/newsfirstlive-kannada/media/post_attachments/wp-content/uploads/2025/07/bhavya-gowda.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಸಖತ್ ಖುಷಿಯಲ್ಲಿದ್ದಾರೆ. ಬಿಗ್​ಬಾಸ್ 11ರ ಬಳಿಕ ಭವ್ಯಾ ಗೌಡ ಕರ್ಣ ಸೀರಿಯಲ್​ನಲ್ಲಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ನಟಿ ಭವ್ಯಾ ಗೌಡ ಕಿವಿ ಚುಚ್ಚಿಸಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2025/07/bhavya-gowda2.jpg)
ಹೌದು, ಸೀರಿಯಲ್​ ಶೂಟಿಂಗ್​ ಬ್ಯುಸಿ ನಡುವೆಯೂ ನಟಿ ಭವ್ಯಾ ಗೌಡ ಕಿವಿ ಚುಚ್ಚಿಸಿಕೊಳ್ಳುವ ಸಾಹಸ ಮಾಡಿದ್ದಾರೆ. ಈ ವಿಡಿಯೋ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಿಲ್ಕ್ ಸೀರೆಯನ್ನು ತೊಟ್ಟುಕೊಂಡು ಭವ್ಯಾ ಗೌಡ ಕಿವಿ ಚುಚ್ಚಿಸಿಕೊಳ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/07/bhavya-gowda1.jpg)
ಕೈ ಮುಗಿದು, ಕಣ್ಣು ಮುಚ್ಚಿರುವ ಅವರು ಒಂದು ಬುಲೆಟ್ ಬೀಳ್ತಿದ್ದಂತೆ ಅಯ್ಯೋ, ಅಮ್ಮ ಅಂತ ಕಿರುಚಿದ್ದಾರೆ. ಮತ್ತೊಂದು ಕಿವಿ ಚುಚ್ಚುವಾಗಲೂ ಭವ್ಯಾ ಗೌಡ ತಡಕಾಡಿದ್ದಾರೆ. ಆದ್ರೆ ಹೊಸ ಲುಕ್ ನಲ್ಲಿ ಭವ್ಯಾ ಗೌಡ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ವಿಡಿಯೋ ವೈರಲ್​ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು, ಅಕ್ಕ ಚೆನ್ನಾಗಿ ಕಾಣ್ತಾ ಇದ್ದೀರಾ ಅಂತ ಕಾಮೆಂಟ್ಸ್ ಹಾಕಿದ್ದಾರೆ.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us