/newsfirstlive-kannada/media/post_attachments/wp-content/uploads/2025/02/chandanak-gowda.jpg)
ಕಿರುತೆರೆಯಲ್ಲಿ ಟಾಪ್ ಮೋಸ್ಟ್ ವಾಚಿಂಗ್ ಸೀರಿಯಲ್ಸ್ಗಳಲ್ಲಿ ಜೀ ವಾಹಿನಿಯ ಅಮೃತಧಾರೆ ಕತೆ ಕೂಡ ಒಂದು. ಅಮೃತಧಾರೆ ಧಾರಾವಾಹಿಯ ಕತೆ ವೀಕ್ಷಕರಿಗೆ ತುಂಬಾನೇ ಇಷ್ಟವಾಗ್ತಿದೆ. ಆದ್ರೆ ಇದರ ಮಧ್ಯೆ ಅಮೃತಧಾರೆ ಸೀರಿಯಲ್ನಿಂದ ಒಬ್ಬರಾದ ಮೇಲೆ ಒಬ್ಬರು ಕಲಾವಿದರು ಆಚೆ ಬರುತ್ತಿದ್ದಾರೆ.
ಇದನ್ನೂ ಓದಿ:ಕೆಂಪು ಸೀರೆಯಲ್ಲಿ ಅಪ್ಸರೆಯಂತೆ ಮಿಂಚಿದ ರಾಮಾಚಾರಿ ಸೀರಿಯಲ್ ನಟಿ; ದೇವಿಕಾ ಭಟ್ ಬ್ಯೂಟಿಗೆ ಫ್ಯಾನ್ಸ್ ಫಿದಾ!
ಈ ಹಿಂದೆ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ, ಜೀವನ ಹಾಗೂ ಮಲ್ಲಿ ಪಾತ್ರಧಾರಿಗಳು ಆಚೆ ಬಂದಿದ್ದರು. ಇದೀಗ ಮತ್ತೊಬ್ಬ ಪಾತ್ರಧಾರಿ ಆಚೆ ಬಂದ್ರಾ ಎಂಬ ಅನುಮಾನ ಮೂಡಿದೆ. ಸದಾ ಗೌತಮ್ ಎರಡನೇ ತಾಯಿ ಶಕುಂತಲಾ ಜೊತೆಗೆ ಇರುತ್ತಿದ್ದ ಅಶ್ವಿನಿ ಪಾತ್ರಧಾರಿ ಆಚೆ ಬಂದು ಬಿಟ್ರಾ ಅಂತ ವೀಕ್ಷಕರಲ್ಲಿ ಅನುಮಾನ ಮೂಡಿದೆ. ಸಾಕಷ್ಟು ದಿನಗಳಿಂದ ಗೌತಮ್ ಮನೆಯಲ್ಲಿ ಅಶ್ವಿನಿ ಪಾತ್ರ ಪ್ರಸಾರವಾಗಿಲ್ಲ. ಅಶ್ವಿನಿ ತಂಗಿ ಮಹಿಮಾ ಗೃಹ ಪ್ರವೇಶದ ಸಂದರ್ಭದಲ್ಲೂ ಅಶ್ವಿನಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅಶ್ವಿನಿ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಟಿ ಚಂದನಾ ಸೀರಿಯಲ್ನಿಂದ ಆಚೆ ಬಂದರಾ ಎಂದು ಯಾವುದೇ ಮಾಹಿತಿ ಕೊಟ್ಟಿಲ್ಲ.
ಸದ್ಯ ಕನ್ನಡದ ಅಂತರಪಟ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಚಂದನಾ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಬಾಯ್ಸ್ v/s ಗರ್ಲ್ಸ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಕನ್ನಡತಿ, ಅಂತರಪಟ ಧಾರಾವಾಹಿಯಲ್ಲಿ ಕೂಟ ನಟಿಸುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ