ನಿರ್ದೇಶಕ ಗುರುಪ್ರಸಾದ್ ಬಗ್ಗೆ ಬಿಗ್​ಬಾಸ್ ಮಾಜಿ ಸ್ಪರ್ಧಿ ಕಣ್ಣೀರು.. ವಿಡಿಯೋದಲ್ಲಿ ಅಳುತ್ತಲೇ ನಟಿ ಹೇಳಿದ್ದು ಏನು?

author-image
Bheemappa
Updated On
ನಿರ್ದೇಶಕ ಗುರುಪ್ರಸಾದ್ ಬಗ್ಗೆ ಬಿಗ್​ಬಾಸ್ ಮಾಜಿ ಸ್ಪರ್ಧಿ ಕಣ್ಣೀರು.. ವಿಡಿಯೋದಲ್ಲಿ ಅಳುತ್ತಲೇ ನಟಿ ಹೇಳಿದ್ದು ಏನು?
Advertisment
  • ಕನ್ನಡ ಚಿತ್ರರಂಗದ ನಿರ್ದೇಶಕ ಗುರುಪ್ರಸಾದ್ ಬಗ್ಗೆ ನಟಿ ಭಾವುಕ
  • ನಟಿ ಬದುಕಿಗೆ ಮತ್ತೊಂದು ಹೊಸ ದಾರಿ ಕಲ್ಪಿಸಿದ್ದ ಗುರುಪ್ರಸಾದ್
  • ಜೀವನದಲ್ಲಿ ಬೇಸತ್ತು ಕುಳಿತ್ತಿದ್ದಾಗ ಕರೆದು ಕೆಲಸ ಕೊಟ್ಟಿದ್ದರು

ಬೆಂಗಳೂರು: ಕನ್ನಡ ಚಿತ್ರಂರಗದ ನಿರ್ದೇಶಕ ಗುರುಪ್ರಸಾದ್ ಅವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಚೈತ್ರಾ ಕೊಟೂರು ಅವರು ನೋವು ತೋಡಿಕೊಂಡಿದ್ದಾರೆ. ಗುರುಪ್ರಸಾದ್ ಸರ್ ಇಲ್ಲ ಎನ್ನುವುದು ತುಂಬಾ ನೋವಾಗುತ್ತಿದೆ, ಕಷ್ಟವಾಗುತ್ತಿದೆ, ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೊಂದು ವಿಷ್ಯ ಹಂಚಿಕೊಳ್ಳಬೇಕು ಎಂದು ಕಣ್ಣೀರು ಹಾಕುತ್ತಲೇ ನಟಿ ಚೈತ್ರಾ ಮಾತಾಡಿದ್ದಾರೆ.

ಇದನ್ನೂ ಓದಿ:ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ; ಡೈರೆಕ್ಟರ್​ ಗುರುಪ್ರಸಾದ್​​ ಪಂಚಭೂತಗಳಲ್ಲಿ ಲೀನ!

ಫೇಸ್​ಬುಕ್​ನಲ್ಲಿ ವಿಡಿಯೋ ಶೇರ್ ಮಾಡಿರುವ ನಟಿ ಚೈತ್ರಾ ಕೊಟೂರು ಗಳ.. ಗಳ ಎಂದು ಕಣ್ಣೀರು ಹಾಕಿದ್ದಾರೆ. ಅಳುತ್ತಲೇ ಮಾತನಾಡಿರುವ ಅವರು, ಗುರುಪ್ರಸಾದ್ ಸರ್ ತುಂಬಾ ಬುದ್ಧಿವಂತರು. ಅವರ ಬಗ್ಗೆ ಕೆಲವರು ಒಳ್ಳೆಯದು ಮಾತನಾಡುತ್ತಾರೆ, ಕೆಟ್ಟದ್ದು ಮಾತನಾಡುತ್ತಾರೆ. ಆದರೆ ನನಗೆ ಇದ್ಯಾವುದು ಗೊತ್ತಿಲ್ಲ. ಸಮಾಜದ ಕೆಟ್ಟದ್ದು, ಒಳ್ಳೆಯದ್ದು ಎನ್ನುವುದು ಗುರುತಿಸುವುದು ಕೆಲವೊಬ್ಬರಲ್ಲಿ ಇರುತ್ತೆ. ಒಳ್ಳೆಯದು, ಕೆಟ್ಟದ್ದು ಪರ-ವಿರೋಧ ನನಗೆ ಗೊತ್ತಿಲ್ಲ. ಅವರನ್ನ ಕಳೆದುಕೊಂಡು 2 ದಿನ ಆಗಿದೆ. ಇದನ್ನು ನಾನು ಸ್ವೀಕರಿಸುವುದಕ್ಕೂ ಆಗಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಗುರುಪ್ರಸಾದ್ ಯಾವ್ಯಾವ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು..?

publive-image

ನಾನು ತುಂಬಾ ನೋವಲ್ಲಿ ಇದ್ದಾಗ, ನನ್ನ ಜೀವನದ ಕೆಲ ಘಟನೆಗಳಿಂದ ಬೇಸತ್ತಿದ್ದಾಗ ಕೆಲಸದ ಕಡೆಗೆ ಗಮನ ಕೊಡದೇ ಇದ್ದೆ. ನನ್ನ ಪಾಡಿಗೆ ನಾನು ಇದ್ದೆ. ಆದರೆ ನನ್ನನ್ನು ಮೊದಲ ಬಾರಿಗೆ ಕೆಲಸಕ್ಕೆಂದು ಕರೆದು, ಕೆಲಸ ಮಾಡು ಪುಟ್ಟಿ ನೀನು, ಎಲ್ಲ ತಲೆಯಿಂದ ತೆಗೆದು ಬಿಡು. ಅದನ್ನೆಲ್ಲ ಯೋಚನೆ ಮಾಡಬಾರದು. ನೀನು ಬರಹಗಾರ್ತಿ, ಕೆಲಸ ಮಾಡಬೇಕು. ಬದುಕು ದೊಡ್ಡದಾಗಿದೆ ಅಂತ ಹೇಳಿದ್ರು. ಅವರು ಸುಮ್ಮನೇ ನನ್ನನ್ನು ಮೋಟಿವೇಷನ್ ಮಾಡಲಿಲ್ಲ. ಅವರು ನನ್ನನ್ನು ಕೆಲಸದಲ್ಲಿ ಇನ್ವಾಲ್ ಮಾಡಿಕೊಂಡು ಒಂದು ಕೆಲಸ ಕೂಡ ಕೊಟ್ಟರು ಎಂದು ಹೇಳುತ್ತಾ ಚೈತ್ರಾ ಅವರು ಕಂಬನಿ ಮಿಡಿದಿದ್ದಾರೆ.

ಮತ್ತೆ ಕೆಲಸದಲ್ಲಿ ಬೆರೆಯೋ ತರ, ಮತ್ತೆ ಬೆಳೆಯುವ ತರ ಪ್ರೋತ್ಸಾಹ ಕೊಟ್ಟಿದ್ದು ಗುರುಪ್ರಸಾದ್ ಸರ್. ಯಾಕೋ ಇದೆಲ್ಲ ತುಂಬಾ ನೆನಪಾಗುತ್ತಿದೆ. ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ತುಂಬಾ ನೋವಾಗುತ್ತಿದೆ, ಕಷ್ಟವಾಗುತ್ತಿದೆ. ಇದೊಂದು ವಿಷ್ಯ ಹಂಚಿಕೊಳ್ಳಬೇಕು ಎಂದು ಅನಿಸಿತು. ಮಾತನಾಡುವವರು ಸಾಕಷ್ಟು ಜನ ಇರುತ್ತಾರೆ. ಆದರೆ ಅದನ್ನ ಸಕಾರ ಮಾಡುವುದು ಕೆಲವರು ಮಾತ್ರ. ಅದನ್ನು ಗುರುಪ್ರಸಾದ್ ಸರ್ ಮಾಡಿದರು. ಸೋಲು, ಗೆಲುವು ಎಲ್ಲವೂ ಬದುಕಿನಲ್ಲಿ ಇರುತ್ತೆ. ನಾವೆಲ್ಲರೂ ಅವರನ್ನು ಮಿಸ್ ಮಾಡಿಕೊಂಡಿದ್ದೇವೆ. ಅವರ ಜೊತೆ ಮಾತನಾಡಿ ಸಮಯ ಕಳೆದವರು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುತ್ತಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment