ಅನುಷ್ಕಾ ಶೆಟ್ಟಿ ಒಂದೇ ಒಂದು ಪೋಸ್‌ಗೆ ಬರೋಬ್ಬರಿ 40 ಅಪಘಾತ ದಾಖಲು; ಎಲ್ಲಿ? ಹೇಗಾಯ್ತು?

author-image
admin
Updated On
ಅನುಷ್ಕಾ ಶೆಟ್ಟಿ ಒಂದೇ ಒಂದು ಪೋಸ್‌ಗೆ ಬರೋಬ್ಬರಿ 40 ಅಪಘಾತ ದಾಖಲು; ಎಲ್ಲಿ? ಹೇಗಾಯ್ತು?
Advertisment
  • ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್ ಅಭಿನಯದ ವೇದಂ ಸಿನಿಮಾ
  • ಲೈಂಗಿಕ ಕಾರ್ಯಕರ್ತೆ ಸರೋಜ ಪಾತ್ರದಲ್ಲಿ ಅಭಿನಯಿಸಿದ್ದ ಅನುಷ್ಕಾ
  • ಒಂದೇ ಒಂದು ಮಾದಕ ನೋಟಕ್ಕೆ ಪಡ್ಡೆ ಹುಡುಗರು ಕಳೆದೋಗಿದ್ದರು

ಹೈದರಾಬಾದ್: ಅನುಷ್ಕಾ ಶೆಟ್ಟಿ ಇವರ ಮೂಲ ಹೆಸರು ಸ್ವೀಟಿ ಶೆಟ್ಟಿ. ಈ ಸ್ವೀಟಿ ಹುಟ್ಟಿದ್ದು ಮಂಗಳೂರಿನಲ್ಲಿ ಆದರೂ ತೆಲುಗು, ತಮಿಳು ಚಿತ್ರರಂಗದಲ್ಲಿ ಕಳೆದ 20 ವರ್ಷಗಳಿಂದ ಇವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅನುಷ್ಕಾ ಶೆಟ್ಟಿ ಅದೆಷ್ಟು ಫೇಮಸ್ ಅನ್ನೋದಕ್ಕೆ 15 ವರ್ಷಗಳ ಹಿಂದೆ ನಡೆದಿರೋ ಒಂದು ಘಟನೆ ಸಾಕ್ಷಿಯಾಗಿದೆ.

ಜೂನ್ 4, 2010ರಂದು ಅನುಷ್ಕಾ ಶೆಟ್ಟಿ, ಅಲ್ಲು ಅರ್ಜುನ್ ಅಭಿನಯದ ವೇದಂ ಸಿನಿಮಾ ರಿಲೀಸ್ ಆಗಿತ್ತು. ಆಗ ಹೈದರಾಬಾದ್​ನ ಪಂಜಾಗುಟ್ಟ ಸರ್ಕಲ್​ನಲ್ಲಿ ಅನುಷ್ಕಾ ಶೆಟ್ಟಿಯ ಒಂದು ಪೋಸ್ಟರ್ ಹಾಕಲಾಗಿತ್ತು. ಆ ಪೋಸ್ಟರ್​​ ಹಾಕಿದ ಕೆಲವೇ ಗಂಟೆಗಳಲ್ಲಿ 5 ಌಕ್ಸಿಡೆಂಟ್ಸ್​​ ಆಗಿತ್ತು.

ಈ ಸರಣಿ ಅಪಘಾತ ನಡೆದಿದ್ದು ನೋಡಿದ ಜನರಿಗೆ, ಮೊದ ಮೊದಲು ಅರ್ಥವಾಗಿಲ್ಲ. ಯಾಕೆ ಹೀಗಾಯ್ತು ಅಂತ ಹೇಳುವವರೆಗೂ ಯಾರಿಗೂ ಕಾರಣ ತಿಳಿದಿರಲಿಲ್ಲ. ಆ ಸರ್ಕಲ್​ನಲ್ಲಿ ಈ ರೀತಿಯ ಌಕ್ಸಿಡೆಂಟ್ಸ್​​ ಆಗೋಕೆ ಕಾರಣ ಮತ್ಯಾರು ಅಲ್ಲ ಅನುಷ್ಕ ಶೆಟ್ಟಿ ಅಂತೆ.

publive-image

2010ರಲ್ಲಿ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​, ಮಂಜು ಮನೋಜ್​​ ಮತ್ತು ಅನುಷ್ಕಾ ಶೆಟ್ಟಿ ನಟಿಸಿದ್ದ ‘ವೇದಂ’ ಅನ್ನೋ ಸಿನಿಮಾ ಬಿಡುಗಡೆ ಆಗಿತ್ತು. ವೇದಂ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ಲೈಂಗಿಕ ಕಾರ್ಯಕರ್ತೆ ಸರೋಜ ಅನ್ನೋ ಪಾತ್ರದಲ್ಲಿ ಅಭಿನಯಿಸಿದ್ದರು.

15 ವರ್ಷದ ಹಿಂದೆ ಹೈದರಾಬಾದ್​ನ ಪಂಜಾಗುಟ್ಟ ಸರ್ಕಲ್​ನಲ್ಲಿ ಅನುಷ್ಕಾ ಶೆಟ್ಟಿ ಅವರ ಈ ಪೋಸ್ಟರ್​ ಹಾಕಲಾಗಿತ್ತು. ಇಲ್ಲಿ ಪೋಸ್ಟರ್​ ಮಾಡಿದ್ದೇನಿಲ್ಲ. ಆ ಪೋಸ್ಟರ್​ನಲ್ಲಿ ಅನುಷ್ಕಾ ಶೆಟ್ಟಿ ಅವರು ಹಿಂದಕ್ಕೆ ತಿರುಗಿ ನೋಡುತ್ತಾ, ಒಂದು ಮಾದಕ ನೋಟವನ್ನ ನೋಡಿ ಪಡ್ಡೆ ಹುಡುಗರು ಕಳೆದೋಗಿದ್ದರು.  ಈ ಪೋಸ್​​ ಇರೋ ಪೋಸ್ಟರ್​​ ಅನ್ನ ಅಲ್ಲಿ ಹೋರ್ಡಿಂಗ್​ ಮಾಡಿದ್ದರಿಂದ, ಅಲ್ಲಿ ಓಡಾಡುತ್ತಿದ್ದ ಪ್ರಯಾಣಿಕರು ಅನುಷ್ಕಾ ಶೆಟ್ಟಿ ಅವರ ಪೋಸ್ಟರ್​ ನೋಡ್ತಾ ಹಿಂದೆ ಮುಂದೆ ಗಮನ ಕೊಡದೇ ಌಕ್ಸಿಡೆಂಟ್ಸ್​​ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೈಷ್ಣವಿ ಗೌಡ.. ಶುಭ ಕ್ಷಣಗಳ ಫೋಟೋ ಹಂಚಿಕೊಂಡ ನಟಿ | Photos 

ಶಾಕಿಂಗ್ ವಿಚಾರ​ ಏನಂದ್ರೆ ಈ ಪೊಸ್ಟರ್​ನಿಂದ ಬರೋಬ್ಬರಿ 40 ಅಪಘಾತಗಳಾಗಿವೆ ಎಂದು ಖುದ್ದು ಹೈದರಾಬಾದ್​ ಪೊಲೀಸರೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಏನೇ ಆಗ್ಲೀ ಮೊದಲ 5 ಌಕ್ಸಿಡೆಂಟ್​ ನಡೆದಾಗಲೇ ಈ ಪೋಸ್ಟರ್​ನ್ನ ತೆಗೆದು ಹಾಕಿದ್ರೆ ಆ 35 ಌಕ್ಸಿಡೆಂಟ್ಸ್​ ನಿಲ್ಲಿಸಬಹುದಿತ್ತಲ್ವಾ ಗುರು ಅಂತ ಸೋಷಿಯಲ್​ ಮೀಡಿಯಾದ ಜನ ತಲೆ ಚಚ್ಚಿಕೊಳ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment