/newsfirstlive-kannada/media/post_attachments/wp-content/uploads/2025/05/bhoomi-shetty.jpg)
ಡೇರಿಂಗ್, ಡ್ಯಾಶಿಂಗ್ ನಟಿಯರಲ್ಲಿ ಭೂಮಿ ಶೆಟ್ಟಿ ಟಾಪ್ ಸ್ಥಾನದಲ್ಲಿನಲ್ಲಿ ನಿಲ್ತಾರೆ. ಟಾಮ್ ಬಾಯ್ ವ್ಯಕ್ತಿತ್ವದ ನಟಿ ಹೊಸ ಹೊಸ ಅಡ್ವೆಂಚರ್ಗಳನ್ನ ಮಾಡ್ತಾನೆ ಇರ್ತಾರೆ. ಬೈಕ್ ಓಡಿಸೋದ್ರಲ್ಲಿ ಹುಡುಗನ್ನೇ ಮೀರಿಸೋ ಭೂಮಿ ಮತ್ತೊಂದು ಹೊಸ ಸಾಹಸ ಮಾಡಿದ್ದಾರೆ.
ಇದನ್ನೂ ಓದಿ:ಭಾರತದ ಗಡಿಯಲ್ಲಿ ಸಂಪೂರ್ಣ ಗೋಧಿ ಕಟಾವು ಮುಗಿಸಿದ ರೈತರು; ಪಾಕ್‌ಗೆ ಮತ್ತೊಂದು ಸ್ಪಷ್ಟ ಸೂಚನೆ!
ಕುಂದಾಪುರದ ಬೆಡಗಿಗೆ ಕಡಲ ತೀರ ಹೊಸದಲ್ಲ. ಅಲೆಗಳ ಜೊತೆಗೆ ಆಟ ಆಡ್ಕೊಂಡೆ ಬೆಳಿದಿರ್ತಾರೆ. ಪಕ್ಕದ ಉಡುಪಿ ಬೀಚು, ಆ ಮರಳು ಯಾವುದು ಹೊಸದಲ್ಲ. ಹೊಸದು ಅನ್ಸತಿರೋದು ಭೂಮಿ ಮಾಡಿರೋ ಸಹಾಸ. ಮಂಗಳೂರಿನ ಮುಲ್ಕಿ ಬೀಚ್ನಲ್ಲಿ ಸರ್ಫ್ ರೈಡ್ ಮಾಡಿದ್ದಾರೆ.
ಅಲೆಗಳ ರಭಸವನ್ನ ನಾಜೂಕಾಗಿ ಹ್ಯಾಂಡಲ್ ಮಾಡಿ, ಕೊನೆಗೂ ಕನಸು ನನಸು ಮಾಡಿಕೊಂಡಿದ್ದಾರೆ ಭೂಮಿ. ಈ ಸಾಹಸ ಕೈಗೆತ್ತಿಕೊಳ್ಳೋ ಮೊದಲು 5 ದಿನಗಳ ತಾಯಾರಿ ಮಾಡಿದ್ರು. ಸರ್ಫರ್ಗಳ ಸಹಾಯದಿಂದ ಪ್ರತಿದಿನ ಪ್ರ್ಯಾಕ್ಟಿಸ್ ಮಾಡಿದ ನಟಿ, ವಿಶೇಷವಾದ ಅನುಭವವನ್ನ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಸರ್ಫಿಂಗ್ ಅಂದ್ರೇ ಇದೊಂದು ಸಾಹಸ ಕ್ರೀಡೆ. ನುರಿತ ತಜ್ಞರ ಸಹಾಯದಿಂದ ನಾಜೂಕಿನ ಅಲೆಗಳ ಮೇಲೆ ರೈಡ್ ಮಾಡೋದು. ಹೆಚ್ಚಾಗಿ ಏಪ್ರಿಲ್, ಮೇ ತಿಂಗಳಲ್ಲಿ ಸರ್ಫಿಂಗ್ ಮಾಡೋಕೆ ಅವಕಾಶ ಇರುತ್ತೆ. ಮಂಗಳೂರಿನ ಬೀಚ್ಗಳು ಸರ್ಫರ್ಗಳಿಗೆ ಸ್ವರ್ಗ. ಒಟ್ಟಾರೆಯಾಗಿ ಭೂಮಿ ಶೆಟ್ಟಿ ಲೈಫ್ನ ಬೋರಿಂಗ್ ಅನ್ನದೇ, ಪ್ರಕೃತಿ ನಡುವೆ ಎಂಜಾಯ್ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ