/newsfirstlive-kannada/media/post_attachments/wp-content/uploads/2025/07/BHAVANA_RAMANNA.jpg)
ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಟಿ ಹಾಗೂ ಭರತನಾಟ್ಯ ಕಲಾವಿದೆಯಾದ ಭಾವನಾ ರಾಮಣ್ಣ ಅವರು ತಮ್ಮ 40ನೇ ವಯಸ್ಸಿನಲ್ಲಿ ತಾಯಿ ಆಗುತ್ತಿದ್ದಾರೆ. ಐವಿಎಫ್ (In Vitro Fertilization) ಮೂಲಕ ಭಾವನಾ ಅವರು ಈಗ 6 ತಿಂಗಳ ಗರ್ಭಿಣಿಯಾಗಿದ್ದಾರೆ.
ಭಾವನಾ ಅವರು ಸದ್ಯ ತಾಯಿಯಾಗುವ ಖುಷಿಯಲ್ಲಿದ್ದು ಅವರು ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಒಂದು ಮಗುವಿಗೆ ಅಲ್ಲ, ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಭಾವನಾ ಅವರು ತಾಯಿಯಾಗುತ್ತಿರುವುದು ಡಬಲ್ ಖುಷಿ ಆಗಿದೆ ಅಂತೆ ಅವರಿಗೆ. ಭಾವನಾ ಅವರ ಲವ್, ಮದುವೆ ಕುರಿತು ಕೆಲವೊಂದು ವದಂತಿಗಳು ಬರುತ್ತಿದ್ದವು. ಆದರೆ ಇವುಗಳಿಗೆ ಉತ್ತರ ಇಲ್ಲದೇ ಮತ್ತೆ ಸೈಲೆಂಟ್ ಆಗುತ್ತಿದ್ದವು. ಆದರೆ ಈಗ ಎಲ್ಲದಕ್ಕೂ ಭಾವನಾ ಅವರು ಬ್ರೇಕ್ ಹಾಕಿದ್ದು ಒಂಟಿಯಾಗಿಯೇ ತಾಯಿಯಾಗುತ್ತಿದ್ದಾರೆ.
ಇದನ್ನೂ ಓದಿ:ಮೀಟಿಂಗ್ಗೂ ಮುನ್ನ ಸಿಎಂಗೆ ರೈತರಿಂದ ಟಕ್ಕರ್.. ಮಾವು, ಹೂವು, ಬಾಳೆ, ತರಕಾರಿ ಕೊಟ್ಟು ಆಕ್ರೋಶ
ತುಂಬು ಕುಟುಂಬದಲ್ಲಿ ಬೆಳೆದ ನನಗೆ ಈವರೆಗೂ ತಾಯಿ ಆಗುವ ಬಯಕೆ ಇರಲಿಲ್ಲ. ಆದರೆ ಈಗೀಗ ತಾಯಿ ಆಗಬೇಕು ಎನ್ನುವ ಹಂಬಲ ನನ್ನ ಕಾಡುತ್ತಲೇ ಇತ್ತು. ಹೀಗಾಗಿ ಐವಿಎಫ್ ಮೂಲಕ ಈಗ ಗರ್ಭಿಣಿಯಾಗಿದ್ದೇನೆ. ಮಕ್ಕಳ ಬಗ್ಗೆ ತುಂಬಾ ಕುತೂಹಲವಿದೆ. ಅಮ್ಮ ಆಗುವ ಉತ್ಸುಕದಲ್ಲಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಭಾವನಾ ಅವರು ಸ್ಯಾಂಡಲ್ವುಡ್ನಲ್ಲಿ ಭರತನಾಟ್ಯದಲ್ಲಿ ಖ್ಯಾತಿ ಪಡೆದಿದ್ದಾರೆ. ತುಳು ಭಾಷೆಯ ಮೂಲಕ ಸಿನಿ ರಂಗಕ್ಕೆ ಆಗಮಿಸಿದ ಅವರು ಚಂದ್ರಮುಖಿ ಪ್ರಾಣಸಖಿ ಸೇರಿದಂತೆ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದರು. ನೀ ಮುಡಿದ ಕ್ಷಾಮ, ಭಾಗೀರಥಿ ಹಾಗೂ ಮಲ್ಲಿಗೆ ಮೂವಿಗಳಿಗಾಗಿ 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವುದು ಅವರ ಶ್ರೇಷ್ಠ ಸಾಧನೆ ಆಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ