಿದ ನೆಟ್ಟಿಗರು ಅವರ ಸಂಭಾವನೇ ಕೇಳಿ ಶಾಕ್​ ಆಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೈತ್ರಾ ಜೆ ಆಚಾರ್​ ​ಬೋಲ್ಡ್ ಲುಕ್ ಬಗ್ಗೆ ನಟಿ ಅನುಪಮಾ ಗೌಡ ಹೇಳಿದ್ದೇನು..?

https://newsfirstlive.com/wp-content/uploads/2024/04/anupama-gowda5.jpg

Load More