/newsfirstlive-kannada/media/post_attachments/wp-content/uploads/2025/05/deepika-das6.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಖ್ಯಾತಿಯ ದೀಪಿಕಾ ದಾಸ್​ ಅವರ ನಿರ್ಧಾರಕ್ಕೆ ಎಲ್ಲರೂ ಶಾಕ್​ ಆಗಿದ್ದಾರೆ. ಕನ್ನಡದ ನಟಿ, ಬಿಗ್​ಬಾಸ್​ ಮಾಜಿ ಸ್ಪರ್ಧಿ ದಿಢೀರ್​ ಅಂತ ಸೋಷಿಯಲ್​ ಮೀಡಿಯಾದಿಂದ ದೂರ ಆಗೋದಕ್ಕೆ ಮುಂದಾಗಿದ್ದಾರೆ.
/newsfirstlive-kannada/media/post_attachments/wp-content/uploads/2024/07/DEEPIKA_DAS_1-1.jpg)
ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಸದ್ಯ ಸೋಷಿಯಲ್ ಮೀಡಿಯಾದಿಂದ ದೂರ ಉಳಿಯೋದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಖುದ್ದು ದೀಪಿಕಾ ದಾಸ್ ಅವರೇವ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡಿಕೊಂಡು ಫ್ಯಾನ್ಸ್​ಗೆ ಶಾಕ್​ ಕೊಟ್ಟಿದ್ದಾರೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಭಾರೀ ಮಳೆ.. ಇವತ್ತು, ನಾಳೆ ಈ ಜಿಲ್ಲೆಯ ಶಾಲೆಗೆ ರಜೆ ಘೋಷಣೆ
/newsfirstlive-kannada/media/post_attachments/wp-content/uploads/2024/09/deepika-das3.jpg)
ನಟಿ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಬೆಡಗಿ. ಆಗಾಗ ಒಂದಲ್ಲ ಒಂದು ಹೊಸ ಫೋಟೋಶೂಟ್​ಗಳು ಮತ್ತು ರೀಲ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ದೀಪಿಕಾ ದಾಸ್ ಸದಾ ಸಂಪರ್ಕದಲ್ಲಿರುತ್ತಿದ್ದರು. ಆದ್ರೇ ದಿಢೀರ್ ಅಂತ ನಟಿ ‘ನಾನು ಸ್ವಲ್ಪ ಸಮಯದವರೆಗೆ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ, ಧನ್ಯವಾದಗಳು’ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
View this post on Instagram
ನಟಿ ದೀಪಿಕಾ ದಾಸ್ ಅವರ ಈ ದಿಢೀರ್ ನಿರ್ಧಾರಕ್ಕೆ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೇ ಈ ನಿರ್ಧಾರಕ್ಕೆ ಕಾರಣವೇನು? ಸೋಶಿಯಲ್ ಮೀಡಿಯಾದಿಂದ ನಟಿ ದೀಪಿಕಾ ದಾಸ್ ಬ್ರೇಕ್ ತೆಗೆದುಕೊಳ್ಳುತ್ತಿರುವುದು ಯಾಕೆ? ಅಂತೆಲ್ಲಾ ಅವರ ಫ್ಯಾನ್ಸ್ ಕಾಮೆಂಟ್ಸ್​ ಹಾಕುವ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us